52 ಚೀನಾ ಆಪ್ ಗಳ ಕುರಿತು ಸರ್ಕಾರಕ್ಕೆ ಅಲರ್ಟ್ ಜಾರಿಗೊಳಿಸಿದ Intelligence, ಇಲ್ಲಿದೆ ಪಟ್ಟಿ

ಚೀನಾ ಜೊತೆಗೆ ಸಂಪರ್ಕ ಹೊಂದಿದ ಹಾಗೂ ಚೀನಾ ಮೂಲದ ಸುಮಾರು 52 ಮೊಬೈಲ್ ಆಪ್ ಗಳನ್ನು ಬ್ಲಾಕ್ ಮಾಡಲು ಅಥವಾ ಜನರಿಗೆ ಅವುಗಳನ್ನು ಬಳಸದಂತೆ ಸೂಚಿಸಲು ಭದ್ರತಾ ಸಂಸ್ಥೆಗಳು ಭಾರತ ಸರ್ಕಾರವನ್ನು ಕೋರಿವೆ. ಈ ಆಪ್ ಗಳ ಬಳಕೆ ಸುರಕ್ಷಿತವಾಗಿಲ್ಲ ಹಾಗೂ ಈ ಆಪ್ ಗಳು ದೊಡ್ಡ ಪ್ರಮಾಣದಲ್ಲಿ ವೈಯಕ್ತಿಕ ಡೇಟಾ ಅನ್ನು ಚೀನಾಗೆ ರವಾನಿಸುತ್ತಿವೆ ಎಂದು ಹೇಳಿವೆ. ಈ ಆಪ್ ಗಳ ಪಟ್ಟಿಯಲ್ಲಿ ಜೂಮ್, ಟಿಕ್ ಟಾಕ್, ಯುಸಿ ಬ್ರೌಸರ್, ಶೇರ್ ಇಟ್ ಹಾಗೂ ಕ್ಲೀನ್ ಮಾಸ್ಟರ್ ಗಳಂತ ಆಪ್ ಗಳು ಶಾಮೀಲಾಗಿವೆ.

Last Updated : Jun 17, 2020, 04:34 PM IST
52 ಚೀನಾ ಆಪ್ ಗಳ ಕುರಿತು ಸರ್ಕಾರಕ್ಕೆ ಅಲರ್ಟ್ ಜಾರಿಗೊಳಿಸಿದ Intelligence, ಇಲ್ಲಿದೆ ಪಟ್ಟಿ title=

ನವದೆಹಲಿ :ಚೀನಾ ಜೊತೆಗೆ ಸಂಪರ್ಕ ಹೊಂದಿದ ಹಾಗೂ ಚೀನಾ ಮೂಲದ ಸುಮಾರು 52 ಮೊಬೈಲ್ ಆಪ್ ಗಳನ್ನು ಬ್ಲಾಕ್ ಮಾಡಲು ಅಥವಾ ಜನರಿಗೆ ಅವುಗಳನ್ನು ಬಳಸದಂತೆ ಸೂಚಿಸಲು ಭದ್ರತಾ ಸಂಸ್ಥೆಗಳು ಭಾರತ ಸರ್ಕಾರವನ್ನು ಕೋರಿವೆ. ಈ ಆಪ್ ಗಳ ಬಳಕೆ ಸುರಕ್ಷಿತವಾಗಿಲ್ಲ ಹಾಗೂ ಈ ಆಪ್ ಗಳು ದೊಡ್ಡ ಪ್ರಮಾಣದಲ್ಲಿ ವೈಯಕ್ತಿಕ ಡೇಟಾ ಅನ್ನು ಚೀನಾಗೆ ರವಾನಿಸುತ್ತಿವೆ ಎಂದು ಹೇಳಿವೆ. ಈ ಆಪ್ ಗಳ ಪಟ್ಟಿಯಲ್ಲಿ ಜೂಮ್, ಟಿಕ್ ಟಾಕ್, ಯುಸಿ ಬ್ರೌಸರ್, ಶೇರ್ ಇಟ್ ಹಾಗೂ ಕ್ಲೀನ್ ಮಾಸ್ಟರ್ ಗಳಂತ ಆಪ್ ಗಳು ಶಾಮೀಲಾಗಿವೆ.

ಗುಪ್ತಚರ ಇಲಾಖೆ ನೀಡಿರುವ ಈ ಪ್ರಸ್ತಾವನೆಯನ್ನು ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿಗಳೂ ಕೂಡ ಬೆಂಬಲಿಸಿದ್ದಾರೆ ಎನ್ನಲಾಗಿದೆ. ಈ ಆಪ್ ಬಲು ಭಾರತದ ಭದ್ರತೆಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಸಂಬಂಧಿಸದಂತೆ ಹೇಳಿಕೆ ನೀಡಿರುವ ಮತ್ತೋರ್ವ ಅಧಿಕಾರಿ, ಗುಪ್ತಚರ ಇಲಾಖೆ ನೀಡಿರುವ ಈ ಪ್ರಸ್ತಾವನೆಯ ಕುರಿತು ಚರ್ಚೆಗಳು ನಡೆಯುತ್ತಿವೆ ಮತ್ತು ಎಲ್ಲ ಮೊಬೈಲ್ ಆಪ್ ಗಳ ಗುಣಮಟ್ಟ ಮತ್ತು ಅದರಿಂದಾಗುವ ಅಪಾಯಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದೆ ವರ್ಷದ ಏಪ್ರಿಲ್ ನಲ್ಲಿ ಅಡ್ವೈಸರಿ ಬಿಡುಗಡೆಗೊಳಿಸಿದ್ದ ಕೇಂದ್ರ ಗೃಹ ಸಚಿವಾಲಯ, ನ್ಯಾಷನಲ್ ಸೈಬರ್ ಸಿಕ್ಯೂರಿಟಿ ಏಜೆನ್ಸಿ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ ಆಫ್ ಇಂಡಿಯಾ ಪ್ರಸ್ತಾವನೆಯ ಮೇರೆಗೆ ಈ ಅಡ್ವೈಸರಿ ಜಾರಿಗ್ಲಿಸಲಾಗಿದೆ ಎಂದು ಹೇಳಿತ್ತು. ಸರ್ಕಾರದ ವ್ಯವಹಾರಗಳಲ್ಲಿ ಜೂಮ್ ಆಪ್ ಬಳಕೆಯನ್ನು ನಿಷೇಧಿಸಿದ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲನೆಯ ದೇಶವಲ್ಲ ಎಂಬುದು ಇಲ್ಲಿ ಉಲ್ಲೇಖೀಯ. ಭಾರತ ದೇಶಕ್ಕೂ ಮೊದಲು ತೈವಾನ್ ಕೂಡ ತನ್ನ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜೂಮ್ ಆಪ್ ಬಳಕೆ ನಿಷೇಧಿಸಿತ್ತು. ಜರ್ಮನಿ ಹಾಗೂ ಅಮೇರಿಕಾಗಳೂ ಕೂಡ ಇದೆ ಕ್ರಮವನ್ನು ಕೈಗೊಂಡಿವೆ. ಗೃಹ ಸಚಿವಾಲಯದ ಅಡ್ವೈಸರಿಗೆ ಉತ್ತರ ನೀಡಿದ್ದ ಕಂಪನಿ, ಬಳಕೆದಾರರ ಸುರಕ್ಷತೆಯ ಕುರಿತು ಗಂಭೀರವಾಗಿರುವುದಾಗಿ ಹೇಳಿತ್ತು.

ಸುರಕ್ಷತೆಗೆ ಧಕ್ಕೆಯುಂಟುಮಾಡುವ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಕ್ರಮ ಕೈಗೊಳ್ಳಲು ಈಗಾಗಲೇ ಬೇಡಿಕೆಗಳು ಕೇಳಿಬಂದಿವೆ. ವೀಡಿಯೊ ಹಂಚಿಕೆ ಅಪ್ಲಿಕೇಶನ್‌ನ ಮಾಲೀಕತ್ವದ ಚೀನೀ ಇಂಟರ್ನೆಟ್ ಕಂಪನಿ ಬೈಟ್ ಡ್ಯಾನ್ಸ್‌ನಂತಹ ಕಂಪನಿಗಳು ಇದನ್ನು ನಿರಾಕರಿಸಿದೆ. ಆದರೆ ಚೀನೀ ಡೆವಲಪರ್‌ಗಳು ಅಥವಾ ಚೈನೀಸ್ ಲಿಂಕ್‌ಗಳೊಂದಿಗೆ ವಿನ್ಯಾಸಗೊಳಿಸಲಾದ ಅಪ್ಲಿಕೇಶನ್‌ಗಳು ಆಂಡ್ರಾಯ್ಡ್ ಅಥವಾ ಐಒಎಸ್ ಆಗಿರಲಿ, ಅವುಗಳನ್ನು ಸ್ಪೈವೇರ್ ಅಥವಾ ಇತರ ಹಾನಿಕಾರಕ ಸಾಮಾನುಗಳಾಗಿ ಬಳಸಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಚೀನಾದ ಅಪ್ಲಿಕೇಶನ್‌ಗಳನ್ನು ತಮ್ಮ ಡೇಟಾ ಸುರಕ್ಷತೆಗೆ ಧಕ್ಕೆ ತರುವ ಕಾರಣ ಅದನ್ನು ಬಳಸದಂತೆ ಭದ್ರತಾ ಏಜೆನ್ಸಿಗಳು ಭದ್ರತಾ ಸಿಬ್ಬಂದಿಗೆ ಸಲಹೆ ನೀಡಿವೆ ಎಂಬ ವರದಿಗಳಿವೆ.

ಪಾಶ್ಚಿಮಾತ್ಯ ದೇಶಗಳಲ್ಲಿನ ಭದ್ರತಾ ಸಂಸ್ಥೆಗಳು ಚೀನಾಕ್ಕೆ ಸಂಬಂಧಿಸಿದ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಬಗ್ಗೆಯೂ ಇದೇ ರೀತಿಯ ಕಳವಳ ವ್ಯಕ್ತಪಡಿಸಿವೆ. ಯುದ್ಧದಂತಹ ಸಂದರ್ಭದಲ್ಲಿ, ಈ ಆಪ್ ಗಳು ಸಂವಹನ ಸೇವೆಗಳಿಗೆಧಕ್ಕೆ ತರಲಿವೆ ಎಂದೂ ಕೂಡ ವಾದ ಮಂಡಿಸಲಾಗುತ್ತಿದೆ.

ಈ ಕೆಳಗಿನ ಆಪ್ ಗಳು ಪ್ರಮುಖವಾಗಿ ರೇಡಾರ್ ಮೇಲಿವೆ

  • TikTok, Vault-Hide, Vigo Video, Bigo Live, Weibo
  • WeChat, SHAREit, UC News, UC Browser
  • BeautyPlus, Xender, ClubFactory, Helo, LIKE
  • Kwai, ROMWE, SHEIN, NewsDog, Photo Wonder
  • APUS Browser, VivaVideo- QU Video Inc
  • Perfect Corp, CM Browser, Virus Cleaner (Hi Security Lab)
  • Mi Community, DU recorder, YouCam Makeup
  • Mi Store, 360 Security, DU Battery Saver, DU Browser
  • DU Cleaner, DU Privacy, Clean Master – Cheetah
  • CacheClear DU apps studio, Baidu Translate, Baidu Map
  • Wonder Camera, ES File Explorer, QQ International
  • QQ Launcher, QQ Security Centre, QQ Player, QQ Music
  • QQ Mail, QQ NewsFeed, WeSync, SelfieCity, Clash of Kings
  • Mail Master, Mi Video call-Xiaomi, Parallel Space

Trending News