ನನಗೆ ದೇವರಿಂದ ಯಾವುದೇ ಸೂಚನೆಗಳು ಬರುತ್ತಿಲ್ಲ..! ರಾಹುಲ್ ಗಾಂಧಿ ಹೀಗೆ ಹೇಳಿದ್ದೇಕೆ?

 ಕೇರಳದ ವಯನಾಡಿನಿಂದ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ನಂತರ ರಾಹುಲ್ ಗಾಂಧಿ ಮೊದಲ ಬಾರಿಗೆ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

Written by - Manjunath N | Last Updated : Jun 12, 2024, 05:21 PM IST
  • ಇದೆ ವೇಳೆ ತಮ್ಮ ಭಾಷಣದಲ್ಲಿ ನರೇಂದ್ರ ಮೋದಿಯವರನ್ನು ತರಾಟೆಗೆ ಅವರು ಪ್ರಧಾನಿಗೆ ಬಂದಂತೆ ಏನು ಮಾಡಬೇಕೆಂಬುದರ ಬಗ್ಗೆ ನನಗೆ ದೇವರಿಂದ ಯಾವುದೇ ಸೂಚನೆಗಳು ಬರುವುದಿಲ್ಲ ಎಂದು ಹೇಳಿದರು.
  • ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದ ಅವರು, ದೇಶದ ಪ್ರಮುಖ ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಅದಾನಿಗೆ ಹಸ್ತಾಂತರಿಸುವಂತೆ ದೇವರು ಪ್ರಧಾನಿಗೆ ನಿರ್ದೇಶಿಸಿದ್ದಾರೆ.
  • ಆದರೆ ನಾನೊಬ್ಬ ಮನುಷ್ಯ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನನಗೆ ದೇವರಿಂದ ಯಾವುದೇ ಸೂಚನೆಗಳು ಬರುತ್ತಿಲ್ಲ..! ರಾಹುಲ್ ಗಾಂಧಿ ಹೀಗೆ ಹೇಳಿದ್ದೇಕೆ?  title=

ಮಲ್ಲಪುರಂ: ಕೇರಳದ ವಯನಾಡಿನಿಂದ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ನಂತರ ರಾಹುಲ್ ಗಾಂಧಿ ಮೊದಲ ಬಾರಿಗೆ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು ವಯನಾಡ್ ಜತೆಗೆ ರಾಯ್ ಬರೇಲಿ ಸೀಟು ಗೆದ್ದಿರುವುದರಿಂದ ಈಗ ಯಾವ ಸೀಟು ಉಳಿಸಿಕೊಳ್ಳಬೇಕು, ಯಾವ ಸೀಟು ತೊರೆಯಬೇಕು ಎಂಬ ದ್ವಂದ್ವದಲ್ಲಿರುವುದಾಗಿ ಹೇಳಿದ್ದಾರೆ. ವಯನಾಡು ಜನತೆಗೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ಅವರು ಯಾವುದೇ ನಿರ್ಧಾರ ಕೈಗೊಂಡರೂ ಎರಡೂ ಕ್ಷೇತ್ರಗಳ ಜನತೆಗೆ ಸಂತಸವಾಗಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ರೇಣುಕಾಸ್ವಾಮಿ ಶವ ಸಾಗಿಸಿದ್ದ ಕಾರು ಪೊಲೀಸರ ಸುಪರ್ದಿಯಲ್ಲಿ, ಯಾರ ಹೆಸರಲ್ಲಿದೆ ಕಾರು?

ಮಲಪ್ಪುರಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು 'ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುವ ಭರವಸೆ ಇದೆ.ನಾನು ವಯನಾಡ್ ಸಂಸದನಾಗಿ ಉಳಿಯಬೇಕೋ ಅಥವಾ ರಾಯ್ ಬರೇಲಿ ಸಂಸದನಾಗಿ ಉಳಿಯಬೇಕೋ ಎಂಬ ಗೊಂದಲದಲ್ಲಿದ್ದೇನೆ. ನನ್ನ ನಿರ್ಧಾರದಿಂದ ವಯನಾಡ್ ಮತ್ತು ರಾಯ್ ಬರೇಲಿ ಎರಡೂ ಕ್ಷೇತ್ರದಲ್ಲಿನ ಜನರು ಸಂತೋಷಪಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.ವಯನಾಡ್ ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಭಾರಿ ಅಂತರದಿಂದ ಗೆಲುವು ಸಾಧಿಸಿದ ನಂತರ ರಾಜ್ಯಕ್ಕೆ ಇದು ಅವರ ಮೊದಲ ಭೇಟಿಯಾಗಿದೆ.

ಇದೆ ವೇಳೆ ತಮ್ಮ ಭಾಷಣದಲ್ಲಿ ನರೇಂದ್ರ ಮೋದಿಯವರನ್ನು ತರಾಟೆಗೆ ಅವರು ಪ್ರಧಾನಿಗೆ ಬಂದಂತೆ ಏನು ಮಾಡಬೇಕೆಂಬುದರ ಬಗ್ಗೆ ನನಗೆ ದೇವರಿಂದ ಯಾವುದೇ ಸೂಚನೆಗಳು ಬರುವುದಿಲ್ಲ ಎಂದು ಹೇಳಿದರು.ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದ ಅವರು, ದೇಶದ ಪ್ರಮುಖ ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಅದಾನಿಗೆ ಹಸ್ತಾಂತರಿಸುವಂತೆ ದೇವರು ಪ್ರಧಾನಿಗೆ ನಿರ್ದೇಶಿಸಿದ್ದಾರೆ.ಆದರೆ ನಾನೊಬ್ಬ ಮನುಷ್ಯ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನನ್ನ ದೇವರು ದೇಶದ ಬಡ ಜನರು. ಹಾಗಾಗಿ ಇದು ನನಗೆ ಸುಲಭವಾಗಿದೆ.ನಾನು ಜನರೊಂದಿಗೆ ಮಾತನಾಡುತ್ತೇನೆ ಹಾಗಾಗಿ ಅವರು ಏನು ಮಾಡಬೇಕೆಂದು ನನಗೆ ಹೇಳುತ್ತಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ : 16 ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ ಮುಂಗಾರು ಮಳೆ ಜೋಡಿ...! 

2024 ರ ಲೋಕಸಭಾ ಚುನಾವಣೆಯ ಹೋರಾಟವು ಭಾರತದ ಸಂವಿಧಾನವನ್ನು ರಕ್ಷಿಸಲು ಮತ್ತು ಆ ಹೋರಾಟದಲ್ಲಿ ದ್ವೇಷವನ್ನು ಪ್ರೀತಿಯಿಂದ ಸೋಲಿಸಲಾಗಿದೆ, ಅಹಂಕಾರವನ್ನು ವಿನಯದಿಂದ ಸೋಲಿಸಲಾಗಿದೆ ಎಂದು ಹೇಳಿದರು. ಭಾರತದ ಜನರು ಅವರಿಗೆ ಸ್ಪಷ್ಟ ಸಂದೇಶವನ್ನು ನೀಡಿರುವುದರಿಂದ ಪ್ರಧಾನಿ ಮೋದಿ ಈಗ ತಮ್ಮ ವರ್ತನೆಯನ್ನು ಬದಲಾಯಿಸಬೇಕಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಇದೇ ವೇಳೆ ಕೆಪಿಸಿಸಿ ಮುಖ್ಯಸ್ಥ ಕೆ. ಸುಧಾಕರನ್ ರಾಹುಲ್ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರವನ್ನು ತೊರೆಯುವ ಬಗ್ಗೆ ಸುಳಿವು ನೀಡಿದ್ದಾರೆ. 

ಇದನ್ನೂ ಓದಿ: ಚೈನೀಸ್ ಸ್ಪೀಡ್ ಬೋಟ್ ಬಗ್ಗೆ ತೈವಾನ್ ಚಿಂತಿತರಾಗಿದ್ದಾರೆ, 'ಜೇಮ್ಸ್ ಬಾಂಡ್' ಮಾತಿನಿಂದ ಎಲ್ಲರೂ ಆಶ್ಚರ್ಯಚಕಿತರಾದರು

ಪ್ರಿಯಾಂಕಾ ವಾರಾಣಸಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರೆ...

ಮೊನ್ನೆ ಮಂಗಳವಾರ ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರೆ ಪ್ರಧಾನಿ ನರೇಂದ್ರ ಮೋದಿ ಎರಡು-ಮೂರು ಲಕ್ಷ ಮತಗಳಿಂದ ಸೋಲುತ್ತಿದ್ದರು ಎಂದು ಹೇಳಿದ್ದರು. ಅಯೋಧ್ಯೆ ಕ್ಷೇತ್ರದಲ್ಲಿ ಬಿಜೆಪಿಯ ಸೋಲನ್ನು ಉಲ್ಲೇಖಿಸಿದ ರಾಹುಲ್, ಅಯೋಧ್ಯೆಯ ಜನರು ಉತ್ತರ ನೀಡಿದ್ದಾರೆ.ಅಯೋಧ್ಯೆಯಲ್ಲ... ವಾರಣಾಸಿಯಲ್ಲೂ ಪ್ರಧಾನಿ ಪ್ರಾಣ ಉಳಿಸಿಕೊಂಡು ಬಂದಿದ್ದಾರೆ. ನನ್ನ ಸಹೋದರಿ (ಪ್ರಿಯಾಂಕಾ ವಾದ್ರಾ) ವಾರಣಾಸಿಯಲ್ಲಿ ಸ್ಪರ್ಧಿಸಿದ್ದರೆ ಇಂದು ಪ್ರಧಾನಿ ವಾರಣಾಸಿ ಚುನಾವಣೆಯಲ್ಲಿ ಎರಡು-ಮೂರು ಲಕ್ಷ ಮತಗಳಿಂದ ಸೋಲುತ್ತಿದ್ದರು.ನಾನು ಈ ಮಾತು ದುರಹಂಕಾರದಿಂದ ಹೇಳುತ್ತಿಲ್ಲ ಬದಲಾಗಿ ಪ್ರಧಾನಿಯವರ ರಾಜಕೀಯ ನಮಗೆ ಇಷ್ಟವಿಲ್ಲ ಎಂಬ ಸಂದೇಶವನ್ನು ಸಾರ್ವಜನಿಕರು ನೀಡಿದ್ದಾರೆ. ನಾವು ಪ್ರಗತಿಯನ್ನು ಬಯಸುತ್ತೇವೆ. ಅವರು 10 ವರ್ಷಗಳಿಂದ ಈ ದೇಶದಲ್ಲಿ ನಿರುದ್ಯೋಗ, ದ್ವೇಷ ಮತ್ತು ಹಿಂಸಾಚಾರವನ್ನು ಹರಡಿದ್ದಾರೆ ಇದಕ್ಕೆ ಸಾರ್ವಜನಿಕರು ಪ್ರಧಾನಿಗೆ ತಿರುಗೇಟು ನೀಡಿದ್ದಾರೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News