Poisonous Alcohol : ಬಿಹಾರದಲ್ಲಿ ನಿಷೇಧದ ಕಾನೂನಿನ ಹೊರತಾಗಿಯೂ, ಕಳೆದ ಮೂರು ದಿನಗಳಲ್ಲಿ ವಿಷಕಾರಿ ಮದ್ಯ ಸೇವಿಸಿದ ಹಿನ್ನಲೆಯಲ್ಲಿ ಬಿಹಾರದ ಮುಜಫರ್ಪುರ ಜಿಲ್ಲೆಯಲ್ಲಿ ಐದು ಜನರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಕತ್ರ ಪೊಲೀಸ್ ಠಾಣೆ ಪ್ರದೇಶದ ದರ್ಗಾ ಗ್ರಾಮದಲ್ಲಿ ಐದು ಜನರು ಮದ್ಯ (Alcohol) ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಸಂತ್ರಸ್ತರ ಕುಟುಂಬದ ಸದಸ್ಯ ಖೇಲೋವನ್ ಮಾಂಜಿ ಶನಿವಾರ ಹೇಳಿದ್ದಾರೆ.
ಇದನ್ನೂ ಓದಿ - ಶೇ. 100ರಷ್ಟು ಸೆಸ್ ಹೊರತಾಗಿಯೂ ದುಬಾರಿಯಾಗುವುದಿಲ್ಲ Alcohol, ಹೇಗೆ ಗೊತ್ತಾ!
ಬಿಜೆಪಿ ಶಾಸಕ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಸಹ ಮಾಂಜಿಯವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಆದರೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಯಂತ್ ಕಾಂತ್ ಅವರು ಗ್ರಾಮದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು. ಆದರೆ ವಿಷಕಾರಿ ಮದ್ಯ ಸೇವಿಸುವುದರಿಂದಲೇ ಈ ಸಾವು ಸಂಭವಿಸಿದೆ ಎಂದು ಹೇಳಲು ನಿರಾಕರಿಸಿದರು.
ಆದಾಗ್ಯೂ, ಘಟನೆಯ ನಂತರ ಕತ್ರ ಪೊಲೀಸ್ ಠಾಣೆ ಅಧಿಕಾರಿ ಸಿಕಂದರ್ ಕುಮಾರ್ ಅವರ ಪೊಲೀಸ್ ಅಧಿಕಾರಿಯನ್ನು ಎಸ್‌ಎಸ್‌ಪಿ ಅಮಾನತುಗೊಳಿಸಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕಾಂತ್ ಹೇಳಿದ್ದಾರೆ.
ಇದನ್ನೂ ಓದಿ - ಈ ರಾಜ್ಯದಲ್ಲಿ ಇಂದು ಮಧ್ಯರಾತ್ರಿಯಿಂದ ಅಗ್ಗವಾಗಲಿದೆ Petrol-Diesel, Alcohol
ಜಿಲ್ಲಾಧಿಕಾರಿ ಪ್ರಣಬ್ ಕುಮಾರ್, ಎಸ್‌ಎಸ್‌ಪಿ ಮತ್ತು ಇತರ ಹಿರಿಯ ಅಧಿಕಾರಿಗಳು ಶನಿವಾರ ಗ್ರಾಮವನ್ನು ತಲುಪಿ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾದರು. ಘಟನೆಯ ಬಗ್ಗೆ ಮಾಹಿತಿ ಪಡೆಯಲು ಬಿಜೆಪಿ ಮತ್ತು ಆರ್‌ಜೆಡಿ ಮುಖಂಡರು ಕೂಡ ಗ್ರಾಮಕ್ಕೆ ತೆರಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.