ನವದೆಹಲಿ: ಸರ್ಕಾರಿ ಉದ್ಯೋಗಗಳಿಗೆ ನೇಮಕವು 2020-21ರ ಹಣಕಾಸು ವರ್ಷದಲ್ಲಿ (ಎಫ್ವೈ 21) ಮೂರು ವರ್ಷಗಳಲ್ಲಿ ಕನಿಷ್ಠ ಮಟ್ಟವನ್ನು ತಲುಪಿದೆ.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು 27% ರಷ್ಟು ಕಡಿಮೆ ಜನರನ್ನು ನೇಮಿಸಿಕೊಂಡರೆ, ರಾಜ್ಯಗಳು 21% ರಷ್ಟು ಕಡಿಮೆ ಜನರನ್ನು ನೇಮಿಸಿಕೊಂಡಿವೆ ಎಂದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (ಎನ್ಪಿಎಸ್) ವೇತನದಾರರ ಅಂಕಿ ಅಂಶಗಳು ಹೇಳುತ್ತಿವೆ.ಹಣಕಾಸು ವರ್ಷ- 20 ರಲ್ಲಿ ಕೇಂದ್ರ ಸರ್ಕಾರವು ಸುಮಾರು 119,000 ಜನರನ್ನು ಶಾಶ್ವತ ಪಟ್ಟಿಯಲ್ಲಿ ನೇಮಕ ಮಾಡಿತು, ಆದರೆ ಹಣಕಾಸು ವರ್ಷ- 21 ರಲ್ಲಿ ಈ ಸಂಖ್ಯೆ 87,423 ಕ್ಕೆ ಇಳಿದಿದೆ.
ಇದನ್ನೂ ಓದಿ-ಕೊರೊನಾ ಲಸಿಕೆಯಿಂದ ತೊಂದರೆ ಆದಲ್ಲಿ ಪರಿಹಾರ ನೀಡುವುದಾಗಿ ಹೇಳಿದ ಈ ಕಂಪನಿ..!
ಅಂತೆಯೇ, ರಾಜ್ಯಗಳು ಹಣಕಾಸು ವರ್ಷ- 21 ರಲ್ಲಿ 389,052 ಜನರನ್ನು ನೇಮಿಸಿಕೊಂಡಿದ್ದು, ಇದು ಹಿಂದಿನ ವರ್ಷಕ್ಕಿಂತ ಸುಮಾರು 107,000 ರಷ್ಟು ಕಡಿಮೆಯಾಗಿದೆ.ಸಾಂಕ್ರಾಮಿಕ ರೋಗದ ಮಧ್ಯದಲ್ಲಿ ನೇಮಕ ಮಾಡುವುದನ್ನು ಖಾಸಗಿ ವಲಯ ಮಾತ್ರವಲ್ಲ, ಸರ್ಕಾರದ ಮಟ್ಟದಲ್ಲಿಯೂ ಕುಂಠಿತಗೊಂಡಿದೆ ಎನ್ನುವುದನ್ನು ಈ ಅಂಕಿ ಅಂಶಗಳು ಸೂಚಿಸುತ್ತವೆ.
ಸರ್ಕಾರದ ನೇಮಕಾತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಮತ್ತು ಈ ಪ್ರವೃತ್ತಿ ಮುಂದುವರಿಯುತ್ತದೆ ಏಕೆಂದರೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಮತ್ತು ರಾಜ್ಯಗಳಲ್ಲಿನ ಇಲಾಖೆಗಳು ಶಾಶ್ವತ ಸ್ಥಾನಗಳನ್ನು ಕಡಿಮೆಗೊಳಿಸುತ್ತಿವೆ ಮತ್ತು ಹೆಚ್ಚಾಗಿ ಗುತ್ತಿಗೆ ಉದ್ಯೋಗದ ಮೇಲೆ ಅವಲಂಬಿತವಾಗುತ್ತದೆ.ಖಾಯಂ ನೌಕರರ ಬದಲಾಗಿ ಮಲ್ಟಿ-ಟಾಸ್ಕಿಂಗ್ ಗುತ್ತಿಗೆ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಭಾರತೀಯ ಸಾರ್ವಜನಿಕ ಸೇವಾ ನೌಕರರ ಒಕ್ಕೂಟದ (ಐಪಿಎಸ್ಇಎಫ್) ಪ್ರಧಾನ ಕಾರ್ಯದರ್ಶಿ ಪ್ರೇಮ್ ಚಂದ್ ಹೇಳಿದ್ದಾರೆ.
ಇದನ್ನು ಓದಿ-Facebook Bug: ಹಲವು Instagram ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
Android Link - https://bit.ly/3hDyh4G
Apple Link - https://apple.co/3hEw2hy