ನವದೆಹಲಿ: ಪುಲ್ವಾಮಾ ಭಯೋತ್ಪಾದನಾ ದಾಳಿಗೆ ಭಾರತೀಯ ಸೈನ್ಯವು ಸೇಡು ತೀರಿಸಿಕೊಂಡಿದೆ. ಭಾರತೀಯ ಏರ್ ಫೋರ್ಸ್ ಮಂಗಳವಾರ ನಸುಕಿನ ವೇಳೆ 3:30 ರ ಸುಮಾರಿಗೆ Pok ಪ್ರವೇಶಿಸಿ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದೆ. ಮೂಲಗಳ ಪ್ರಕಾರ, ಐಎಎಫ್ 12 'ಮಿರಾಜ್ 2000' ವಿಮಾನಗಳು ಈ ವೈಮಾನಿಕ ದಾಳಿ ನಡೆಸಿದ್ದು, 1000 ಪೌಂಡ್ ಬಾಂಬ್ನಿಂದ ಗಡಿ ನಿಯಂತ್ರಣ ರೇಖೆಯಿಂದಾಚೆಯಿರುವ ಉಗ್ರರ ಶಿಬಿರಗಳನ್ನು ನಿರ್ನಾಮ ಮಾಡಿವೆ.
ಭಾರತೀಯ ಯುದ್ಧವಿಮಾನಗಳು ಗಡಿನಿಯಂತ್ರಣ ರೇಖೆಯನ್ನು ಉಲ್ಲಂಘಿಸಿವೆ ಮತ್ತು ಇದಕ್ಕೆ ಪಾಕ್ ವಾಯುಪಡೆ ಪ್ರತ್ಯುತ್ತರ ನೀಡಿ ಅವುಗಳನ್ನು ಹಿಮ್ಮೆಟ್ಟಿಸಿವೆ ಎಂದು ಪಾಕ್ ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಟ್ವೀಟ್ ಮಾಡಿದ್ದರು.
ಬಲಾಕೋಟ್ ಪ್ರದೇಶದಲ್ಲಿ ಭಾರತದ ವಾಯುಪಡೆ ಈ ದಾಳಿ ನಡೆಸಿದ್ದು ಜೈಷ್-ಎ- ಮೊಹಮ್ಮದ್ ಉಗ್ರರ ಶಿಬಿರಗಳು ಸಂಪೂರ್ಣವಾಗಿ ನಾಶವಾಗಿದೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ. ಬನ್ನಿ ಭಾರತೀಯ ವಾಯುಪಡೆಯ 'ಮಿರಾಜ್ 2000' ಕ್ರಿಯೆಯ ಬಗ್ಗೆ ಇನ್ನಷ್ಟು ಓದಿ ...
'ಮಿರಾಜ್ 2000' ಯುದ್ಧ ವಿಮಾನದ 10 ವೈಶಿಷ್ಟ್ಯ:
- ಭಾರತೀಯ ಸೈನ್ಯದಲ್ಲಿರುವ ಮಿರಾಜ್ 2000 ಒಂದು ಸೀಟಿನ ಫೈಟರ್ ಜೆಟ್ ಆಗಿದೆ. ಇದನ್ನು 'ಡಸ್ಸಾಲ್ಟ್ ಮಿರೇಜ್ ಏವಿಯೇಷನ್' ನಿರ್ಮಿಸಿದೆ. ಮಿರಾಜ್-2000 ಫೈಟರ್ ಜೆಟ್ ಅನ್ನು 1980 ರ ದಶಕದಲ್ಲಿ ಫ್ರಾನ್ಸ್ನಿಂದ ಖರೀದಿಸಲಾಯಿತು.
- ಈ ವಿಮಾನವು ಒಂದು ಗಂಟೆಗೆ 2495 ಕಿ.ಮೀ. ಚಲಿಸುವ ಸಾಮರ್ಥ್ಯ ಹೊಂದಿದೆ.
ಮಿರೇಜ್ ಎಂಬುದು ಫ್ರೆಂಚ್ ಬಹು-ಉಪಯುಕ್ತತೆಯ ಹೋರಾಟಗಾರ ಏಕ-ಎಂಜಿನ್ ಫೈಟರ್ ವಿಮಾನವಾಗಿದೆ.
- ಭಾರತೀಯ ವಾಯುಪಡೆ ಬಳಿ 50 'ಮಿರಾಜ್-2000' ಇದ್ದು, ಪುಲ್ವಾಮ ಆತ್ಮಾಹುತಿ ದಾಳಿಗೆ ಪ್ರತೀಕಾರಕ್ಕಾಗಿ ಏರ್ ಫೋರ್ಸ್ 12 ವಿಮಾನಗಳನ್ನು ಬಳಸಿದೆ. ಹಿಂದೆ, ಈ ವಿಮಾನವನ್ನು ಉನ್ನತೀಕರಿಸುವುದಕ್ಕಾಗಿ ಫ್ರಾನ್ಸ್ನ ಡಸ್ಸಾಲ್ಟ್ ಏವಿಯೇಶನ್ನೊಂದಿಗೆ ಭಾರತ ಸರ್ಕಾರವು ಒಪ್ಪಂದಕ್ಕೆ ಸಹಿ ಹಾಕಿತು, ಅದರ ಅಡಿಯಲ್ಲಿ ವಿಮಾನದ ಕೆಲವು ಅಪ್ಗ್ರೇಡ್ ಮಾಡಲಾಯಿತು. ಈ ವಿಮಾನವನ್ನು ನವೀಕರಿಸಿದ ನಂತರ ಹಿಂದೆಂದಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ.
- ವಿಶ್ವದ ಅತ್ಯುತ್ತಮ ಯುದ್ಧ ವಿಮಾನಗಳ ಪಟ್ಟಿಯಲ್ಲಿ, 'ಮಿರಾಜ್ -2000' ಹತ್ತನೇ ಸ್ಥಾನ ಪಡೆದಿದೆ. ಇದರ ಮೊದಲ ಹಾರಾಟ ಮಾರ್ಚ್ 10, 1978 ರಂದು ನಡೆಯಿತು.
- ಈ ವಿಮಾನವು ನೆಲದ ಮೇಲೆ ಬೃಹತ್ ಪ್ರಮಾಣದ ಬಾಂಬ್ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಗಾಳಿಯಲ್ಲಿ ಇತರ ವಿಮಾನಗಳನ್ನು ಗುರಿಪಡಿಸುತ್ತದೆ. ಮೇ 21, 2015 ರಂದು ಮಿರಾಜ್-2000 ದೆಹಲಿಯ ಬಳಿ ಯಮುನಾ ಎಕ್ಸ್ಪ್ರೆಸ್ವೇಯಲ್ಲಿ ಇಳಿಯಿತು. ತುರ್ತು ಪರಿಸ್ಥಿತಿಯಲ್ಲಿ ಇದನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಳಸಬಹುದಾಗಿದೆ.
- ಫ್ರಾನ್ಸ್ ಕಂಪೆನಿಯಿಂದ ತಯಾರಿಸಿದ ಮಿರಾಜ್-2000, ಎಲ್ಲಾ ರೀತಿಯ ವಾತಾವರಣದಲ್ಲಿ ಹಾರುವ ಸಾಮರ್ಥ್ಯವನ್ನು ಹೊಂದಿದೆ.
- 'ಮಿರಾಜ್ -2000' ಬಹಳ ಎತ್ತರದಲ್ಲಿ ವೇಗವಾಗಿ ಹಾರುವ ಸಮಯದಲ್ಲಿ ನೆಲದ ಮೇಲೆ ಶತ್ರುಗಳ ನೆಲೆಗಳನ್ನು ಸ್ಫೋಟಿಸುವ ಸಾಮರ್ಥ್ಯ ಹೊಂದಿದೆ.
- 'ಮಿರಾಜ್ -2000' ಒಂದು ಸಮಯದಲ್ಲಿ 17 ಸಾವಿರ ಕಿಲೋಗ್ರಾಂಗಳಷ್ಟು ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
- ಇದರ ವ್ಯಾಪ್ತಿಯು 1480 ಕಿ.ಮೀ. ಅಂದರೆ 1480 ಕಿ.ಮೀ ದೂರದಲ್ಲಿರುವ ಶತ್ರು ತಳಹದಿಗಳನ್ನು ಸ್ಫೋಟಿಸಬಹುದು. ಡಸ್ಸಾಲ್ಟ್ ಮಿರಾಜ್ 2000 ಯು ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ಬಳಸಿ ವಾಯು ಮಾರ್ಗದ ಮೂಲಕ ಮೇಲ್ಮೈಯನ್ನು ಆಕ್ರಮಣ ಮಾಡುವ ಸಾಮರ್ಥ್ಯವನ್ನು ಹೊಂದಿದೆ, ಮತ್ತು ಲೇಸರ್ ನಿರ್ದೇಶಿತ ಬಾಂಬ್ (ಎಲ್ಜಿಜಿ) ಸಾಮರ್ಥ್ಯವನ್ನು ಸಹ ಹೊಂದಿವೆ.
- 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಮಯದಲ್ಲಿ ಮಿರಾಜ್ 2000 ಪ್ರಮುಖ ಪಾತ್ರ ವಹಿಸಿ ಶತ್ರುವನ್ನು ನಾಶಪಡಿಸಿತು. ಕಾರ್ಗಿಲ್ ಯುದ್ಧದಲ್ಲಿ, ಮಿರಾಜ್ ಶತ್ರುಗಳನ್ನು ಗುರಿಯಾಗಿಸಿ ಲೇಸರ್-ನಿರ್ದೇಶಿತ ಬಾಂಬುಗಳನ್ನು ಸಿಡಿಸಿತು. ಅದು ಪ್ರಮುಖ ಬಂಕರ್ಗಳ ಮೇಲೆ ಬಾಂಬ್ ದಾಳಿಯನ್ನು ಉಂಟುಮಾಡಿತು. ಭಾರತೀಯ ಏರ್ ಫೋರ್ಸ್, ಯುನೈಟೆಡ್ ಅರಬ್ ಎಮಿರೇಟ್ಸ್ ಏರ್ ಫೋರ್ಸ್ ಮತ್ತು ಚೀನೀ ರಿಪಬ್ಲಿಕ್ ಏರ್ ಫೋರ್ಸ್ನ ಫ್ಲೀಟ್ನಲ್ಲಿ ಫ್ರೆಂಚ್ ವಾಯುಪಡೆಯೊಂದಿಗೆ ಈ ಫೈಟರ್ ವಿಮಾನವನ್ನು ಸಹ ಸೇರಿಸಲಾಗಿದೆ