ಬಿಜೆಪಿ ಮಾಜಿ ಸಂಸದ 'ಮಹಾ' ಸ್ಪೀಕರ್ ಹುದ್ದೆಗೆ ಕಾಂಗ್ರೆಸ್ ಅಭ್ಯರ್ಥಿ!

ಕಾಂಗ್ರೆಸ್-ಎನ್‌ಸಿಪಿ-ಶಿವಸೇನೆ ಮೈತ್ರಿ ಮಾಜಿ ಕಿಸಾನ್ ವಿಂಗ್ ನಾಯಕ ನಾನಾ ಪಟೋಲೆ ಅವರನ್ನು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಹುದ್ದೆಗೆ ತನ್ನ ಅಭ್ಯರ್ಥಿಯಾಗಿ ಘೋಷಿಸಿವೆ. ಈ ಪ್ರಯತ್ನವನ್ನು ಪಶ್ಚಿಮ ಮಹಾರಾಷ್ಟ್ರದ ಕೃಷಿ ಸಮುದಾಯಗಳ ಓಲೈಕೆಗಾಗಿ ಮಾಡಿರುವ ಯೋಜನೆ ಎಂದು ಹೇಳಲಾಗುತ್ತಿದೆ.

Last Updated : Nov 30, 2019, 01:46 PM IST
ಬಿಜೆಪಿ ಮಾಜಿ ಸಂಸದ 'ಮಹಾ' ಸ್ಪೀಕರ್ ಹುದ್ದೆಗೆ ಕಾಂಗ್ರೆಸ್ ಅಭ್ಯರ್ಥಿ! title=

ಮುಂಬೈ: ಕಾಂಗ್ರೆಸ್-ಎನ್‌ಸಿಪಿ-ಶಿವಸೇನೆ ಮೈತ್ರಿಕೂಟವು ಮಾಜಿ ಕಿಸಾನ್ ವಿಂಗ್ ನಾಯಕ ನಾನಾ ಪಟೋಲೆ ಅವರನ್ನು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಹುದ್ದೆಗೆ ತನ್ನ ಅಭ್ಯರ್ಥಿಯಾಗಿ ಘೋಷಿಸಿವೆ. ಈ ಪ್ರಯತ್ನವನ್ನು ಪಶ್ಚಿಮ ಮಹಾರಾಷ್ಟ್ರದ ಕೃಷಿ ಸಮುದಾಯಗಳ ಓಲೈಕೆಗಾಗಿ ಮಾಡಿರುವ ಯೋಜನೆ ಎಂದು ಹೇಳಲಾಗುತ್ತಿದೆ.

ಮಹಾರಾಷ್ಟ್ರ(Maharashtra)ದ ಅಮರಾವತಿ ಜಿಲ್ಲೆಯ ಸುಕಾಲಿಯಿಂದ ಈಗ ಕಾಂಗ್ರೆಸ್ ಶಾಸಕರಾಗಿರುವ ನಾನಾ ಪಟೋಲೆ(Nana Patole), ಬಿಜೆಪಿಯ ಮಾಜಿ ಸಂಸದರಾಗಿದ್ದು, 2014 ರಿಂದ 2019 ರ ನಡುವೆ ಪ್ರಧಾನಿ ಮೋದಿಯವರ ಮೊದಲ ಅವಧಿಯ ಸಂದರ್ಭದಲ್ಲಿ ಪಕ್ಷದ ವಿರುದ್ಧ ದಂಗೆ ಎದ್ದ ಮೊದಲ ವ್ಯಕ್ತಿ.

2014 ರ ಲೋಕಸಭಾ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಎನ್‌ಸಿಪಿಯನ್ನು ತ್ಯಜಿಸಿದ್ದ ಪಟೋಲೆ ಬಿಜೆಪಿಗೆ ಸೇರಿಕೊಂಡರು ಮತ್ತು ಮಹಾರಾಷ್ಟ್ರದ ಭಂಡಾರ್-ಗೊಂಡಿಯಾ ಕ್ಷೇತ್ರದಿಂದ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದರು.

ಮೋದಿ ಸರ್ಕಾರದ ಮುಕ್ತ ವಿಮರ್ಶಕನಾಗಿದ್ದ ನಾಯಕ ನಂತರದ ದಿನಗಳಲ್ಲಿ ಕೇಸರಿ ಪಕ್ಷದ ವಿರುದ್ಧ ಸಮರ ಸಾರಿ ಕಾಂಗ್ರೆಸ್ ಸೇರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ನಾಗ್ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಈ ಬಾರಿ ಅವರು ಬಿಜೆಪಿ ಭದ್ರಕೋಟೆಯ ಎದುರು ಸೋತರು.

ಪಟೋಲ್ ಅವರನ್ನು ನಾಮನಿರ್ದೇಶನ ಮಾಡುವ ಕಾಂಗ್ರೆಸ್ ನಿರ್ಧಾರವು ವಿವಿಧ ಪ್ರದೇಶಗಳ ನಡುವೆ ಅಧಿಕಾರದ ಸಮತೋಲನವನ್ನು ಕಾಯ್ದುಕೊಳ್ಳುವ ಪ್ರಯತ್ನವಾಗಿರಬಹುದು ಎನ್ನಲಾಗಿದೆ. ಏಕೆಂದರೆ ಹೆಚ್ಚಿನ ಉನ್ನತ ಎನ್‌ಸಿಪಿ ಮತ್ತು ಕಾಂಗ್ರೆಸ್ ನಾಯಕರು ಪಶ್ಚಿಮ ಮಹಾರಾಷ್ಟ್ರದವರು.
 

Trending News