UPI ಖಾತೆ ರಚಿಸುವುದು ಹೇಗೆ? ಅದರ ಪ್ರಯೋಜನಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಯುಪಿಐನ ಅಪ್ಲಿಕೇಶನ್‌ಗಳು ಬಹಳ ವಿಶೇಷವಾದ ಕಾರಣ ಅವು ಕೇವಲ ಆನ್ಲೈನ್ ಪಾವತಿ ಮಾತ್ರ ಮಾಡುವುದಿಲ್ಲ. ಇದರ ಜೊತೆಗೆ ಇನ್ನೂ ಹಲವು ಕೆಲಸಗಳನ್ನು ನಿಮಿಷಗಳಲ್ಲಿ ಮಾಡಲು ಅನುಕೂಲವಾಗಿವೆ. 

Written by - Yashaswini V | Last Updated : Jun 5, 2020, 02:50 PM IST
UPI ಖಾತೆ ರಚಿಸುವುದು ಹೇಗೆ? ಅದರ ಪ್ರಯೋಜನಗಳೇನು? ಇಲ್ಲಿದೆ ಪೂರ್ಣ ಮಾಹಿತಿ title=

ನವದೆಹಲಿ: ನೆಟ್ ಬ್ಯಾಂಕಿಂಗ್ (Net Banking) ಮೂಲಕ ಹಣವನ್ನು ವರ್ಗಾಯಿಸುವಲ್ಲಿ ನಿಮಗೆ ತೊಂದರೆಯಿದೆಯೇ ... ಹೌದು ಎಂದಾದರೆ ಈಗ ನೀವು ಕೋಡ್ ಸಹಾಯದಿಂದ ಯಾವುದೇ ವಿವರಗಳನ್ನು ಭರ್ತಿ ಮಾಡದೆ ಸುಲಭವಾಗಿ ಹಣವನ್ನು ವರ್ಗಾಯಿಸುತ್ತಿದ್ದೀರಿ. ಇಂದಿನ ಸಮಯದಲ್ಲಿ ಹಣವನ್ನು ವರ್ಗಾಯಿಸಲು (online payment) ಇದು ಅತ್ಯುತ್ತಮ ಆಯ್ಕೆಯಾಗಿದೆ. ಹೌದು ನಾವು ಯುಪಿಐ (UPI) ಬಗ್ಗೆ ಮಾತನಾಡುತ್ತಿದ್ದೇವೆ. ಯುಪಿಐ ಮೂಲಕ ನೀವು ಪಿನ್ ಅನ್ನು ನಮೂದಿಸುವ ಮೂಲಕ ಯಾವುದೇ  ಖಾತೆಗೆ ಮೊತ್ತವನ್ನು ವರ್ಗಾಯಿಸಬಹುದು. ಆದರೆ ಈ ಯುಪಿಐ ಅನ್ನು ಹೇಗೆ ರಚಿಸುವುದು ಎಂದು ನಿಮಗೆ ತಿಳಿದಿದೆಯೇ ... ಇಲ್ಲದಿದ್ದರೆ ಇಂದು ನೀವು ಯುಪಿಐ ಖಾತೆಯನ್ನು ಹೇಗೆ ರಚಿಸಬಹುದು ಎಂದು ನಾವು ನಿಮಗೆ ಹೇಳುತ್ತೇವೆ.

ಲಾಕ್‌ಡೌನ್‌: ಆನ್‌ಲೈನ್ ವಹಿವಾಟು ಮಾಡಲು ಈ 5 ವಿಧಾನಗಳನ್ನು ಬಳಸಿ

ಸುಲಭ ಹಣ ವರ್ಗಾವಣೆ:
ಯುಪಿಐ ಸಹಾಯದಿಂದ ನೀವು ಎಲ್ಲಿಯಾದರೂ ಯಾರ ಖಾತೆಗಾದರೂ ಹಣವನ್ನು ವರ್ಗಾಯಿಸಬಹುದು. ಯುಪಿಐನ ಅಪ್ಲಿಕೇಶನ್‌ಗಳು ಬಹಳ ವಿಶೇಷವಾದ ಕಾರಣ ಅವು ಕೇವಲ ಆನ್ಲೈನ್ ಪಾವತಿ ಮಾತ್ರ ಮಾಡುವುದಿಲ್ಲ. ಇದರ ಜೊತೆಗೆ ಇನ್ನೂ ಹಲವು ಕೆಲಸಗಳನ್ನು ನಿಮಿಷಗಳಲ್ಲಿ ಮಾಡಲು ಅನುಕೂಲವಾಗಿವೆ. ಈ ಸಮಯದಲ್ಲಿ ನೀವು BHIM, Phone Pay, Google Pay, Mobikwik, Paytm ನಂತಹ ಅನೇಕ ಅಪ್ಲಿಕೇಶನ್‌ಗಳ ಸಹಾಯದಿಂದ ಯುಪಿಐ ಅನ್ನು ಬಳಸಬಹುದು.

ಯುಪಿಐ ಬಳಸಲು ನೀವು ಸದಸ್ಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಅಂದರೆ ನಿಮ್ಮ ಬ್ಯಾಂಕಿನ ಪರವಾಗಿ ಯುಪಿಐ ಬಳಸುವ ಸೌಲಭ್ಯ ಇರಬೇಕು. ಪ್ರಸ್ತುತ ಎಸ್‌ಬಿಐ (SBI), ಎಚ್‌ಡಿಎಫ್‌ಸಿ (HDFC), ಐಸಿಐಸಿಐ (ICICI) ಬ್ಯಾಂಕ್ ಜೊತೆಗೆ ಅನೇಕ ಬ್ಯಾಂಕುಗಳು ಸಹ ಪಟ್ಟಿಯಲ್ಲಿ ಸೇರಿವೆ. ಎಲ್ಲಾ ಸದಸ್ಯ ಬ್ಯಾಂಕುಗಳ ಪಟ್ಟಿಗಾಗಿ, ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಬಹುದು - https://www.upichalega.com/member-banks.php

ಶೀಘ್ರದಲ್ಲೇ ಬರಲಿದೆಯಂತೆ Google ಸ್ಮಾರ್ಟ್ ಡೆಬಿಟ್ ಕಾರ್ಡ್

ಯುಪಿಐ ಖಾತೆಯನ್ನು ರಚಿಸಲು ನೀವು ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇದರ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಅದರ ಮೇಲೆ ನೋಂದಾಯಿಸಿಕೊಳ್ಳಬೇಕು. ಇದರ ನಂತರ ನೀವು ನಿಮ್ಮ ಖಾತೆಯನ್ನು ಇದಕ್ಕೆ ಸೇರಿಸಬೇಕಾಗಿದೆ. ಖಾತೆಯನ್ನು ಸೇರಿಸಿದ ನಂತರ, ಇಲ್ಲಿ ನೀವು ನಿಮ್ಮ ಬ್ಯಾಂಕ್ ಹೆಸರನ್ನು ಹುಡುಕಬೇಕಾಗಿದೆ. ಬ್ಯಾಂಕಿನ ಹೆಸರನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಖಾತೆಯನ್ನು ನೀವು ಸೇರಿಸಬೇಕಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮ್ಮ ಖಾತೆಗೆ ಲಿಂಕ್ ಮಾಡಿದ್ದರೆ ಅದು ಕಾಣಿಸುತ್ತದೆ. ಖಾತೆಯನ್ನು ಆಯ್ಕೆಮಾಡಿ. ಇದರ ನಂತರ, ಪಾವತಿ ಮಾಡಲು ನಿಮ್ಮ ಎಟಿಎಂ ಕಾರ್ಡ್‌ನ ವಿವರಗಳನ್ನು ನೀವು ಒದಗಿಸಬೇಕು. ಅದನ್ನು ನೀಡುವ ಮೂಲಕ ನಿಮ್ಮ ಯುಪಿಐ ಖಾತೆಯನ್ನು ರಚಿಸಲಾಗುವುದು.

ನೀವು ಯುಪಿಐ ಮೂಲಕ ಬಿಲ್ ಪಾವತಿಸಬಹುದು. ಇದಲ್ಲದೆ ನೀವು ಯಾರ ಖಾತೆಗಾದರೂ ಆನ್‌ಲೈನ್‌ನಲ್ಲಿ ಪಾವತಿಸಬಹುದು. ಅಲ್ಲದೆ ನೀವು ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದು ಮತ್ತು ರೀಚಾರ್ಜ್ ಮಾಡಬಹುದು.

ಎನ್‌ಪಿಸಿಐ ವೆಬ್‌ಸೈಟ್‌ನ ಪ್ರಕಾರ ಈಗ ಖಾತೆಯಿಂದ ಪ್ರತಿದಿನ 1 ಲಕ್ಷ ರೂಪಾಯಿಗಳ ವಹಿವಾಟು ನಡೆಸಬಹುದು. ಈ ಮೇಲಿನ ಮಿತಿಯಡಿಯಲ್ಲಿ ವಿವಿಧ ಬ್ಯಾಂಕುಗಳು ತಮ್ಮದೇ ಆದ ಉಪ ಮಿತಿಗಳನ್ನು ಕಾಯ್ದುಕೊಂಡಿವೆ. ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಬೇಕಾಗುತ್ತದೆ.

Trending News