ಎಲ್‌ಪಿಜಿಯಲ್ಲಿನ ಸಬ್ಸಿಡಿ ರದ್ದು, ಇಲ್ಲಿದೆ ಕಾರಣ

ಮೋದಿ ಸರ್ಕಾರ ಪ್ರಧಾನ್ ಮಂತ್ರಿ ಉಜ್ವಾಲಾ ಯೋಜನೆ ಪ್ರಾರಂಭಿಸಿದ್ದು, ಬಡವರಿಗೆ ಅಗ್ಗದ ಎಲ್‌ಪಿಜಿ ಸಿಲಿಂಡರ್‌ಗಳನ್ನು (ಎಲ್‌ಪಿಜಿ ಸಿಲಿಂಡರ್) ನೀಡಲು ಸಬ್ಸಿಡಿ ನೀಡಲಾಯಿತು.

Last Updated : Jul 30, 2020, 11:15 AM IST
ಎಲ್‌ಪಿಜಿಯಲ್ಲಿನ ಸಬ್ಸಿಡಿ ರದ್ದು, ಇಲ್ಲಿದೆ ಕಾರಣ title=

ನವದೆಹಲಿ: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಲ್‌ಪಿಜಿ ಗ್ಯಾಸ್‌ಗೆ ಸಬ್ಸಿಡಿ ಬರುವುದಿಲ್ಲ ಎಂಬುದನ್ನು ನೀವು ಗಮನಿಸಿರಬೇಕು. ವಾಸ್ತವವಾಗಿ ನೀವು ಮೇ ತಿಂಗಳಿನಿಂದ ಪಡೆದ ಸಬ್ಸಿಡಿಯನ್ನು ಸರ್ಕಾರ ರದ್ದುಗೊಳಿಸಿದೆ. ಪ್ರತಿ ಮನೆಗೂ ಗ್ಯಾಸ್ ಸಿಲಿಂಡರ್‌ಗಳನ್ನು ತಲುಪಿಸುವ ಉದ್ದೇಶದಿಂದ ಪ್ರಧಾನಿ ಉಜ್ವಾಲಾ ಯೋಜನೆ (Ujjawala Yojna) ಯಡಿ ಮೋದಿ ಸರ್ಕಾರ ಬಡವರಿಗೆ ಅಗ್ಗದ ಎಲ್‌ಪಿಜಿ ಸಿಲಿಂಡರ್‌ಗಳನ್ನು (LPG Cylinder) ನೀಡಲು ಸಹಾಯಧನವನ್ನು ನೀಡಲಾಯಿತು. ಆದರೆ ಈಗ ಸಿಲಿಂಡರ್‌ಗಳ ಮೇಲಿನ ರಿಯಾಯಿತಿ ಬಹುತೇಕ ಮುಗಿದಿದೆ. ಎಲ್‌ಪಿಜಿಯಲ್ಲಿ ಪಡೆದ ಸಬ್ಸಿಡಿ (LPG subsidy) ಏಕೆ ಕೊನೆಗೊಂಡಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ...

ಸಬ್ಸಿಡಿ ಸಿಗದಿರಲು ಇದು ಕಾರಣ...
ಗ್ಯಾಸ್ ಸಿಲಿಂಡರ್‌ಗಳ ಮಾರುಕಟ್ಟೆ ಬೆಲೆ ಅಂದರೆ ಸಬ್ಸಿಡಿ ರಹಿತ ಸಿಲಿಂಡರ್‌ಗಳ ಬೆಲೆ ಕಡಿಮೆಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ. ಏತನ್ಮಧ್ಯೆ ಸಬ್ಸಿಡಿ ಸಿಲಿಂಡರ್‌ಗಳ ಬೆಲೆ ಹೆಚ್ಚಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಎರಡು ಸಿಲಿಂಡರ್‌ಗಳ ನಡುವಿನ ಬೆಲೆ ವ್ಯತ್ಯಾಸವು ಬಹುತೇಕ ಸಮಾನವಾಗಿದ್ದು ಸರ್ಕಾರ ಈಗ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುವುದನ್ನು ನಿಲ್ಲಿಸಿದೆ.

ಈಗ ವಾಟ್ಸಪ್‌ನಲ್ಲೇ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಇಲ್ಲಿದೆ ಸುಲಭ ವಿಧಾನ

ಕಳೆದ ವರ್ಷ ಜುಲೈನಲ್ಲಿ ದೆಹಲಿಯಲ್ಲಿ 14.2 ಕೆಜಿ ಗ್ಯಾಸ್ ಸಿಲಿಂಡರ್‌ಗಳ (ಮಾರುಕಟ್ಟೆ ದರ) ಮಾರುಕಟ್ಟೆ ಬೆಲೆ 637 ರೂ. ಆಗಿದ್ದು, ಈಗ ಅದು 594 ರೂ.ಗೆ ಇಳಿದಿದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ವಿರುದ್ಧವಾಗಿ ಸಬ್ಸಿಡಿ ಸಿಲಿಂಡರ್ ಬೆಲೆ 100 ರೂ. ಅಂದರೆ, 494.35 ರೂಗಳಲ್ಲಿ ಕಂಡುಬರುವ ಸಿಲಿಂಡರ್‌ನ ಬೆಲೆ 594 ರೂ.ಗೆ ಏರಿದೆ. ಒಟ್ಟಾರೆಯಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿಲಿಂಡರ್ ಮತ್ತು ಸಬ್ಸಿಡಿ ಸಿಲಿಂಡರ್ ಬೆಲೆ ಸಮಾನವಾಗಿರುತ್ತದೆ. ಈ ಸಂದರ್ಭದಲ್ಲಿ ಸಬ್ಸಿಡಿ ನೀಡುವುದರಲ್ಲಿ ಅರ್ಥವಿಲ್ಲ.

ಸಬ್ಸಿಡಿ ತುಂಬಾ ಕಡಿಮೆ:
ಉಜ್ವಾಲಾ ಯೋಜನೆಯಡಿ 8 ಕೋಟಿ ಜನರಿಗೆ ಗ್ಯಾಸ್ ಸಿಲಿಂಡರ್ ಸಬ್ಸಿಡಿಯ ಲಾಭ ಸಿಗುತ್ತದೆ. ಹೆಚ್ಚಿನ ಮಹಾನಗರಗಳಲ್ಲಿ ಸಬ್ಸಿಡಿ ಬಹುತೇಕ ಮುಗಿದಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ ದೂರದ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 20 ರೂ.ವರೆಗೆ ಸಬ್ಸಿಡಿ ನೀಡಲಾಗುತ್ತಿದೆ.  

ನಿಮಗೂ ಉಚಿತ ಎಲ್‌ಪಿಜಿ ಸಿಲಿಂಡರ್‌ಗಳು ಬೇಕಿದ್ದರೆ ಈ ಯೋಜನೆಯ ಸದಸ್ಯರಾಗಿ...!

2019-20ರ ಆರ್ಥಿಕ ವರ್ಷದಲ್ಲಿ ಎಲ್‌ಪಿಜಿ (LPG) ಸಬ್ಸಿಡಿಗಾಗಿ ಕೇಂದ್ರ ಸರ್ಕಾರ 34,085 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದು ಗಮನಾರ್ಹ. ಅದೇ ರೀತಿ 2020-21ನೇ ಸಾಲಿನಲ್ಲಿ ಸುಮಾರು 37,256.21 ಕೋಟಿ ರೂ. ಮೀಸಲಿಡಲಾಗಿದೆ.

Trending News