Rahul Gandhi: 'ಕಡಿಮೆಯಾಗಿದೆ ಲಕ್ಷ್ಮಿ, ದುರ್ಗಾ, ಸರಸ್ವತಿ ದೇವಿ ಶಕ್ತಿಯ ಪ್ರಭಾವ' ರಾಹುಲ್ ಹೀಗೆ ಹೇಳಿದ್ದಾದರೂ ಯಾಕೆ?

Rahul Gandhi -ಜಮ್ಮು ಮತ್ತು ಕಾಶ್ಮೀರದ ಮಿಶ್ರ ಸಂಸ್ಕೃತಿಯನ್ನು ಭಾರತೀಯ ಜನತಾ ಪಕ್ಷ (BJP) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನಾಶಪಡಿಸಿವೆ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ  (Rahul Gandhi) ಆರೋಪಿಸಿದ್ದಾರೆ.

Written by - Nitin Tabib | Last Updated : Sep 10, 2021, 05:43 PM IST
  • ದೇಶದಲ್ಲಿ ದುರ್ಗಾ, ಲಕ್ಷ್ಮಿ, ಸರಸ್ವತಿ ದೇವಿಯರ ಪ್ರಭಾವ ಕಮ್ಮಿಯಾಗಿದೆ
  • ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಉವಾಚ.
  • ಬಿಜೆಪಿ-RSS ಜಮ್ಮು-ಕಾಶ್ಮೀರದ ಸಮ್ಮಿಶ್ರ ಸಂಸ್ಕೃತಿಯನ್ನು ಹಾಳುಮಾಡಿವೆ.
Rahul Gandhi: 'ಕಡಿಮೆಯಾಗಿದೆ ಲಕ್ಷ್ಮಿ, ದುರ್ಗಾ, ಸರಸ್ವತಿ ದೇವಿ ಶಕ್ತಿಯ ಪ್ರಭಾವ'  ರಾಹುಲ್ ಹೀಗೆ ಹೇಳಿದ್ದಾದರೂ ಯಾಕೆ? title=
Rahul Gandhi (File Photo)

Rahul Gandhi -ಜಮ್ಮು ಮತ್ತು ಕಾಶ್ಮೀರದ ಮಿಶ್ರ ಸಂಸ್ಕೃತಿಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಾಶಪಡಿಸಿವೆ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi)ಆರೋಪಿಸಿದ್ದಾರೆ. ಈ ಎರಡೂ ಸಂಘಟನೆಗಳು ಜನರ ನಡುವಿನ ಪ್ರೀತಿ ಮತ್ತು ಸಹೋದರತ್ವವನ್ನು ನಾಶಪಡಿಸುತ್ತಿವೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಒಂದು ದಿನದ ಮುಂಚೆ ಮಾತಾ ವೈಷ್ಣೋ ದೇವಿ ದರಬಾರದಿಂದ  ಹಿಂದಿರುಗಿದ ರಾಹುಲ್, ಬಿಜೆಪಿ-ಆರೆಸ್ಸೆಸ್ ಅನ್ನು ಗುರಿಯಾಗಿಸಿದ್ದಾರೆ ಮತ್ತು ಲಕ್ಷ್ಮಿ, ದುರ್ಗಾ ಮತ್ತು ಸರಸ್ವತಿ ದೇವಿಯ ಶಕ್ತಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 

ಗುಲಾಮ್ ನಬಿ ಆಜಾದ್ (Gulam Nabi Azad)  ಸೇರಿದಂತೆ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಜಮ್ಮುವಿನ ತ್ರಿಕೂಟಾ ನಗರದಲ್ಲಿ ಕಾರ್ಯಕರ್ತರು ಮತ್ತು ಪಕ್ಷದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ನಿಮ್ಮ ನಡುವಿನ ಪ್ರೀತಿ ಮತ್ತು ಸಹೋದರತ್ವವನ್ನು ಬಿಜೆಪಿ (BJP) ಮತ್ತು ಆರ್‌ಎಸ್‌ಎಸ್ (RSS) ಹಾಳುಮಾಡುತ್ತಿವೆ. ಅವರು ಜಮ್ಮು ಮತ್ತು ಕಾಶ್ಮೀರದ ಸಮ್ಮಿಶ್ರ ಸಂಸ್ಕೃತಿಯನ್ನು ಮುರಿಯಲು ಬಯಸುತ್ತಿದ್ದಾರೆ ಮತ್ತು ಅದು ನಿಮ್ಮನ್ನು ದುರ್ಬಲರನ್ನಾಗಿಸುತ್ತಿದೆ. ಇದು ಕೇಂದ್ರಾಡಳಿತ ಪ್ರದೇಶದ ಆರ್ಥಿಕತೆ, ಪ್ರವಾಸೋದ್ಯಮ ಮತ್ತು ವ್ಯಾಪಾರದ ಮೇಲೆ ಇದು ಕೆಟ್ಟ ಪರಿಣಾಮ ಬೀರಿರುವುದನ್ನು ನೀವೇ ನೋಡಬಹುದು" ಎಂದು ರಾಹುಲ್ ಹೇಳಿದ್ದಾರೆ.

ಇದನ್ನೂ ಓದಿ- New Airport: ಭಾರತದಲ್ಲಿ ಶೀಘ್ರದಲ್ಲೇ 5 ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ, ಇಲ್ಲಿದೆ ವಿವರ

"ದುರ್ಗಾ ದೇವಿಯು ಶಕ್ತಿಯನ್ನು ರಕ್ಷಿಸುವ ದೇವಿಯ ಸಂಕೇತ, ಲಕ್ಷ್ಮಿ ದೇವಿಯು ತನ್ನ ಗುರಿಯನ್ನು ಸಾಧಿಸುವ ಶಕ್ತಿಯ ಸಂಕೇತ ಮತ್ತು ಸರಸ್ವತಿ ದೇವಿಯು ಜ್ಞಾನದ ಶಕ್ತಿ ಎಂದು ರಾಹುಲ್ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ (Modi Government) ನೀತಿಗಳು, ನೋಟು ರದ್ದತಿ ಮತ್ತು ಜಿಎಸ್‌ಟಿಗಳು ದೇಶದಲ್ಲಿ ಲಕ್ಷ್ಮಿ ದೇವಿಯ ಶಕ್ತಿಯನ್ನು ಕಡಿಮೆ ಮಾಡಿವೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ. ಹೊಸ ಕೃಷಿ ಕಾನೂನುಗಳು ದುರ್ಗಾದೇವಿಯ ಶಕ್ತಿಯನ್ನು ಕಡಿಮೆ ಮಾಡಿವೆ" ಎಂದ ರಾಹುಲ್ , "ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವತಿಯಿಂದ ಯಾರನ್ನಾದರೂ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕ ಮಾಡಿದಾಗ ಸರಸ್ವತಿ ದೇವಿಯ ಶಕ್ತಿ ಕಡಿಮೆಯಾಗುತ್ತದೆ" ಎಂದು ಹೇಳಿದ್ದಾರೆ. 

ಇದನ್ನೂ ಓದಿ-Pakistan Actress: ಮಸೀದಿಯ ಮುಂದೆ ವಿಡಿಯೋ ಶೂಟ್ ಪ್ರಕರಣ, ಪ್ರಸಿದ್ಧ ನಟಿ ವಿರುದ್ಧ ಬಂಧನ ವಾರಂಟ್

ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿ ದೇವಿಯ ಆಶೀರ್ವಾದವು ದೇಶದ ಮೇಲೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. "ನಿನ್ನೆ ನಾನು ದೇವಸ್ಥಾನಕ್ಕೆ ಹೋಗಿದ್ದೆ (ವೈಷ್ಣೋ ದೇವಿ), ಅಲ್ಲಿ ನಾನು ಮೂರು ದೇವತೆಗಳನ್ನು ನೋಡಿದೆ. ದುರ್ಗಾ ಜಿ (Durga Devi), ಲಕ್ಷ್ಮಿ(Lakshmi Devi) ಮತ್ತು ಸರಸ್ವತಿ ಜೀ. (Saraswati Devi) ದುರ್ಗಾ ಪದವು ದುರ್ಗದಿಂದ ಬಂದಿದೆ ಮತ್ತು ದುರ್ಗಾದೇವಿ ಎಂದರೆ ರಕ್ಷಿಸುವ ಶಕ್ತಿ ಎಂದರ್ಥ. ಲಕ್ಷ್ಮಿ ದೇವಿಯು ಗುರಿಯನ್ನು ಸಾಧಿಸಲು ಸಹಾಯ ಮಾಡುವ ಶಕ್ತಿಯಾಗಿದೆ. ಸರಸ್ವತಿ ದೇವಿಯು ಶಿಕ್ಷಣ ಮತ್ತು ಜ್ಞಾನದ ಶಕ್ತಿಯನ್ನು ತೋರಿಸುತ್ತಾಳೆ. ಯಾವುದೇ ಒಂದು ದೇಶವು ಈ ಮೂರು ಶಕ್ತಿಗಳನ್ನು ಹೊಂದಿದ್ದರೆ ಆ ದೇಶವು ಅಭಿವೃದ್ಧಿಗೊಳ್ಳುತ್ತದೆ ಎಂದು ರಾಹುಲ್ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ-Bhabanipur Byelection: ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯಿಂದ ಪ್ರಿಯಾಂಕಾ ಟಿಬ್ರೆವಾಲ್ ಕಣಕ್ಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News