ಮನೆಯಲ್ಲಿಯೇ ಕುಳಿತು ತಯಾರಿಸಿ ಈ ಪವರ್ಫುಲ್ HAND SANITIZER

ವಾರಣಾಸಿಯಲ್ಲಿರುವ ಬನಾರಸ್ ಹಿಂದೂ ಯೂನಿವರ್ಸಿಟಿಯ ಐಐಟಿ ವಿಭಾಗ ಮನೆಯಲ್ಲಿಯೇ ಪವರ್ಫುಲ್ ಹ್ಯಾಂಡ್ ಸ್ಯಾನಿಟೈಸರ್ ತಯಾರಿಸುವ ವಿಧಿಯನ್ನು ಹೇಳಿದೆ.  

Last Updated : Mar 18, 2020, 09:03 PM IST
ಮನೆಯಲ್ಲಿಯೇ ಕುಳಿತು ತಯಾರಿಸಿ ಈ ಪವರ್ಫುಲ್ HAND SANITIZER title=

ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಇಡೀ ವಿಶ್ವಾದ್ಯಂತ ಭೀತಿಯ ವಾತಾವರಣ ನಿರ್ಮಾಣಗೊಂಡಿದೆ. ಕೊರೊನಾ ವೈರಸ್ ನಿಂದ ಪಾರಾಗಲು ಬೇಕಾಗಿರುವ ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳಿಗಾಗಿ ಮಾರುಕಟ್ಟೆಯಲ್ಲಿ ಕೊರತೆ ಎದುರಾಗಿದೆ. ಇನ್ನೊಂದೆಡೆ ಸ್ಯಾನಿಟೈಸರ್ ಗಳ ಬ್ಲಾಕ್ ಮಾರ್ಕೆಟಿಂಗ್ ಕೂಡ ನಡೆಯುತ್ತಿದೆ. ಇವುಗಳನ್ನು ದುಪ್ಪಟ್ಟು ಬೆಲೆಯಲ್ಲಿ ಮಾರಾಟ ನಡೆಸಲಾಗುತ್ತಿದೆ. ಜೊತೆಗೆ ಮಾರುಕಟ್ಟೆಯಲ್ಲಿ ನಕಲಿ ಹಾಗೂ ಕಳಪೆ ಮಟ್ಟದ ಸ್ಯಾನಿಟೈಸರ್ ಗಳೂ ಕೂಡ ಸಿಗಲು ಆರಂಭಿಸಿವೆ.

ಎತನ್ಮಧ್ಯೆ ವಾರಣಾಸಿಯಲ್ಲಿರುವ ಬನಾರಸ್ ಹಿಂದೂ ಯೂನಿವರ್ಸಿಟಿಯ ಐಐಟಿ ವಿಭಾಗ ಮನೆಯಲ್ಲಿಯೇ ಪವರ್ಫುಲ್ ಹ್ಯಾಂಡ್ ಸ್ಯಾನಿಟೈಸರ್ ತಯಾರಿಸುವ ವಿಧಿಯನ್ನು ಹೇಳಿದೆ. ಇದರಿಂದ ಮನೆಲ್ಯಲ್ಲಿಯೇ ಕುಳಿತು ಜನರು ಕೂಡ ಕೊರೊನಾ ವೈರಸ್ ನಿಂದ ಮುಕ್ತಿ ಪಡೆಯುವ ಮಾರ್ಗ ಸಿಕ್ಕಂತಾಗಿದೆ.
 
ಈ ಕುರಿತು ಹೇಳಿಕೆ ನೀಡಿರುವ BHUನ ಬಯೋ ಮೆಡಿಕಲ್ ವಿಭಾಗದ ಪ್ರೊಫೆಸ್ಸರ್ ಡಾ. ಮಾರ್ಷಲ್ ಧಯಾಲ್ 100 ML ಉತ್ತಮ ದರ್ಜೆಯ ಸ್ಯಾನಿಟೈಸರ್ ಅನ್ನು ಕೇವಲ ರೂ.50 ಹಣ ವ್ಯಯಿಸಿ ಮನೆಯಿಂದಲೇ ಸಿದ್ಧಪಡಿಸಬಹುದಾಗಿದೆ ಎಂದಿದ್ದಾರೆ. ಇದನ್ನು ಸಿದ್ಧಪಡಿಸಲು ಯಾವುದೇ ರಾಕೆಟ್ ಸೈನ್ಸ್ ನ ಅಗತ್ಯತೆ ಇಲ್ಲ ಎಂದು ಅವರು ಹೇಳಿದ್ದಾರೆ. ಇದಕ್ಕಾಗಿ ಶೇ.99ರಷ್ಟು ಶುದ್ಧ ಅಲ್ಕೋಹಾಲ್, ಶೇ.30ರಷ್ಟು ಲೋಳೆಸರ ಹಾಗೂ ಸೋಡಿಯಂ ಹೈಡ್ರಾಕ್ಸೈಡ್(ಕಾಸ್ಟಿಕ್ ಸೋಡಾ)ನ ಮಿಶ್ರಣವನ್ನು ಮಿಕ್ಸರ್ ನಲ್ಲಿ ಹಾಕಬೇಕು ಹಾಗೂ ಎರಡು ನಿಮಿಷಗಳ ಬಳಿಕ ಇದನ್ನು ಸೋಸಿದಾಗ ಉತ್ತಮ ಕ್ವಾಲಿಟಿಯ ಹ್ಯಾಂಡ್ ಸ್ಯಾನಿಟೈಸರ್ ಸಿದ್ಧವಾಗಲಿದೆ ಎಂದಿದ್ದಾರೆ.

ಅಲ್ಕೋಹಾಲ್ ಜಾಗದಲ್ಲಿ ನೀವು ಐಸೊಪ್ರೋಪೆನಾಲ್ ಅನ್ನು ಕೂಡ ಎಲೋವೆರಾ ಜೊತೆಗೆ ಮಿಶ್ರಣ ಮಾಡಿ ಬಳಸಬಹುದಾಗಿದೆ. ಇದು ತುಂಬಾ ಸುಲಭವಾಗಿದ್ದು, ಮನೆಯಲ್ಲಿಯೇ ಕುಳಿತು ಯಾವುದೇ ವ್ಯಕ್ತಿ ಅಥವಾ ಮಹಿಳೆಯರೂ ಕೂಡ ಇದನ್ನು ಸಿದ್ಧಪಡಿಸಬಹುದು ಎಂದು ಅವರು ಹೇಳಿದ್ದಾರೆ.

ಪದೆ ಪದೆ ಕೈಗಳನ್ನು ತೊಳೆಯುವುದರಿಂದ ಕೈಗಳಲ್ಲಿ ಒರಟುತನ ಉಂಟಾಗುವ ಸಾಧ್ಯತೆ ಇರುವ ಕಾರಣ ಕೈಗಳನ್ನು ಮೃದುವಾಗಿಡಲು ಎಲೋವೆರಾ ಬಳಕೆ ಮಾಡುವುದು ಅವಶ್ಯಕವಾಗಿದೆ. ಕೇವಲ 4 ರಿಂದ 5 ನಿಮಿಷದಲ್ಲಿ ನೀವು ಇದನ್ನು ಮನೆಯಲ್ಲಿ ಸಿದ್ಧಪಡಿಸಬಹುದು. ಇಂತಹ ಸ್ಯಾನಿಟೈಸರ್ ಅನ್ನು ತಾವು ಮನೆಯಲ್ಲಿಯೇ ಸಿದ್ಧಪಡಿಸಿ ತಮ್ಮ ಮನೆಯ ಪರಿಸರದಲ್ಲಿ ವಾಸಿಸುವ ಬಡವರಿಗೆ ಉಚಿತವಾಗಿ ವಿತರಿಸಿರುವುದಾಗಿ ಪ್ರೊಫೆಸರ್ ಹೇಳಿದ್ದಾರೆ.

Trending News