ಮಾಜಿ ಐಪಿಎಸ್ ಅಧಿಕಾರಿ ಲಾಲ್ದುಹೋಮ ಮಿಜೋರಾಂನ ನೂತನ ಮುಖ್ಯಮಂತ್ರಿ

ಜೋರಾಮ್ ಪೀಪಲ್ಸ್ ಮೂವ್‌ಮೆಂಟ್‌ನ (ZPM) ಲಾಲ್ದುಹೋಮ ಅವರು ಮಿಜೋರಾಂನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. 1987 ರಲ್ಲಿ ರಾಜ್ಯ ರಚನೆಯಾದ ನಂತರ ಕಾಂಗ್ರೆಸ್ ಅಥವಾ MNF ಹೊರತುಪಡಿಸಿ ಬೇರೆ ಪಕ್ಷವು ಅಧಿಕಾರಕ್ಕೆ ಬಂದಿರುವುದು ಇದೇ ಮೊದಲು. 

Written by - Yashaswini V | Last Updated : Dec 5, 2023, 04:07 PM IST
  • ನಾರ್ತ್ ಈಸ್ಟ್ ಹಿಲ್ ಯೂನಿವರ್ಸಿಟಿಯಿಂದ ಬಿಎ ಪದವಿಯನ್ನು ಪೂರ್ಣಗೊಳಿಸಿದ ನಂತರ ಲಾಲ್ದುಹೋಮ ಅವರು ಭಾರತೀಯ ಪೊಲೀಸ್ ಸೇವೆಗೆ ಸೇರಿದರು.
  • ಲಾಲ್ದುಹೋಮ ಅವರು ಆರಂಭದಲ್ಲಿ ಕರಾವಳಿ ರಾಜ್ಯವಾದ ಗೋವಾದಲ್ಲಿ ಸೇವೆ ಸಲ್ಲಿಸಿದರು.
  • ಸೇವೆಯಲ್ಲಿದ್ದಾಗ, ಅವರು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಭದ್ರತಾ ಉಸ್ತುವಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿ ಲಾಲ್ದುಹೋಮ ಮಿಜೋರಾಂನ ನೂತನ ಮುಖ್ಯಮಂತ್ರಿ  title=

ಗುವಾಹಟಿ: ಮಾಜಿ ಐಪಿಎಸ್ ಅಧಿಕಾರಿ ಲಾಲ್ದುಹೋಮ ಅವರು ಮಿಜೋರಾಂನ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.  ಮಾಜಿ ಐ‌ಪಿ‌ಎಸ್ ಅಧಿಕಾರಿ ಲಾಲ್ದುಹೋಮ ಅವರು ಮಿಜೋರಾಂನ ನೂತನ ಮುಖ್ಯಮಂತ್ರಿಯಾಗಿ ಡಿಸೆಂಬರ್ 8 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 

ಸೋಮವಾರ ನಡೆದ ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ವಿರುದ್ಧ ಮೊದಲ ಬಾರಿಗೆ ಅಸೆಂಬ್ಲಿ ಚುನಾವಣೆಯಲ್ಲಿ ಮಾನ್ಯತೆ ಪಡೆದ ಪಕ್ಷವಾಗಿ ಸ್ಪರ್ಧಿಸಿದ ಹೊಸ ಪ್ರಾದೇಶಿಕ ಪಕ್ಷವಾದ ಲಾಲ್ದುಹೋಮಾ ಅವರ ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ (ZPM) ಅದ್ಭುತ ಜಯ ಸಾಧಿಸಿದೆ. ಮಿಜೋರಾಂನ ಒಟ್ಟು 40 ಅಸೆಂಬ್ಲಿ ಸ್ಥಾನಗಳಲ್ಲಿ ZPM 27 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದರೆ,  ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF) ಪಕ್ಷ 10 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಿದೆ. 

ಮಿಜೋರಾಂನಲ್ಲಿ 1987 ರಲ್ಲಿ ರಾಜ್ಯ ರಚನೆಯಾದ ನಂತರ ಕಾಂಗ್ರೆಸ್ ಅಥವಾ MNF ಹೊರತುಪಡಿಸಿ ಬೇರೆ ಪಕ್ಷವು ಅಧಿಕಾರಕ್ಕೆ ಬಂದಿರುವುದು ಇದೇ ಮೊದಲು ಎಂಬುದು ಗಮನಾರ್ಹ ವಿಷಯವಾಗಿದೆ. 

ಲಾಲ್ದುಹೋಮ: 
ಮಾಜಿ ಐ‌ಪಿ‌ಎಸ್ ಅಧಿಕಾರಿ ಆಗಿರುವ 73 ವರ್ಷದ ಲಾಲ್ದುಹೋಮ ಈ ಬಾರಿಯ ಚುನಾವಣೆಯಲ್ಲಿ ಸೆರ್ಚಿಪ್ ಕ್ಷೇತ್ರದಿಂದ 2,982 ಮತಗಳಿಂದ ಗೆದ್ದಿದ್ದಾರೆ. ಲಾಲ್ದುಹೋಮ ಬರೋಬ್ಬರಿ ಮೂರು ದಶಕಗಳ ನಂತರ ಮಿಜೋರಾಂ ರಾಜ್ಯಕ್ಕೆ ಲಭ್ಯವಾಗುತ್ತಿರುವ ಮೊದಲ ನೂತನ ಮುಖ್ಯಮಂತ್ರಿ ಎಂತಲೇ ಹೇಳಬಹುದು. 

ಇದನ್ನೂ ಓದಿ- Chhattisgarh: ಸಚಿವರ ವಿರುದ್ಧವೇ ಚುನಾವಣೆ ಗೆದ್ದು ಮಗನ ಸಾವಿನ ಸೇಡು ತೀರಿಸಿಕೊಂಡ ಅಪ್ಪ!

ಲಾಲ್ದುಹೋಮ ಅವರ ಕಿರು ಪರಿಚಯ: 
ನಾರ್ತ್ ಈಸ್ಟ್ ಹಿಲ್ ಯೂನಿವರ್ಸಿಟಿಯಿಂದ ಬಿಎ ಪದವಿಯನ್ನು ಪೂರ್ಣಗೊಳಿಸಿದ ನಂತರ ಲಾಲ್ದುಹೋಮ ಅವರು ಭಾರತೀಯ ಪೊಲೀಸ್ ಸೇವೆಗೆ ಸೇರಿದರು. ಲಾಲ್ದುಹೋಮ ಅವರು ಆರಂಭದಲ್ಲಿ ಕರಾವಳಿ ರಾಜ್ಯವಾದ ಗೋವಾದಲ್ಲಿ ಸೇವೆ ಸಲ್ಲಿಸಿದರು. ಸೇವೆಯಲ್ಲಿದ್ದಾಗ, ಅವರು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಭದ್ರತಾ ಉಸ್ತುವಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  

1984 ರಲ್ಲಿ ತಮ್ಮ ವೃತ್ತಿಗೆ ರಾಜೀನಾಮೆ ನೀಡಿದ ಲಾಲ್ದುಹೋಮ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅದೇ ವರ್ಷ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾದರು.  1988 ರಲ್ಲಿ, ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಂತರ ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹಗೊಂಡ ಮೊದಲ ಸಂಸದರಾದರು. ZPM ರಚನೆಯ ಮೊದಲು, ಅವರು 2003 ರಲ್ಲಿ ಅವರು ಸ್ಥಾಪಿಸಿದ ಮತ್ತೊಂದು ಪಕ್ಷವಾದ ಜೋರಾಮ್ ನ್ಯಾಶನಲಿಸ್ಟ್ ಪಾರ್ಟಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ZPM 2017 ರಲ್ಲಿ ಆರು ಸಣ್ಣ ಪ್ರಾದೇಶಿಕ ಪಕ್ಷಗಳು ಮತ್ತು ನಾಗರಿಕ ಸಮಾಜ ಗುಂಪುಗಳ ಸಾಮಾನ್ಯ ವೇದಿಕೆಯಾಗಿ ಪ್ರಾರಂಭವಾಯಿತು. 2018 ರಲ್ಲಿ ಅಸೆಂಬ್ಲಿ ಚುನಾವಣೆಯ ಸಮಯದಲ್ಲಿ ಇದು ಇನ್ನೂ ಮಾನ್ಯತೆ ಪಡೆದ ಪಕ್ಷವಾಗಿರಲಿಲ್ಲ. ಬದಲಿಗೆ, ವೇದಿಕೆಯಿಂದ ಬೆಂಬಲಿತವಾದ 38 ಸ್ವತಂತ್ರ ಅಭ್ಯರ್ಥಿಗಳಿದ್ದರು. ಅವರಲ್ಲಿ ಎಂಟು ಮಂದಿ  ಶಾಸಕರಾಗಿ ಆಯ್ಕೆಯಾದರು.  2019 ರಲ್ಲಿ, ಅವರೆಲ್ಲರೂ ಸಣ್ಣ ಪಕ್ಷಗಳು ಮತ್ತು ಎನ್‌ಜಿಒಗಳನ್ನು ಸೇರಿಸುವ ಮೂಲಕ ಮಿಜೋ ನ್ಯಾಷನಲ್ ಮೂವ್‌ಮೆಂಟ್ ಎಂಬ ಪಕ್ಷವನ್ನು ವಿಸ್ತರಿಸಿದರು. 

ಇದನ್ನೂ ಓದಿ- Rajasthan Assembly Elections: ರಾಜಸ್ಥಾನದ ಮುಂದಿನ ಸಿಎಂ ಎಂದು ಬಿಂಬಿಸಲಾಗುತ್ತಿರುವ ಆ 'ರಾಜಕುಮಾರಿ' ಯಾರ್ ಗೊತ್ತಾ?

ನವೆಂಬರ್ 2018 ರಲ್ಲಿ ನಡೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ಲಾಲ್ದುಹೋಮ ಅವರು ಸರ್ಚಿಪ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಲಿನ ಹಾಲಿ ಶಾಸಕರು ಮತ್ತು ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಲಾಲ್ ಥನ್ಹಾವ್ಲಾ ಅವರನ್ನು ಪದಚ್ಯುತಗೊಳಿಸಿದರು. ಬಳಿಕ ಲಾಲ್ದುಹೋಮ ಅವರು ಜೆಡ್‌ಪಿ‌ಎಮ್ ಪಕ್ಷದ ಮುಖ್ಯಸ್ಥರಾಗಿ ನೇಮಕಗೊಂಡರು. 

2018 ರ ವಿಧಾನಸಭಾ ಚುನಾವಣೆಯ ಮೊದಲು, ಲಾಲ್ದುಹೋಮ ಅವರು 2003 ರಲ್ಲಿ ರಟು ಸ್ಥಾನದಿಂದ ಮತ್ತು 2008 ರಲ್ಲಿ ಐಜ್ವಾಲ್ ವೆಸ್ಟ್-I ಸ್ಥಾನದಿಂದ ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News