Universityಗಳಲ್ಲಿ ಆನ್ಲೈನ್ ವಿದ್ಯಾಭ್ಯಾಸ, 12ನೇ ತರಗತಿಯವರೆಗೆ 'One Class One Channel' ಆರಂಭ

ಇದರ ಅಡಿ PM e-Vidyaa ಕಾರ್ಯಕ್ರಮವನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ಈ ಕಾರ್ಯಕ್ರಮವು ಡಿಜಿಟಲ್ ಅಥವಾ ಆನ್ಲೈನ್ ಶಿಕ್ಷಣಕ್ಕಾಗಿ ಇರಲಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

Last Updated : May 17, 2020, 04:30 PM IST
Universityಗಳಲ್ಲಿ ಆನ್ಲೈನ್ ವಿದ್ಯಾಭ್ಯಾಸ, 12ನೇ ತರಗತಿಯವರೆಗೆ 'One Class One Channel' ಆರಂಭ title=

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಪ್ಯಾಕೇಜಿನ ಕೊನೆಯ ಮತ್ತು ಐದನೇ ಕಂತುಗಳನ್ನು ಭಾನುವಾರ ಪ್ರಕಟಿಸಿದ್ದಾರೆ. ಇದರಲ್ಲಿ ಒಟ್ಟು 7 ಹೆಜ್ಜೆಗಳನ್ನು ಇಡಲು ಸರ್ಕಾರ ನಿರ್ಧಿರಿಸಿದೆ ಈ ಹಂತದಲ್ಲಿ ತಂತ್ರಜ್ಞಾನ ಚಾಲಿತ ಶಿಕ್ಷಣಕ್ಕೂ ಕ್ರಮ ಕೈಗೊಳ್ಳಲಾಗಿದೆ. ಇದರ ಅಡಿಯಲ್ಲಿ ಪಿಎಂ ಇ-ವಿದ್ಯಾ ಕಾರ್ಯಕ್ರಮವನ್ನು ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ವಿತ್ತ ಸಚಿವರು ಘೋಷಿಸಿದ್ದಾರೆ. ಈ ಕಾರ್ಯಕ್ರಮವು ಡಿಜಿಟಲ್ ಅಥವಾ ಆನ್‌ಲೈನ್ ಶಿಕ್ಷಣಕ್ಕಾಗಿ ಇರಲಿದೆ ಎಂದೂ ಕೂಡ ಅವರು ಸ್ಪಷ್ಟಪಡಿಸಿದ್ದಾರೆ.

ಶಾಲೆಗಳಿಗಾಗಿ 'ದೀಕ್ಷಾ' ಪ್ರೋಗ್ರಾಮ್ ಬಿಡುಗಡೆ
ಇದರ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲಾ ಶಿಕ್ಷಣಕ್ಕಾಗಿ ದೀಕ್ಷಾ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ, ಎಲ್ಲಾ ವರ್ಗಗಳಿಗೆ ಇ-ಕಂಟೆಂಟ್  ಮತ್ತು ಕ್ಯೂಆರ್ ಕೋಡ್ ಇರಲಿದ್ದು, ಇದು ಒನ್ ನೇಷನ್, ಒನ್ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿರಲಿದೆ. ಇದಲ್ಲದೆ 1 ರಿಂದ 12 ನೇ ತರಗತಿಗಳವರೆಗೆ ಪ್ರತಿ ತರಗತಿಗೆ ಒಂದು ಗುರುತಿಸಲಾದ ಟಿವಿ ಚಾನೆಲ್ ಚಾನೆಲ್ ಇರಲಿದೆ. ಈ ಕಾರ್ಯಕ್ರಮದಲ್ಲಿ ರೇಡಿಯೋ, ಪಾಡ್‌ಕಾಸ್ಟ್‌ಗಳು, ಸಮುದಾಯ ರೇಡಿಯೊ ಸೌಲಭ್ಯಗಳನ್ನೂ ವ್ಯಾಪಕವಾಗಿ ಬಳಸಲಾಗುತ್ತದೆ. ಇದರಲ್ಲಿ, ದಿವ್ಯಾಂಗರಿಗಾಗಿ ವಿಶೇಷ ಇ-ವಿಷಯವನ್ನು ಸಹ ತಯಾರಿಸಲಾಗುತ್ತದೆ. ಇದರ ಅಡಿಯಲ್ಲಿ ಅಗ್ರ 100 ವಿಶ್ವವಿದ್ಯಾಲಯಗಳಿಗೆ ಮೇ 30 ರವರೆಗೆ ಆನ್‌ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಅವಕಾಶವಿರುತ್ತದೆ.

ನೂತನ ರಾಷ್ಟ್ರೀಯ ಸಿಲೆಬಸ್ ಹಾಗೂ ಶೈಕ್ಷಣಿಕ ಫ್ರೇಮ್ ವರ್ಕ್ ಜಾರಿಗೆ ಬರಲಿದೆ 
'ಪಿಎಂ ಇ-ವಿದ್ಯಾ' ಕಾರ್ಯಕ್ರಮದ ಹೊರತಾಗಿ 'ಮನೋದರ್ಪಣ್' ಹೆಸರಿನ ಕಾರ್ಯಕ್ರಮವನ್ನೂ ಕೂಡ ಆರಂಭಿಸಲಾಗುತ್ತಿದೆ. ಇದು ವಿಶೇಷವಾಗಿ ವಿದ್ಯಾರ್ಥಿಗಳು, ಅವರ ಶಿಕ್ಷಕರು ಹಾಗೂ ಪೋಷಕರ ಮಾನಸಿಕ ಬೆಂಬಲ ಹೆಚ್ಚಿಸಲು ಇರಲಿದೆ. ಅವರ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕಾಗಿ ಇದನ್ನು ಆದಷ್ಟು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ವಿತ್ತ ಸಚಿವರು ಹೇಳಿದ್ದಾರೆ. ಇತರ ಜೊತೆಗೆ ಬಾಲ್ಯ, ಶಾಲೆಗಳು ಹಾಗೂ ಶಿಕ್ಷಕರಿಗಾಗಿ ಹೊಸರಾಷ್ಟ್ರೀಯ ಪಠ್ಯಕ್ರಮ ಮತ್ತು ಶೈಕ್ಷಣಿಕ ಚೌಕಟ್ಟನ್ನು ಅನ್ನೂ ಸಹ ಪ್ರಾರಂಭಿಸಲಾಗುತ್ತಿದೆ. ಇದು ಜಾಗತಿಕ ಮತ್ತು 21ನೇ ಶತಮಾನದ ಕೌಶಲ್ಯದ ಅಗತ್ಯತೆಗಳನ್ನು ಸಂಯೋಜಿಸಲಿದೆ.

ಈ ಎಲ್ಲ ಕ್ರಮಗಳನ್ನು ಹೊರತುಪಡಿಸಿ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಘೋಷಣೆಯನ್ನು ಮಾಡಲಾಗಿದೆ. ಅದುವೇ 'ನ್ಯಾಷನಲ್ ಫೌಂಡೇಶನ್ ಲಿಟ್ರಸಿ ಅಂಡ್ ನ್ಯೂಮ್ರೋಸಿ ಮಿಷನ್' ಜಾರಿಗೆ ತರಲಾಗುತ್ತಿದೆ. ಇದರ ಸಹಾಯದಿಂದ ಪ್ರತಿಯೋರ್ವ ವಿದ್ಯಾರ್ಥಿ ಮೇ 5, 2025 ರೊಳಗೆ ಲರ್ನಿಂಗ್ ಲೆವಲ್ ಹಾಗೂ ಔಟ್ ಕಮ್ ಪಡೆಯುವುದನ್ನು ಸುನಿಶ್ಚಿತಗೊಳಿಸಲಾಗುವುದು. ಡಿಸೆಂಬರ್ 2020 ರಲ್ಲಿ ಇದು ಜಾರಿಗೆ ಬರಲಿದೆ.

Trending News