ರಾಷ್ಟ್ರಪತಿ ಭವನದಿಂದ ಅಮೆರಿಕಕ್ಕೆ ಮರಳುವವರೆಗೆ ಟ್ರಂಪ್‌ರ ಇಂದಿನ ವೇಳಾಪಟ್ಟಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಇಂದು ಅವರ ಭಾರತ ಪ್ರವಾಸದ ಎರಡನೇ ದಿನ.  

Last Updated : Feb 25, 2020, 10:35 AM IST
ರಾಷ್ಟ್ರಪತಿ ಭವನದಿಂದ ಅಮೆರಿಕಕ್ಕೆ ಮರಳುವವರೆಗೆ ಟ್ರಂಪ್‌ರ ಇಂದಿನ ವೇಳಾಪಟ್ಟಿ title=

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump)  ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಇಂದು ಅವರ ಭಾರತ ಪ್ರವಾಸದ ಎರಡನೇ ದಿನ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ವಿವರವಾದ ಮಾತುಕತೆ ನಡೆಯಲಿದ್ದು, ಹಲವು ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಉಭಯ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಟ್ರಂಪ್ ಅವರೊಂದಿಗೆ ಅವರ ಪತ್ನಿ ಮೆಲಾನಿಯಾ ಟ್ರಂಪ್, ಮಗಳು ಇವಾಂಕಾ ಮತ್ತು ಅಳಿಯ ಜೇರೆಡ್ ಕುಶ್ನರ್ ಕೂಡ ಭಾರತಕ್ಕೆ ಬಂದಿದ್ದಾರೆ. ಟ್ರಂಪ್ ಮತ್ತು ಅವರ ಕುಟುಂಬ ಸೋಮವಾರ 36 ಗಂಟೆಗಳ ಹಾರಾಟದ ನಂತರ ಅಹಮದಾಬಾದ್ ತಲುಪಿತು. ಇಂದಿನ ಇವರ ಕಾರ್ಯಕ್ರಮ ಏನೆಂದು ತಿಳಿಯಿರಿ.

ಬೆಳಿಗ್ಗೆ 10.00 ಗಂಟೆ: ಡೊನಾಲ್ಡ್ ಟ್ರಂಪ್ ರಾಷ್ಟ್ರಪತಿ ಭವನಕ್ಕೆ ಹೋಗಲಿದ್ದಾರೆ. ಆಯೋಜಿಸಲಾಗಿರುವ ಭವ್ಯ ಸಮಾರಂಭದಲ್ಲಿ ಭಾಗಿ.

ಬೆಳಿಗ್ಗೆ 10.30 ಗಂಟೆ: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಟ್ರಂಪ್ ಗೌರವ ಸಲ್ಲಿಸಲಿದ್ದಾರೆ.

ಬೆಳಿಗ್ಗೆ 11.00 ಗಂಟೆ: ಡೊನಾಲ್ಡ್ ಟ್ರಂಪ್ ಹೈದರಾಬಾದ್ ಸದನಕ್ಕೆ ಹೋಗಲಿದ್ದಾರೆ. ನಿಯೋಗ ಸಭೆ ಪಿಎಂ ಮೋದಿ ಅವರೊಂದಿಗೆ ನಡೆಯಲಿದೆ. ಇಲ್ಲಿ ಅವರು ಮಧ್ಯಾಹ್ನ ಪಿಎಂ ಮೋದಿಯವರೊಂದಿಗೆ ಮಧ್ಯಾಹ್ನದ ಭೋಜನ ಸೇವಿಸಲಿದ್ದಾರೆ.

ಮಧ್ಯಾಹ್ನ 12.40 ಗಂಟೆ: ಪತ್ರಿಕಾಗೋಷ್ಠಿ ನಡೆಯಲಿದ್ದು, ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾದ ನಂತರ ಟ್ರಂಪ್ ಅಮೆರಿಕದ ರಾಯಭಾರ ಕಚೇರಿಗೆ ಹೋಗಲಿದ್ದಾರೆ.

ಸಂಜೆ 7.30 : ಟ್ರಂಪ್ ಅವರು ರಾತ್ರಿ 7.30 ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಲಿದ್ದಾರೆ. ಇಲ್ಲಿ ಕೋವಿಂದ್ ಟ್ರಂಪ್ ಅವರಿಗಾಗಿ ಭೋಜನವನ್ನು ಆಯೋಜಿಸಿದ್ದಾರೆ.

ರಾತ್ರಿ 10: ಟ್ರಂಪ್ ಜರ್ಮನಿ ಮೂಲಕ ಅಮೆರಿಕಕ್ಕೆ ತೆರಳಲಿದ್ದಾರೆ.

Trending News