ಕಳೆದ 15 ವರ್ಷಗಳಲ್ಲಿ ಮೊದಲ ಬಾರಿಗೆ ಪಾತಾಳಕ್ಕೆ ಕುಸಿದ Home Loan ಬಡ್ಡಿದರ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೊ ದರವನ್ನು ಕಡಿಮೆ ಮಾಡಿದ ನಂತರ, ಗೃಹ ಸಾಲದ ಬಡ್ಡಿದರವು ಶೇಕಡಾ 7 ಕ್ಕೆ ಇಳಿಯುವ ನಿರೀಕ್ಷೆಯಿದೆ.  

Last Updated : May 24, 2020, 01:29 PM IST
ಕಳೆದ 15 ವರ್ಷಗಳಲ್ಲಿ ಮೊದಲ ಬಾರಿಗೆ ಪಾತಾಳಕ್ಕೆ ಕುಸಿದ Home Loan ಬಡ್ಡಿದರ title=

ನವದೆಹಲಿ: ಮನೆ ಖರೀದಿಸಲು ಯೋಚನೆ ನಡೆಸುತ್ತಿರುವ ಜನರಿಗಾಗಿ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೊ ದರವನ್ನು ಕಡಿಮೆ ಮಾಡಿದ ನಂತರ, ಗೃಹ ಸಾಲದ ಬಡ್ಡಿದರವು ಶೇಕಡಾ 7 ಕ್ಕೆ ಇಳಿಯುವ ನಿರೀಕ್ಷೆಯಿದೆ. ಇದು 15 ವರ್ಷಗಳಲ್ಲಿ ಗೃಹ ಸಾಲಕ್ಕೆ ಅತ್ಯಂತ ಕಡಿಮೆ ಬಡ್ಡಿದರವಾಗಲಿದೆ. ಆರ್‌ಬಿಐ ಶುಕ್ರವಾರ ರೆಪೊ ದರವನ್ನು ಶೇಕಡಾ 0.40 ರಷ್ಟು ಕಡಿಮೆ ಮಾಡಿದೆ. ಮನೆ ಸೇರಿದಂತೆ ಇತರ ಸಾಲಗಳ ಬಡ್ಡಿದರವು ರೆಪೊ ದರವನ್ನು ಅವಲಂಬಿಸಿರುತ್ತದೆ.

ಅಷ್ಟೇ ಅಲ್ಲ ಸಾಲ ಮರುಪಾವತಿಸಲು ಇಎಂಐಗೂ ಕೂಡ ಆರ್‌ಬಿಐ ಮತ್ತೆ ಮೂರು ತಿಂಗಳ ಪರಿಹಾರ ನೀಡಿದೆ. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ, ಹಣದ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಆದರೆ ಅವರು ಈ ಇಎಂಐ ಮೊತ್ತದ ನಂತರ ಬಡ್ಡಿಯನ್ನು ಸಹ ಪಾವತಿಸಬೇಕಾಗಲಿದೆ. 15 ವರ್ಷಗಳ ಅವಧಿಗೆ 30 ಲಕ್ಷ ರೂ.ಗಳ ಗೃಹ ಸಾಲಕ್ಕೆ ಸುಮಾರು 2.34 ಲಕ್ಷ ರೂ. ಇದು 8 ಇಎಂಐಗಳಿಗೆ ಸಮನಾಗಿರಲಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್‌ಬಿಐ) ಈಗಾಗಲೇ 30 ಲಕ್ಷ ರೂ.ವರೆಗೆ ಗೃಹ ಸಾಲವನ್ನು ತೆಗೆದುಕೊಂಡ ಅಥವಾ ತೆಗೆದುಕೊಳ್ಳಲು ಬಯಸಿರುವ ಗ್ರಾಹಕರ ಬಡ್ಡಿದರವು ಶೇಕಡಾ 7 ಕ್ಕೆ ಇಳಿಯಲಿದೆ. ಸದ್ಯ ಅದು ಶೇಕಡಾ 7.4 ಆಗಿದೆ. 30 ಲಕ್ಷದಿಂದ 75 ಲಕ್ಷ ರೂಪಾಯಿಗಳ ಗೃಹ ಸಾಲ ಬಡ್ಡಿದರವು ಶೇಕಡಾ 7.65 ರಿಂದ 7.25 ಕ್ಕೆ ಇಳಿಯಲಿದೆ. 75 ಲಕ್ಷ ರೂ.ಗಿಂತ ಹೆಚ್ಚಿನ ಗೃಹ ಸಾಲವು ಶೇಕಡಾ 7.75 ರಿಂದ 7.35 ಕ್ಕೆ ಇಳಿಯಲಿದೆ. ಮಹಿಳಾ ಗ್ರಾಹಕರಿಗೆ, ಬಡ್ಡಿದರ 0.05% ಕಡಿಮೆ ಇರುತ್ತದೆ.

ಗೃಹ ಸಾಲದ ಬಡ್ಡಿದರವನ್ನು ಕಳೆದ ವರ್ಷ ಅಕ್ಟೋಬರ್‌ನಿಂದ ರೆಪೊ ದರಕ್ಕೆ ಜೋಡಿಸಲಾಗಿದೆ. ಅಂದಿನಿಂದ ಇದುವರೆಗೆ ಬಡ್ಡಿದರವನ್ನು ಶೇಕಡಾ 1.4 ರಷ್ಟು ಇಳಿಕೆ ಮಾಡಲಾಗಿದೆ. 30 ಲಕ್ಷ ರೂ.ಗಳ ಗೃಹ ಸಾಲದಲ್ಲಿ ಇಎಂಐ 19,959 ಕ್ಕೆ ಇಳಿದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಎಂಐ 22,885 ರೂ. ಆಗಿತ್ತು, ಅಕ್ಟೋಬರ್‌ನಿಂದ ಇಎಂಐ 2,896 ರೂ. ರಷ್ಟು ಕಡಿತಗೊಳಿಸಲಾಗಿದೆ.

ಹೌಸಿಂಗ್ ಫೈನಾನ್ಸ್ ಕಂಪನಿಗಳು (ಎಚ್‌ಎಫ್‌ಸಿ) ಮತ್ತು ತಮ್ಮ ಗೃಹ ಸಾಲ ಬಡ್ಡಿದರವನ್ನು ರೆಪೊ ದರಕ್ಕೆ ಇನ್ನೂ ಜೋಡಿಸದ ಬ್ಯಾಂಕುಗಳು, ಗೃಹ ಸಾಲದ ಬಡ್ಡಿ ದರವನ್ನು ಕಡಿತಗೊಳಿಸುವ ಸಾಧ್ಯತೆ ಕಡಿಮೆ ಎಂದು ವರ್ತಿಸಲಾಗುತ್ತಿದ್ದು, ಈ ಸಂಸ್ಥೆಗಳಿಂದ ಸಾಲ ಪಡೆದವರಿಗೆ ಇದರ ಲಾಭ ಸಿಗುವುದಿಲ್ಲ ಎನ್ನಲಾಗಿದೆ. ಆದರೆ, ಸ್ಪರ್ಧೆಯನ್ನು ಪರಿಗಣಿಸಿ ಎಚ್‌ಡಿಎಫ್‌ಸಿ ಗೃಹ ಸಾಲ ಬಡ್ಡಿ ದರವನ್ನು ಶೇಕಡಾ 7.5 ಕ್ಕೆ ಇಳಿಸಿದೆ. ಎಚ್‌ಡಿಎಫ್‌ಸಿ ದೇಶದ ಅತಿದೊಡ್ಡ ಸಾಲ ನೀಡುವ ಕಂಪನಿಯಾಗಿರುವುದು ಇಲ್ಲಿ ಗಮನಾರ್ಹ.

Trending News