Bride Bridegroom Fighting Video : ಮದುವೆ ಅಂದರೆ ಅಲ್ಲಿ ಎಲ್ಲಾ ರೀತಿಯ ಭಾವನೆಗಳು ಮೇಳೈಸುತ್ತಿರುತ್ತವೆ. ಸಂತೋಷ ಆತಂಕ, ದುಗುಡ ಹೀಗೆ ಪ್ರತಿ ಕ್ಷಣವೂ ಒಂದು ರೀತಿಯ ಪರೀಕ್ಷೆ ಇದ್ದಂತೆ. ಕೆಲವರಿಗೆ ತಮ್ಮ ಮದುವೆಯ ಪ್ರತೀ ಕ್ಷಣವನ್ನು ಕೂಡಾ ಸುಂದರವನ್ನಾಗಿಸಬೇಕೆಂಬ ತುಡಿತ. ಇದಕ್ಕಾಗಿ ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಕೆಲವೊಮ್ಮೆ ವಿಶಿಷ್ಟ ರೀತಿಯ ಎಂಟ್ರಿಯಿಂದ ಎಲ್ಲರ ಗಮನ ಸೆಳೆದರೆ, ಇನ್ನು ಕೆಲವೊಮ್ಮೆ ಮನೆ ಮಂದಿ ವಧು ವರರಿಗೆ ನೀಡುವ ಸರ್ಪೈಸ್ ನೀಡಿ ಬೆರಗಾಗಿಸುತ್ತಾರೆ. ಇನ್ನು ಕೆಲವು ಮದುವೆಯಲ್ಲಿ ನಡೆಯುವ ವಿಚಿತ್ರ ಘಟನೆಗಳು ಹುಬ್ಬೇರಿಸಿ ಬಿಡುತ್ತವೆ.
ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟ. ಇಲ್ಲಿ ನಡೆಯುವ ಸಣ್ಣ ತಪ್ಪು ಕೂಡಾ ಜೀವನದುದ್ದಕ್ಕೂ ಕಾಡುತ್ತದೆ. ಮದುವೆ ಎಂದ ತಕ್ಷಣ ವಧು ಆಗಲಿ ವರ ಆಗಲಿ ಸ್ವಲ್ಪ ನಯ ನಾಜೂಕಿನಿಂದ ಇರುತ್ತಾರೆ. ಇದು ಸಹಜ ಕೂಡಾ. ಆದರೆ ಕೆಲವೊಮ್ಮೆ ಕೆಲವು ಜೋಡಿಗಳನ್ನು ನೋಡುವಾಗ ಬೆರಗಾಗಿ ಬಿಡುತ್ತೇವೆ.
ಇದನ್ನೂ ಓದಿ : WATCH : ವಧುವನ್ನು ನೋಡಿ ತಲೆಕೆಳಗಾಗಿ ನಿಂತ ವರ, ವಿಡಿಯೋ ವೈರಲ್
ಇಲ್ಲೊಂದು ಮದುವೆಯ ವಿಡಿಯೋ ಇದೆ. ಈ ವಿಡಿಯೋ ನೋಡಿದಾಗ ಇಲ್ಲಿ ಮದುವೆ ನಡೆಯುತ್ತಿದೆಯೋ ಅಥವಾ ಕುಸ್ತಿ ನಡೆಯುತ್ತಿದೆಯೋ ಎನ್ನುವ ಸಂದೇಹ ಮೂಡುತ್ತದೆ. ಮದುವೆ ಶಾಸ್ತ್ರಗಳು ನಡೆಯುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಮೊದಲಿಗೆ ಎಲ್ಲವೂ ಸರಿಯಾಗಿಯೇ ಇದ್ದಂತೆ ಕಾಣಿಸುತ್ತದೆ. ಇನ್ನೇನು ಸಪ್ತಪದಿ ನಡೆಯಬೇಕು ಅಷ್ಟೇ. ವರ ತನ್ನ ವಧುವಿನ ಕೆನ್ನೆಯನ್ನು ಸವರಿ ಬಿಡುತ್ತಾನೆ. ವರ ತನ್ನ ಕೆನ್ನೆಯನ್ನು ಸವರಿದ್ದೇ ತಡ, ಅದೇನಾಯಿತೋ ವಧುವಿಗೆ ಮದುವೆ ಮಂಟಪದಲ್ಲಿಯೇ ಶುರುವಾಗುತ್ತದೆ ಕುಸ್ತಿ. ವಧು ವರನ ಈ ವರ್ತನೆ ನೋಡಿ ಮನೆ ಮಂದಿಯೆಲ್ಲಾ ಕಕ್ಕಾಬಿಕ್ಕಿಯಾಗಿದ್ದಾರೆ. ಇಬ್ಬರನ್ನು ತಡೆಯುವ ಪ್ರಯತ್ನವೂ ನಡೆದಿದೆ. ಆದರೆ ಸೇರಿಗೆ ಸವ್ವಾ ಸೇರು ಎನ್ನುವ ಹಾಗೆ ಇಬ್ಬರೂ ಕಾದಾಟ ಮುಂದುವರೆಸಿದ್ದಾರೆ.
ಇದನ್ನೂ ಓದಿ : Viral video : ನಾಗರಹಾವು ಕಾದು ಕುಳಿತಿದ್ದು ತನ್ನ ಶಿಕಾರಿಗಾಗಿ! ಆದರೆ ಎದುರಾದದ್ದು ಪರಮ ವೈರಿ
ಈ ವೀಡಿಯೊವನ್ನು viralclips ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ಕ್ಲಿಪ್ ನೇಪಾಳಿ ಜೋಡಿಯ ಮದುವೆಯದ್ದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.