ಹೈದರಾಬಾದ್: ಪತ್ನಿಯಿಂದ ಸಾಲ ಪಡೆದು ಲಾಟರಿ ಖರೀದಿಸಿದ್ದ ರೈತನಿಗೆ ಸಿಕ್ತು 28 ಕೋಟಿ ರೂ.!

ಹೈದರಾಬಾದ್‌ಗೆ ಮರಳಿದ ರಿಕ್ಕಲಾ ವಿಲಾಸ್, ದುಬೈನಲ್ಲಿ ನಡೆದ ಬಿಗ್ ರಾಫೆಲ್ ಡ್ರಾದಲ್ಲಿ 28.43 ಕೋಟಿ ರೂ. ಪಡೆದಿದ್ದಾರೆ.

Last Updated : Aug 5, 2019, 09:59 AM IST
ಹೈದರಾಬಾದ್: ಪತ್ನಿಯಿಂದ ಸಾಲ ಪಡೆದು ಲಾಟರಿ ಖರೀದಿಸಿದ್ದ ರೈತನಿಗೆ ಸಿಕ್ತು 28 ಕೋಟಿ ರೂ.! title=
Representative image

ಹೈದರಾಬಾದ್: ನಿಜಾಮಾಬಾದ್‌ನ ರೈತ ತನ್ನ ಹೆಂಡತಿಯಿಂದ  ಸಾಲ ಪಡೆದ ಹಣದಿಂದ ಯುಎಇಯಲ್ಲಿ ಲಾಟರಿ ಟಿಕೆಟ್ ಖರೀದಿಸಿ, 4 ಮಿಲಿಯನ್ ಯುಎಸ್ ಡಾಲರ್ (28 ಕೋಟಿ ರೂ.) ಗೆದ್ದಿದ್ದಾನೆ. ಲಾಟರಿ ಟಿಕೆಟ್‌ನ ಬೆಲೆ 20,000 ರೂ. ಎಂದು ಹೇಳಲಾಗಿದೆ.

ಹೈದರಾಬಾದ್‌ಗೆ ಮರಳಿದ ರಿಕ್ಕಲಾ ವಿಲಾಸ್, ದುಬೈನಲ್ಲಿ ನಡೆದ ಬಿಗ್ ರಾಫೆಲ್ ಡ್ರಾದಲ್ಲಿ 28.43 ಕೋಟಿ ರೂ. ಗೆದ್ದಿದ್ದಾರೆ.

ವರದಿಗಳ ಪ್ರಕಾರ, ನಿಜಾಮಾಬಾದ್ ಜಿಲ್ಲೆಯವರಾದ ರೈತ ರಿಕ್ಕಲಾ ವಿಲಾಸ್ 45 ದಿನಗಳ ಕಾಲ ಯುಎಇಯಲ್ಲಿದ್ದರು ಮತ್ತು ಅವರ ವೀಸಾ ಅವಧಿ ಮುಗಿದ ನಂತರ ಅಲ್ಲಿಂದ ಹಿಂದಿರುಗಿದ್ದರು. 

ಯುಎಇಯಲ್ಲಿ, ಅವರು ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಅವರು ಕೆಲ ಸಮಯ ಚಾಲಕರಾಗಿಯೂ ಕೆಲಸ ಮಾಡಿದರು. ಆಗಸ್ಟ್ 3 ರಂದು, ಅವರು 4 ಮಿಲಿಯನ್ ಯುಎಸ್ ಡಾಲರ್ ಮೊತ್ತವನ್ನು ಲಾಟರಿಯಲ್ಲಿ ಗೆದ್ದಿದ್ದಾರೆ ಎಂದು ತಿಳಿಸಲಾಗಿದೆ.

Trending News