ಹೆಗ್ಗಡೆವಾರ್ ಭಾರತ ಮಾತೆಯ ಮಹಾನ್ ಸುಪುತ್ರ -ಪ್ರಣಬ್ ಮುಖರ್ಜೀ

    

Last Updated : Jun 7, 2018, 06:05 PM IST
ಹೆಗ್ಗಡೆವಾರ್ ಭಾರತ ಮಾತೆಯ ಮಹಾನ್ ಸುಪುತ್ರ -ಪ್ರಣಬ್ ಮುಖರ್ಜೀ  title=

ನಾಗಪುರ್: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗುರುವಾರದಂದು ಆರ್ಎಸ್ಎಸ್ ಸಂಸ್ಥಾಪಕ ಕೆ.ಬಿ. ಹೆಗ್ಗಡೆವಾರ ಅವರ ನಾಗ್ಪುರದಲ್ಲಿನ ಜನ್ಮಸ್ಥಳಕ್ಕೆ ಆಗಮಿಸಿದರು.
 
ಇದೇ ವೇಳೆ ಮುಖರ್ಜಿ ಅವರನ್ನು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ವಾಗತಿಸಿದರು.  ಇಂದು ಆರ್ಎಸ್ಎಸ್ನ ಮೂರನೇ ವರ್ಷದ ಅಧಿಕಾರಿಗಳ ತರಬೇತಿಯ ಶಿಬಿರವನ್ನು ಶೀಘ್ರದಲ್ಲೇ ರೆಸಿಂಬಾಗ್ನಲ್ಲಿ ತನ್ನ ಪ್ರಧಾನ ಕಚೇರಿಯಲ್ಲಿ ಮಾತನಾಡಲಿದ್ದಾರೆ.

ಹಲವು ವಿರೋಧಗಳ ನಡುವೆಯೇ ಇಂದು ಆರ್ ಎಸ್ ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ಪ್ರಣಬ್ ಮುಖರ್ಜೀ ಇಂದು ಭೇಟಿ ಪುಸ್ತಕದಲ್ಲಿ ಹೆಗ್ಗಡೆವಾರ್ ಅವರನ್ನು ಭಾರತದ ಮಹಾನ್ ಪುತ್ರ ಎಂದು ಬರೆದಿದ್ದಾರೆ "ನಾನು ಭಾರತ ಮಾತೆಯ ಮಹಾನ್ ಸುಪುತ್ರನಿಗೆ ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದು" ಪ್ರಣಬ್ ದಾ ತಮ್ಮ ಹೇಳಿಕೆಯನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. 

 

Trending News