LAC ಉದ್ವಿಗ್ನತೆಯ ಮಧ್ಯೆ ಭಾರತ-ಚೀನಾ ವಿದೇಶಾಂಗ ಸಚಿವರ ಸಭೆ, ಈ 5 ವಿಷಯಗಳಿಗೆ ಸಮ್ಮತಿ

ಗಡಿಯಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು, ಭಾರತ ಮತ್ತು ಚೀನಾ ಐದು ಅಂಶಗಳಿಗೆ ಒಪ್ಪಿಗೆ ಸೂಚಿಸಿವೆ.

Last Updated : Sep 11, 2020, 07:37 AM IST
  • ಇಂಡೋ-ಚೀನಾ ಉದ್ವಿಗ್ನತೆಯ ನಡುವೆ ಉಭಯ ದೇಶಗಳ ವಿದೇಶಾಂಗ ಮಂತ್ರಿಗಳು ಮೊದಲ ಬಾರಿಗೆ ಭೇಟಿಯಾದರು
  • ರಷ್ಯಾದಲ್ಲಿ ಉಭಯ ನಾಯಕರ ನಡುವೆ ಎರಡು ಗಂಟೆಗಳ ಮಾತುಕತೆ
  • ಒತ್ತಡವನ್ನು ಕಡಿಮೆ ಮಾಡಲು ಐದು ವಿಷಯಗಳ ಬಗ್ಗೆ ಒಮ್ಮತ ಮೂಡಿತು
LAC ಉದ್ವಿಗ್ನತೆಯ ಮಧ್ಯೆ ಭಾರತ-ಚೀನಾ ವಿದೇಶಾಂಗ ಸಚಿವರ ಸಭೆ, ಈ 5 ವಿಷಯಗಳಿಗೆ ಸಮ್ಮತಿ title=

ಮಾಸ್ಕೋ: ಎಲ್‌ಎಸಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಮತ್ತು ಚೀನಾ (China) ನಡುವೆ ಐದು ಅಂಶಗಳನ್ನು ಒಪ್ಪಲಾಗಿದೆ. ಮಾಸ್ಕೋದಲ್ಲಿ ಗುರುವಾರ ನಡೆದ ವಿದೇಶಾಂಗ ಸಚಿವ ಎಸ್.ಜೈಶಂಕರ್ (S Jaishankar) ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ನಡೆದ ಸಭೆಯಲ್ಲಿ ಐದು ಅಂಶಗಳಿಗೆ ಒಪ್ಪಿಗೆ ಸೂಚಿಸಲಾಗಿದೆ.

ಗಡಿಯಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಐದು ಅಂಶಗಳ ಕಾರ್ಯಸೂಚಿಗೆ ಉಭಯ ನಾಯಕರ ನಡುವಿನ ದ್ವಿಪಕ್ಷೀಯ ಮಾತುಕತೆಗೆ ಒಪ್ಪಿಕೊಂಡಿದೆ ಎಂದು ಸರ್ಕಾರದ ಉನ್ನತ ಮೂಲವು ಝೀ ನ್ಯೂಸ್ ಅಂಗಸಂಸ್ಥೆ ಚಾನೆಲ್ WIONಗೆ ತಿಳಿಸಿದೆ. ಈ ನಿಟ್ಟಿನಲ್ಲಿ ಜಂಟಿ ಹೇಳಿಕೆಯನ್ನು ಸಹ ನೀಡಲಾಗಿದೆ.

Exclusive: ಚೀನಾದೊಂದಿಗಿನ ಗಡಿ ವಿವಾದದ ಮಧ್ಯೆ 400 ಉಗ್ರರನ್ನು ಭಾರತದೊಳಗೆ ನುಸುಳಿಸಲು ಪಾಕ್ ಯತ್ನ

ಅದರ ಪ್ರಕಾರ ಉಭಯ ದೇಶಗಳು ಗಡಿ ಭಾಗದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಮಾಲೋಚನೆಯನ್ನು ಮುಂದುವರೆಸಲಿದ್ದು ಉದ್ವೇಗವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತವೆ ಎನ್ನಲಾಗಿದೆ.

ಈ 5 ವಿಷಯಗಳಿಗೆ ಇಂಡೋ-ಚೀನಾ ಒಪ್ಪಿಗೆ:-
1. ಎರಡೂ ಕಡೆಯ ಸೈನ್ಯಗಳು ತಮ್ಮ ಸಂವಾದವನ್ನು ಮುಂದುವರೆಸುತ್ತವೆ ಮತ್ತು ಅವರ ಮಟ್ಟದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಮಾಡುತ್ತವೆ.

2. ಇಂಡೋ-ಚೀನಾ (Indo-China) ಗಡಿ ಸಂಬಂಧಿತ ವಿಷಯಗಳಲ್ಲಿ ವಿಶೇಷ ಪ್ರತಿನಿಧಿ ಕಾರ್ಯವಿಧಾನ (ಎಸ್‌ಆರ್) ಮೂಲಕ ಸಂವಾದವನ್ನು ಮುಂದುವರಿಸಲಾಗುವುದು.

3. ಎಲ್ಲಾ ಪೂರ್ವ ಒಪ್ಪಂದಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ

4. ಬಲವಾದ ದ್ವಿಪಕ್ಷೀಯ ಸಂಬಂಧಗಳಿಗೆ ಗಡಿಯಲ್ಲಿ ಶಾಂತಿ ಅಗತ್ಯ

5. ಗಡಿ ಪ್ರದೇಶಗಳಲ್ಲಿ ಶಾಂತಿಗಾಗಿ ವಿಶ್ವಾಸವನ್ನು ಬೆಳೆಸುವ ಪ್ರಯತ್ನಗಳು ಚುರುಕುಗೊಳ್ಳುತ್ತವೆ.

ಸಂವಾದವನ್ನು ಮುಂದುವರಿಸಲು ಒಪ್ಪಿಗೆ: 
ಗಡಿ ಪ್ರದೇಶಗಳಲ್ಲಿ ಶಾಂತಿಗಾಗಿ ಉಭಯ ದೇಶಗಳು ಈ ಹಿಂದೆ ಮಾಡಿಕೊಂಡಿದ್ದ ಎಲ್ಲ ಒಪ್ಪಂದಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತವೆ ಎಂದು ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ವಿಶೇಷ ಪ್ರತಿನಿಧಿ ಕಾರ್ಯವಿಧಾನ (ಎಸ್‌ಆರ್‌) ಮೂಲಕ ಗಡಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಂವಾದವನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿದ್ದಾರೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೈನೀಸ್ ಎಫ್‌ಎಂ ನೇತೃತ್ವದ ಎಸ್‌ಆರ್-ಮಟ್ಟದ ಕಾರ್ಯವಿಧಾನವು ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ನಿಜವಾದ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಎರಡು ಬಾರಿ ಅಸ್ತವ್ಯಸ್ತವಾಗಿದೆ. ಪ್ರಸ್ತುತ ಪರಿಸ್ಥಿತಿ ಸುಧಾರಿಸಿದ ನಂತರ ಗಡಿ ಪ್ರದೇಶಗಳಲ್ಲಿ ಶಾಂತಿಗಾಗಿ ವಿಶ್ವಾಸವನ್ನು ಬೆಳೆಸುವ ಕೆಲಸವನ್ನು ಉಭಯ ದೇಶಗಳು ವೇಗಗೊಳಿಸಲಿದ್ದಾರೆ ಎಂದು ಸಹ ಒಪ್ಪಲಾಗಿದೆ.

LAC ಕುರಿತು ಮಾತುಕತೆ ನಡೆಸುವ ಮುನ್ನವೇ ಭಾರತಕ್ಕೆ ತಲೆನೋವಾದ ಚೀನಾ ನಡೆ

ಶಾಂತಿ ಇಲ್ಲದೆ ಮುಂದುವರಿಯಲು ಸಾಧ್ಯವಿಲ್ಲ:
ಗಡಿ ಉದ್ವಿಗ್ನತೆ ನಡುವೆ ಉಭಯ ದೇಶಗಳ ವಿದೇಶಾಂಗ ಮಂತ್ರಿಗಳು ಇದೇ ಮೊದಲ ಬಾರಿಗೆ ಭೇಟಿಯಾಗಿದ್ದು ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಸರ್ಕಾರದ ಉನ್ನತ ಮೂಲವೊಂದು WION ಗೆ ತಿಳಿಸಿದೆ. ಗಡಿ ವಿವಾದದಂತಹ ಸಮಸ್ಯೆಗಳನ್ನು ಪರಿಹರಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಒಪ್ಪಿಕೊಂಡರು. ಆದರೆ ಗಡಿ ಪ್ರದೇಶಗಳಲ್ಲಿ ಶಾಂತಿ ಇಲ್ಲದೆ ಮುಂದೆ ಸಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಪೂರ್ವ ಲಡಾಕ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಗಳು ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರಿವೆ ಮತ್ತು ಸಮಸ್ಯೆಗೆ ತಕ್ಷಣದ ಪರಿಹಾರವು ಎರಡೂ ದೇಶಗಳ ಹಿತದೃಷ್ಟಿಯಿಂದ ಇರುತ್ತದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಈ ಸಭೆಯಲ್ಲಿ ಚೀನಾ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ ಮತ್ತು ರಷ್ಯಾದ ಭಾರತೀಯ ರಾಯಭಾರಿ ಬಾಲಾ ವೆಂಕಟೇಶ್ ವರ್ಮಾ ಉಪಸ್ಥಿತರಿದ್ದರು.

ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (LAC) ಚೀನಾದ ಸೈನ್ಯದ ಕ್ರಮವು ಕಳವಳಕಾರಿಯಾಗಿದೆ. ಆದರೆ ಇದು 1993 ಮತ್ತು 1996 ರಲ್ಲಿ ಭಾರತ ಮತ್ತು ಚೀನಾ ನಡುವಿನ ಒಪ್ಪಂದಗಳ ಉಲ್ಲಂಘನೆಯಾಗಿದೆ ಎಂದು ಉಭಯ ನಾಯಕರ ಸಭೆಯಲ್ಲಿ ಭಾರತ ಹೇಳಿದೆ. ಚೀನಾದ ಸೇನೆಯು ಅನೇಕ ಸ್ಥಳಗಳಲ್ಲಿ ಪ್ರಚೋದನಕಾರಿ ಕ್ರಮ ಕೈಗೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಹೇಳಿದ್ದಾರೆ. ಇದು ದ್ವಿಪಕ್ಷೀಯ ಒಪ್ಪಂದಗಳು ಮತ್ತು ನಿಯಮಾವಳಿಗಳ ನೇರ ಉಲ್ಲಂಘನೆಯಾಗಿದೆ ಎಂದವರು ಟೀಕಿಸಿದ್ದಾರೆ.

ನಾವು ಕೂಡ ನಿಮ್ಮನ್ನು ಅನುಸರಿಸುತ್ತೇವೆ!
ಗಡಿ ಪ್ರದೇಶಗಳ ನಿರ್ವಹಣೆಗೆ ಸಂಬಂಧಿಸಿದ ಹಿಂದಿನ ಎಲ್ಲ ಒಪ್ಪಂದಗಳಿಗೆ ಚೀನಾ ಬದ್ಧವಾಗಿರಬೇಕು ಎಂದು ಭಾರತ ಹೇಳಿದೆ ಮತ್ತು ಭಾರತೀಯ ಸೇನೆಯು (Indian Army) ಯಾವಾಗಲೂ ಒಪ್ಪಂದಗಳು ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ. ಉಭಯ ನಾಯಕರ ನಡುವಿನ ಈ ಮಹತ್ವದ ಸಭೆಯ ನಂತರ ಮಿಲಿಟರಿ ಕಮಾಂಡರ್ ಮಟ್ಟದಲ್ಲಿ ಸೈನಿಕರನ್ನು ನಿಯೋಜಿಸುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನಂಬಲಾಗಿದೆ. ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿ ಗುರುವಾರ ನಡೆದ 6ನೇ ಸುತ್ತಿನ ಮಾತುಕತೆಗೆ ಗ್ರೌಂಡ್ ಕಮಾಂಡರ್‌ಗಳು ಒಪ್ಪಿದ್ದಾರೆ.

Trending News