close

News WrapGet Handpicked Stories from our editors directly to your mailbox

ಒಡಿಸ್ಸಾ ಸಿಎಂಗೆ ಒಡಿಯಾ ಭಾಷೆ ಗೊತ್ತಿಲ್ಲವೆಂದರೆ ಆಡಳಿತ ನಡೆಸುವ ಹಕ್ಕೂ ಕೂಡ ಅವರಿಗಿಲ್ಲ - ಅಮಿತ್ ಷಾ

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ವ್ಯಂಗ್ಯವಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ "ಒಡಿಶಾದ ಮುಖ್ಯಮಂತ್ರಿಗೆ ಒಡಿಯಾ ಭಾಷೆ ಗೊತ್ತಿಲ್ಲವೆಂದರೆ ಅವರಿಗೆ ಆಡಳಿತ ನಡೆಸುವ ಯಾವುದೇ ಹಕ್ಕು ಕೂಡ ಇಲ್ಲ " ಎಂದು ಅಮಿತ್ ಶಾ ಒಡಿಶಾದ ಪುರಿಯಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಹೇಳಿದರು.

Updated: Feb 3, 2019 , 06:48 PM IST
ಒಡಿಸ್ಸಾ ಸಿಎಂಗೆ ಒಡಿಯಾ ಭಾಷೆ ಗೊತ್ತಿಲ್ಲವೆಂದರೆ ಆಡಳಿತ ನಡೆಸುವ ಹಕ್ಕೂ ಕೂಡ ಅವರಿಗಿಲ್ಲ - ಅಮಿತ್ ಷಾ
photo:ANI

ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ವ್ಯಂಗ್ಯವಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ "ಒಡಿಶಾದ ಮುಖ್ಯಮಂತ್ರಿಗೆ ಒಡಿಯಾ ಭಾಷೆ ಗೊತ್ತಿಲ್ಲವೆಂದರೆ ಅವರಿಗೆ ಆಡಳಿತ ನಡೆಸುವ ಯಾವುದೇ ಹಕ್ಕು ಕೂಡ ಇಲ್ಲ " ಎಂದು ಅಮಿತ್ ಶಾ ಒಡಿಶಾದ ಪುರಿಯಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಹೇಳಿದರು.

ಸಿಎಂ ನವೀನ್ ಪಟ್ನಾಯಕ್ ವಿರುದ್ದ ಕಿಡಿಕಾರಿದ ಅಮಿತ್ ಶಾ "ನಿಮ್ಮ ಮುಖ್ಯಮಂತ್ರಿ ಒರಿಸ್ಸಾದಲ್ಲಿ ಅಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಿಲ್ಲ, ಏಕೆಂದರೆ ಅದು ನರೇಂದ್ರ ಮೋದಿ ಜಿ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ ಎಂದು ಆತಂಕದಲ್ಲಿದ್ದಾರೆ. ನೀವು ಬೇಕಾದರೆ ನಮ್ಮ ಹೆಸರನ್ನು ಈ ಯೋಜನೆಯಿಂದ ತೆಗೆದುಹಾಕಬಹುದು, ಆದರೆ ಏಕೆ ನೀವು ಓಡಿಸ್ಸಾದ ಬಡ ಜನರಿಗೆ ತೊಂದರೆ ಕೊಡುತ್ತಿರಿ ಎಂದು ಷಾ ಕಿಡಿಕಾರಿದರು.

ಇದೇ ವೇಳೆ ಮಧ್ಯಂತರ ಬಜೆಟ್ ಕುರಿತಾಗಿ ಮಾತನಾಡಿದ ಶಾ " ಈ ಬಜೆಟ್ ನಿಂದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಕಳೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ಅಲ್ಲದೆ ತಮ್ಮ ಪಕ್ಷವನ್ನು ಬುಡಕಟ್ಟು ಜನರ ಚಾಂಪಿಯನ್ ಎಂದು ಹೇಳಿದರು. ನರೇಂದ್ರ ಮೋದಿ ಸರ್ಕಾರ ಆದಿವಾಸಿಗಳ ಕಲ್ಯಾಣಕ್ಕಾಗಿ 50 ಸಾವಿರ ಕೋಟಿ ರೂಗಳನ್ನು ವೆಚ್ಚ ಮಾಡಿದೆ ಎಂದು ತಿಳಿಸಿದರು.