ಕಲಾಹಂಡಿ ಮಾಜಿ ದೊರೆ ಉದಿತ್ ಪ್ರತಾಪ್ ನಿಧನ

ಡಿಯೋ ಅವರಿಗೆ 71 ವರ್ಷ ವಯಸ್ಸಾಗಿದ್ದು, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.  

PTI | Updated: Sep 3, 2019 , 11:37 AM IST
ಕಲಾಹಂಡಿ ಮಾಜಿ ದೊರೆ ಉದಿತ್ ಪ್ರತಾಪ್ ನಿಧನ

ಭುವನೇಶ್ವರ: ಒಡಿಶಾದ ಹಿಂದಿನ ರಾಜಪ್ರಭುತ್ವದ ಕಲಾಹಂಡಿಯ ಮಾಜಿ ರಾಜ ಉದಿತ್ ಪ್ರತಾಪ್ ಡಿಯೋ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 

ಡಿಯೋ ಅವರಿಗೆ 71 ವರ್ಷ ವಯಸ್ಸಾಗಿದ್ದು, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಡಿಯೋ 1974 ರಿಂದ 1977 ರವರೆಗೆ ಒಡಿಶಾದ ಜುನಾಗರ್ ಅಸೆಂಬ್ಲಿ ಕ್ಷೇತ್ರದ ಮಾಜಿ ಶಾಸಕರಾಗಿದ್ದರು. ಅಲ್ಲದೆ, ಡಿಯೋ ಮತ್ತು ಅವರ ರಾಣಿ ಪದ್ಮ ಮಂಜರಿ ದೇವಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 

ಬಿಜೆಪಿ ರಾಜ್ಯ ಅಧ್ಯಕ್ಷ ಬಸಂತ್ ಕುಮಾರ್ ಪಾಂಡ ಮತ್ತು ಪಕ್ಷದ ಹಿರಿಯ ನಾಯಕ ಕೆ.ವಿ.ಸಿಂಗ್‌ದೇವ್ ಅವರು ಡಿಯೋ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.