Kisan Andolan: ರೈತರ 13 ಬೇಡಿಕೆಗಳ ಪೈಕಿ 10 ಬೇಡಿಕೆಗಳಿಗೆ ಸರ್ಕಾರದ ಅಸ್ತು ! 3 ಬೇಡಿಕೆಗಳ ಬಗ್ಗೆ ಚರ್ಚಿಸುವ ಭರವಸೆ

Kisan Andolan Demands:ಮೂಲಗಳ ಪ್ರಕಾರ ರೈತರ 13 ಬೇಡಿಕೆಗಳ ಪೈಕಿ 10 ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಅಂಗೀಕರಿಸಿದೆ. ಈ ಬಗ್ಗೆ ರೈತ ಮುಖಂಡರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆದಿದೆ.  

Written by - Ranjitha R K | Last Updated : Feb 13, 2024, 04:18 PM IST
  • ರೈತರಿಂದ ದೆಹಲಿ ಚಲೋ ಪಾದಯಾತ್ರೆ
  • ‘ದೆಹಲಿ ಚಲೋ’ ಜಾಥಾದ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್
  • 3 ಬೇಡಿಕೆಗಳ ಕುರಿತು ಚರ್ಚಿಸುವುದಾಗಿ ಸರ್ಕಾರದ ಭರವಸೆ
Kisan Andolan: ರೈತರ 13 ಬೇಡಿಕೆಗಳ ಪೈಕಿ 10 ಬೇಡಿಕೆಗಳಿಗೆ ಸರ್ಕಾರದ ಅಸ್ತು ! 3 ಬೇಡಿಕೆಗಳ ಬಗ್ಗೆ  ಚರ್ಚಿಸುವ ಭರವಸೆ  title=

Kisan Andolan Demands : ಎಂಎಸ್‌ಪಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಂಜಾಬ್, ಹರಿಯಾಣ ಸೇರಿದಂತೆ ಹಲವು ರಾಜ್ಯಗಳ ರೈತರು ದೆಹಲಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಗಡಿಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರೈತರ ‘ದೆಹಲಿ ಚಲೋ’ ಜಾಥಾದ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೈ ಗೊಳ್ಳಲಾಗಿದ್ದು, ಸಂಚಾರ ನಿರ್ಬಂಧ ಹೇರಲಾಗಿದೆ. ರೈತರ 13 ಬೇಡಿಕೆಗಳ ಪೈಕಿ 10 ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಅಂಗೀಕರಿಸಿದೆ ಎನ್ನುವ ಮಾಹಿತಿಯಿದೆ. 

3 ಬೇಡಿಕೆಗಳ ಕುರಿತು ಚರ್ಚಿಸುವುದಾಗಿ ಸರ್ಕಾರದ ಭರವಸೆ : 
ಮೂಲಗಳ ಪ್ರಕಾರ ರೈತರ 13 ಬೇಡಿಕೆಗಳ ಪೈಕಿ 10 ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಅಂಗೀಕರಿಸಿದೆ. ಈ ಬಗ್ಗೆ ರೈತ ಮುಖಂಡರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆದಿದೆ. ಇದರಲ್ಲಿ 13 ಬೇಡಿಕೆಗಳ ಪೈಕಿ 10 ಬೇಡಿಕೆಗಳನ್ನು ತಕ್ಷಣವೇ ಅಂಗೀಕರಿಸಿದ ಸರ್ಕಾರ, 3 ಬೇಡಿಕೆಗಳ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿದೆ. ರೈತ ಮುಖಂಡರು ಮತ್ತು ಕೇಂದ್ರ ಸಚಿವರ ನಡುವೆ ಇತ್ತೀಚೆಗೆ ನಡೆದ ಸಭೆಯಲ್ಲಿ ಕನಿಷ್ಠ ಬೆಂಬಲ ಬೆಲೆ, ಖಾತರಿ ಕಾಯ್ದೆ ಮತ್ತು ಸಾಲ ಮನ್ನಾ ಕುರಿತು ಒಮ್ಮತಕ್ಕೆ ಬರಲಿಲ್ಲ.

ಇದನ್ನೂ ಓದಿ : Tamil Nadu Sri Lankan Navy: ಶ್ರೀಲಂಕಾ ನೌಕಾಪಡೆಯಿಂದ ಬಂಧಿಸಲ್ಪಟ್ಟ 18 ಭಾರತೀಯ ಮೀನುಗಾರರ ಬಿಡುಗಡೆ: ತವರಿಗೆ ವಾಪಾಸ್

ರೈತರು ಸರ್ಕಾರದ ಮುಂದಿಟ್ಟಿರುವ ಬೇಡಿಕೆ ಏನು? : 
- ಎಲ್ಲಾ ಬೆಳೆಗಳ ಖರೀದಿಯನ್ನು ಎಂಎಸ್‌ಪಿಯಲ್ಲಿ ಖಾತರಿಪಡಿಸಲು ಕಾನೂನು ರೂಪಿಸಬೇಕು.
- ಡಾ.ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ಬೆಲೆ ನಿಗದಿ ಮಾಡಬೇಕು. 
- ರೈತರ ಮತ್ತು ರೈತ ಕಾರ್ಮಿಕರ ಸಾಲ ಮನ್ನಾ ಮಾಡಬೇಕು.
- 60 ವರ್ಷ ಮೇಲ್ಪಟ್ಟ ರೈತರಿಗೆ 10,000 ರೂಪಾಯಿ ಪಿಂಚಣಿ ನೀಡಬೇಕು.
- 2013ರ ಭೂಸ್ವಾಧೀನ ಕಾಯ್ದೆಯನ್ನು ಮರು ಜಾರಿಗೊಳಿಸಬೇಕು.
- ಲಖೀಂಪುರ ಖೇರಿ ಘಟನೆಯ ಅಪರಾಧಿಗಳಿಗೆ ಶಿಕ್ಷೆಯಾಗಬೇಕು.
- ಮುಕ್ತ ವ್ಯಾಪಾರ ಒಪ್ಪಂದಗಳನ್ನು ನಿಷೇಧಿಸಬೇಕು.
- ವಿದ್ಯುತ್ ತಿದ್ದುಪಡಿ ಮಸೂದೆ 2020 ರದ್ದುಗೊಳಿಸಬೇಕು.
- MNREGA ಅಡಿಯಲ್ಲಿ, ಪ್ರತಿ ವರ್ಷ 200 ದಿನಗಳ ಕೆಲಸ ಮತ್ತು ದಿನಕ್ಕೆ 700 ರೂ.ಕೂಲಿ 
- ರೈತ ಚಳವಳಿಯಲ್ಲಿ ಮಡಿದ ರೈತರ ಕುಟುಂಬಗಳಿಗೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡಬೇಕು.
- ನಕಲಿ ಬೀಜಗಳು, ಕೀಟನಾಶಕಗಳು ಮತ್ತು ರಸಗೊಬ್ಬರಗಳನ್ನು ಮಾರಾಟ ಮಾಡುವ ಕಂಪನಿಗಳ ವಿರುದ್ಧ ಕಠಿಣ ಕಾನೂನು ಮಾಡಬೇಕು.
- ಮೆಣಸಿನಕಾಯಿ, ಅರಿಶಿನ ಮತ್ತಿತರ ಸಾಂಬಾರ ಪದಾರ್ಥಗಳಿಗೆ ರಾಷ್ಟ್ರೀಯ ಆಯೋಗ ರಚಿಸಬೇಕು.
- ಸಂವಿಧಾನದ 5ನೇ ಶೆಡ್ಯೂಲ್ ಜಾರಿಗೆ ತರುವ ಮೂಲಕ ಆದಿವಾಸಿಗಳ ಭೂಮಿ ಲೂಟಿ ಮಾಡುವುದನ್ನು ನಿಲ್ಲಿಸಬೇಕು.

ಇದನ್ನೂ ಓದಿ : ಮುಸ್ಲಿಂ ರಾಷ್ಟ್ರ ಯುಎಇನಲ್ಲಿ ಮೊದಲ ಬಾರಿಗೆ ಹಿಂದೂ ದೇಗುಲ ಕಟ್ಟಿಸಿದ ವ್ಯಕ್ತಿ ಯಾರು ಗೊತ್ತಾ?

ಕಳೆದ ಬಾರಿ 378 ದಿನಗಳ ಕಾಲ ರೈತರ ಚಳವಳಿ ನಡೆದಿತ್ತು  : 
2020 ರ ಆರಂಭದಲ್ಲಿ, ರೈತರು ಮೂರು ಕೃಷಿ ಕಾನೂನುಗಳ ವಿರುದ್ಧ ಚಳವಳಿಯನ್ನು ಪ್ರಾರಂಭಿಸಿದ್ದರು. 17 ಸೆಪ್ಟೆಂಬರ್ 2020 ರಂದು, ರೈತರು ದೆಹಲಿಯ ಗಡಿಯಲ್ಲಿ ಚಳುವಳಿಯನ್ನು ಪ್ರಾರಂಭಿಸಿದರು. ನಂತರ ಚಳವಳಿಯು 378 ದಿನಗಳವರೆಗೆ ಮುಂದುವರೆಯಿತು. ಈ ಅವಧಿಯಲ್ಲಿ 700 ರೈತರು ಸಾವನ್ನಪ್ಪಿದ್ದಾರೆ ಎನ್ನಲಾಯಿತು. ಆದರೆ ಗುರುನಾನಕ್ ದೇವ್ ಪ್ರಕಾಶ್ ಪರ್ವ್‌ನಲ್ಲಿ, ಪಿಎಂ ನರೇಂದ್ರ ಮೋದಿ ಅವರು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. ನಂತರ ರೈತರು ಡಿಸೆಂಬರ್  11, 2021 ರಂದು ಆಂದೋಲನವನ್ನು ಕೊನೆಗೊಳಿಸುವುದಾಗಿ ಘೋಷಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News