ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್, ಜನವರಿ 1ರ ನಂತರ ವಿಧಿಸಲಾಗಿರುವ ಈ ಶುಲ್ಕ ಸಿಗಲಿದೆ ವಾಪಸ್

'ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ -269 ಎಸ್‌ಯು' ಅಡಿಯಲ್ಲಿ ನಿಗದಿಪಡಿಸಿದ ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್‌ಗಳಿಗೆ ಶುಲ್ಕ ವಿಧಿಸುವ ಸುತ್ತೋಲೆಯಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಈ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಭವಿಷ್ಯದ ಯಾವುದೇ ವಹಿವಾಟುಗಳಿಗೆ ಶುಲ್ಕ ವಿಧಿಸಬಾರದು ಎಂದು ಬ್ಯಾಂಕುಗಳಿಗೆ ಸೂಚಿಸಿತು. 

Last Updated : Aug 31, 2020, 08:00 AM IST
  • ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ -269 ಎಸ್‌ಯು' ಅಡಿಯಲ್ಲಿ ನಿಗದಿಪಡಿಸಿದ ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್‌ಗಳಿಗೆ ಶುಲ್ಕ
  • ಈ ಪ್ಲ್ಯಾಟ್‌ಫಾರ್ಮ್‌ಗಳಿಂದ ನಡೆಸಲಾಗುವ ವಹಿವಾಟಿನ ಮೇಲೆ ಮುಂದಿನ ದಿನಗಳಲ್ಲಿ ಯಾವುದೇ ಶುಲ್ಕ ವಿಧಿಸದಂತೆ ಬ್ಯಾಂಕುಗಳಿಗೆ ಸೂಚಿಸಿದೆ.
ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್, ಜನವರಿ 1ರ ನಂತರ ವಿಧಿಸಲಾಗಿರುವ ಈ ಶುಲ್ಕ ಸಿಗಲಿದೆ ವಾಪಸ್ title=

ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಒಳ್ಳೆಯ ಸುದ್ದಿ ಇದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ ರುಪೇ ಕಾರ್ಡ್ ಅಥವಾ ಭೀಮಾ-ಯುಪಿಐ (ಯುಪಿಐ, ರುಪೇ ಭೀಮ್) ಮೂಲಕ ಮಾಡಿದ ವಹಿವಾಟಿನ ಮೇಲೆ 2020ರ ಜನವರಿ 1ರ ನಂತರ ವಸೂಲಿ ಮಾಡಿದ ಶುಲ್ಕವನ್ನು ಮರುಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಭಾನುವಾರ ಬ್ಯಾಂಕ್‌ಗಳಿಗೆ ಸೂಚಿಸಿದೆ. 

ಪಿಟಿಐ ಸುದ್ದಿಯ ಪ್ರಕಾರ 'ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ -269 ಎಸ್‌ಯು' ಅಡಿಯಲ್ಲಿ ನಿಗದಿಪಡಿಸಿದ ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್‌ಗಳಿಗೆ ಶುಲ್ಕ ವಿಧಿಸುವ ಸುತ್ತೋಲೆಯಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT), ಈ ಪ್ಲ್ಯಾಟ್‌ಫಾರ್ಮ್‌ಗಳಿಂದ ನಡೆಸಲಾಗುವ ವಹಿವಾಟಿನ ಮೇಲೆ ಮುಂದಿನ ದಿನಗಳಲ್ಲಿ ಯಾವುದೇ ಶುಲ್ಕ ವಿಧಿಸದಂತೆ ಬ್ಯಾಂಕುಗಳಿಗೆ ಸೂಚಿಸಿದೆ. 

ನೀವು ಕೂಡ Google Pay ಮೂಲಕ ಹಣ ವರ್ಗಾಯಿಸುತ್ತೀರಾ? ಹಾಗಿದ್ದರೆ ತಪ್ಪದೇ ತಿಳಿಯಿರಿ ಈ ಮಾಹಿತಿ

ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಮತ್ತು ಕಡಿಮೆ-ನಗದು ಆರ್ಥಿಕತೆಯತ್ತ ಸಾಗಲು ಸರ್ಕಾರ ಹಣಕಾಸು ಕಾಯ್ದೆ 2019ರಲ್ಲಿ ಸೆಕ್ಷನ್ 269 ಎಸ್‌ಯು ಆಗಿ ಹೊಸ ನಿಬಂಧನೆಯನ್ನು ಸೇರಿಸಿದೆ. ಕಾನೂನಿನ ಪ್ರಕಾರ ಕಳೆದ ವರ್ಷ 50 ಕೋಟಿ ರೂ.ಗಳಿಗಿಂತ ಹೆಚ್ಚಿನ ವ್ಯವಹಾರವನ್ನು ಮಾಡುವ ಜನರು ತಕ್ಷಣದ ಜಾರಿಗೆ ಬರುವಂತೆ ನಿಗದಿಪಡಿಸಿದ ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್‌ನಿಂದ ಪಾವತಿ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು.

ನಂತರ 2019ರ ಡಿಸೆಂಬರ್‌ನಲ್ಲಿ ರುಪೇ ಡೆಬಿಟ್ ಕಾರ್ಡ್ (DEBIT CARD), ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ / ಭೀಮ್-ಯುಪಿಐ) ಮತ್ತು ಯುಪಿಐ ಕ್ವಿಕ್ ರೆಸ್ಪಾನ್ಸ್ ಕೋಡ್ (ಕ್ಯೂಆರ್ ಕೋಡ್) ನ ಸ್ಥಿರ ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್ ಅನ್ನು ಸರ್ಕಾರ ಪರಿಚಯಿಸಿತು.

2020ರ ಜನವರಿ 1 ರಂದು ಅಥವಾ ನಂತರ ನಿಗದಿಪಡಿಸಿದ ಎಲೆಕ್ಟ್ರಾನಿಕ್ ಮೋಡ್ ಬಳಸಿ ಮಾಡಿದ ವಹಿವಾಟಿನ ಮೇಲೆ ಯಾವುದೇ ರೀತಿಯ ಶುಲ್ಕವನ್ನು ಸಂಗ್ರಹಿಸಿದ್ದರೆ ಅದನ್ನು ತಕ್ಷಣ ಮರುಪಾವತಿಸಲು ಬ್ಯಾಂಕುಗಳಿಗೆ ಸೂಚಿಸಲಾಗಿದೆ ಎಂದು ಸಿಬಿಡಿಟಿ ಸುತ್ತೋಲೆಯಲ್ಲಿ ತಿಳಿಸಿದೆ. ಈ ರೀತಿಯ ವಹಿವಾಟಿನ ಮೇಲೆ ಯಾವುದೇ ಶುಲ್ಕ ತೆಗೆದುಕೊಳ್ಳಬೇಡಿ ಎಂದು ಸಿಬಿಡಿಟಿ ಹೇಳಿದ್ದು, 2019ರ ಡಿಸೆಂಬರ್ 1ರಿಂದ ಸ್ಥಿರ ಎಲೆಕ್ಟ್ರಾನಿಕ್ ಮೋಡ್‌ನಲ್ಲಿ ಮಾಡಿದ ವಹಿವಾಟಿನ ಮೇಲೆ ವ್ಯಾಪಾರಿ ರಿಯಾಯಿತಿ ದರ (ಎಂಡಿಆರ್) ಸೇರಿದಂತೆ ಯಾವುದೇ ರೀತಿಯ ಶುಲ್ಕಗಳು ಅನ್ವಯವಾಗುವುದಿಲ್ಲ ಎಂದು 2019ರ ಡಿಸೆಂಬರ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

UPI ಖಾತೆ ರಚಿಸುವುದು ಹೇಗೆ? ಅದರ ಪ್ರಯೋಜನಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಆದಾಗ್ಯೂ ಕೆಲವು ಬ್ಯಾಂಕುಗಳು ಯುಪಿಐ (UPI) ಮೂಲಕ ಮಾಡಿದ ವಹಿವಾಟಿನ ಮೇಲೆ ಶುಲ್ಕ ವಿಧಿಸುತ್ತಿವೆ ಎಂದು ಹಲವು ಬಾರಿ ವರದಿಯಾಗಿದೆ. ವಾಸ್ತವವಾಗಿ ನಿಗದಿತ ಮಿತಿಯವರೆಗೆ ಉಚಿತ ವಹಿವಾಟಿನ ಸೌಲಭ್ಯವನ್ನು ನೀಡಲಾಗುತ್ತಿದ್ದು ಇದರ ನಂತರ ಅವರು ಶುಲ್ಕ ವಿಧಿಸುತ್ತಿದ್ದಾರೆ ಎಂದು ಹಲವು ಬ್ಯಾಂಕುಗಳು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿವೆ. ಇಂತಹ ಕ್ರಮಗಳು ಪಾವತಿ ಮತ್ತು ವಸಾಹತು ವ್ಯವಸ್ಥೆಗಳ ಕಾಯ್ದೆಯ ಸೆಕ್ಷನ್ 10 ಎ ಮತ್ತು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269 ಅನ್ನು ಉಲ್ಲಂಘಿಸುತ್ತದೆ. ಅಂತಹ ಉಲ್ಲಂಘನೆಯ ಮೇಲೆ ದಂಡನಾತ್ಮಕ ಕ್ರಮಕ್ಕೆ ಅವಕಾಶವಿದೆ.
 

Trending News