Gujrat Fire Accident: ಸೂರತ್ ನ ವಿವಾ ಪ್ಯಾಕೆಜಿಂಗ್ ಕಂಪನಿಯಲ್ಲಿ ಅಗ್ನಿ ಅವಘಡ, ಐದಂತಸ್ಥಿನ ಕಟ್ಟಡದಿಂದ ಕೆಳಕ್ಕೆ ಜಿಗಿದ ಜನ, ಇಲ್ಲಿದೆ VIDEO

Surat Fire Accident Update - ಸೂರತ್‌ನ (Surat) ಕಡೋದರಾ ವರೆಲಿಯಾ  ವಿವಾ ಪ್ಯಾಕೇಜಿಂಗ್ ಕಂಪನಿಯಲ್ಲಿ (Viva Packaging Company) ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಈ ಘಟನೆಯಲ್ಲಿ ಇದುವರೆಗೆ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Written by - Nitin Tabib | Last Updated : Oct 18, 2021, 10:52 AM IST
  • ಹೈಡ್ರೋಲಿಕ್ ಲಿಫ್ಟ್ ಸಯಾಯದಿಂದ ಸುಮಾರು 125 ಜನರನ್ನು ರಕ್ಷಿಸಲಾಗಿದೆ.
  • ಕಟ್ಟಡದ ಮೊದಲ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ತೀವ್ರವಾಗಿ ಎರಡನೇ ಮಹಡಿಗೆ ಹರಡಿದೆ.
  • ಪ್ರಾಣ ರಕ್ಷಿಸಿಕೊಳ್ಳಲು ಕಾರ್ಮಿಕರು ಕಟ್ಟಡದ ಐದನೇ ಮಹಡಿಯಿಂದ ಕೆಳಕ್ಕೆ ಧುಮುಕಿದ್ದಾರೆ.
Gujrat Fire Accident: ಸೂರತ್ ನ ವಿವಾ ಪ್ಯಾಕೆಜಿಂಗ್ ಕಂಪನಿಯಲ್ಲಿ ಅಗ್ನಿ ಅವಘಡ, ಐದಂತಸ್ಥಿನ ಕಟ್ಟಡದಿಂದ ಕೆಳಕ್ಕೆ ಜಿಗಿದ ಜನ, ಇಲ್ಲಿದೆ VIDEO title=
Kadodara Fire Accident (Photo Courtesy - ANI)

Surat Fire Accident Update - ಗುಜರಾತ್‌ನ (Gujarat) ಸೂರತ್‌ನಲ್ಲಿ ಸೋಮವಾರ ಕಡೋದರಾ ವರೆಲಿಯ (Kadodara's Vareli)  ವಿವಾ ಪ್ಯಾಕೇಜಿಂಗ್ ಕಂಪನಿಯಲ್ಲಿ ಭಾರಿ  ಬೆಂಕಿ ಅವಘಡ ಸಂಭವಿಸಿದ್ದು ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಈ ಅವಘಡ ಸೂರತ್‌ನ ಒಂದು ಪ್ಯಾಕೇಜಿಂಗ್ ಘಟಕದಲ್ಲಿದ್ದು, ಸುಮಾರು 125 ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಮತ್ತು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಸೂರತ್ SDM.

ಸ್ಥಳದಲ್ಲಿ ಹಲವು ಅಗ್ನಿಶಾಮಕ ವಾಹನಗಳು ತಲುಪಿವೆ, ಮಾಹಿತಿಯ ಪ್ರಕಾರ, ಕೆಲಸಗಾರರು ಐದನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅವಘಡ ಸಂಭವಿಸಿದೆ, ಬೆಂಕಿಯ ಘಟನೆ ಬೆಳಕಿಗೆ ಬಂದಾಗ, ಕೆಲವು ಕಾರ್ಮಿಕರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಕಟ್ಟಡದಿಂದ ಕೆಳಕ್ಕೆ ಧುಮುಕಿದ್ದಾರೆ ಎನ್ನಲಾಗಿದೆ. ಸುಮಾರು 125 ಕಾರ್ಮಿಕರನ್ನು ಹೈಡ್ರಾಲಿಕ್ ಲಿಫ್ಟ್ ಮೂಲಕ ರಕ್ಷಿಸಲಾಗಿದೆ.

ಘಟಕದ ಮೊದಲ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನಂತರೆ ವೇಗವಾಗಿ ಇತರ ಮಹಡಿಗಳಿಗೂ ಹರಡಿದೆ. ಕಟ್ಟಡದೊಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಕ್ರೇನ್‌ಗಳನ್ನು ಬಳಸಲಾಗಿದೆ. 

ಬೆಂಕಿ ಎಷ್ಟೊಂದು ತೀವ್ರವಾಗಿತ್ತೆಂದರೆ ಫೈರ್ ಬ್ರಿಗೆಡ್ ಅಧಿಕಾರಿಗಳು ಕಿಟಕಿಯನ್ನು ಮುರಿದು ಒಳಕ್ಕೆ ನುಗ್ಗಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಈ ಅಗ್ನಿ ಅವಘಡಕ್ಕೆ ಕಾರಣ ಇದುವರೆಗೆ ಪತ್ತೆಯಾಗಿಲ್ಲ.

ಇದನ್ನೂ ಓದಿ-Heavy Rain: ಉತ್ತರ ಭಾರತದಾದ್ಯಂತ ವರುಣನ ಆರ್ಭಟ; ಹಲವೆಡೆ ಕೆರೆಯಂತಾದ ರಸ್ತೆಗಳು

ಇದನ್ನೂ ಓದಿ-ಸತತ ಎರಡನೇ ದಿನ ಹೇಡಿತನ ಮೆರೆದ ಉಗ್ರರು, ಸ್ಥಲೀಯರಲ್ಲದ ಕಾರ್ಮಿಕರ ಮನೆ ನುಗ್ಗಿ ಇಬ್ಬರ ಹತ್ಯೆ

ಕಾರ್ಮಿಕರು ಪ್ರಾಣ ರಕ್ಷಿಸಿಕೊಳ್ಳಲು ಐದನೇ ಮಹಡಿಯಿಂದ ಕೆಳಕ್ಕೆ ಧುಮುಕಿದ್ದಾರೆ
ಪ್ರತ್ಯಕ್ಷದರ್ಶಿಗಳ ನೀಡಿರುವ ಮಾಹಿತಿ ಪ್ರಕಾರ ಬೆಂಕಿ ಕಾಣಿಸಿಕೊಂಡಾಗ, ಅನೇಕ ಕಾರ್ಮಿಕರು ಐದನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು, ಜ್ವಾಲೆಯು ಮೇಲಕ್ಕೆ ಏರುತ್ತಿರುವುದನ್ನು ನೋಡಿ, ಕಾರ್ಮಿಕರು ತುಂಬಾ ಹೆದರಿದ್ದಾರೆ ಮತ್ತು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಐದನೇ ಮಹಡಿಯಿಂದ ಜಿಗಿಯಲು ಆರಂಭಿಸಿದ್ದಾರೆ ಎಂದಿದ್ದಾರೆ. ಇದೇ ವೇಳೆ ಬೆಂಕಿಯನ್ನು ನಿಯಂತ್ರಣಕ್ಕೆ ತರುವುದರ ಜೊತೆಗೆ, ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ಒತ್ತು ನೀಡಲಾಗುತ್ತಿದೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಘಟನೆಯ ಕಾರಣವನ್ನು ಸಹ ಕಂಡುಹಿಡಿಯಲಾಗುವುದು ಎಂದು ಸೂರತ್‌ನ ಉನ್ನತ ಅಧಿಕಾರಿಗಳು ಹೇಳಿದ್ದಾರೆ. 

ಇದನ್ನೂ ಓದಿ-ವಿನಾಶಕಾರಿ ಮಿಸೈಲ್ ತಯಾರಿಕೆಯಲ್ಲಿ ತೊಡಗಿದ ಚೀನಾದಿಂದ ಬಾಹ್ಯಾಕಾಶದಲ್ಲಿ ಮಿಸೈಲ್ ಟೆಸ್ಟ್ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News