ಮತದಾರರಿಗೆ ಕೇವಲ ಒಂದು ಕ್ಲಿಕ್‌ನಲ್ಲಿ ಫೋನ್‌ನಲ್ಲೇ ಸಿಗಲಿದೆ ಮಾಹಿತಿ

ಮತದಾರರ ಅನುಕೂಲಕ್ಕಾಗಿ ಚುನಾವಣಾ ಆಯೋಗವು ವೋಟರ್ ಹೆಲ್ಪ್ಲೈನ್ ಎಂಬ ಆ್ಯಪ್ ಅನ್ನು ಪ್ರಾರಂಭಿಸಿತು.

Last Updated : Oct 21, 2019, 10:55 AM IST
ಮತದಾರರಿಗೆ ಕೇವಲ ಒಂದು ಕ್ಲಿಕ್‌ನಲ್ಲಿ ಫೋನ್‌ನಲ್ಲೇ ಸಿಗಲಿದೆ ಮಾಹಿತಿ title=

ನವದೆಹಲಿ: ಮಹಾರಾಷ್ಟ್ರದ 288 ಕ್ಷೇತ್ರಗಳು ಮತ್ತು ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ಬೆಳಿಗ್ಗೆಯಿಂದ ಮತದಾನ ನಡೆಯುತ್ತಿದೆ. ಮತದಾರರ ಅನುಕೂಲಕ್ಕಾಗಿ ಚುನಾವಣಾ ಆಯೋಗವು ವೋಟರ್ ಹೆಲ್ಪ್ಲೈನ್(VOTER HELPLINE) ಎಂಬ ಆ್ಯಪ್ ಅನ್ನು ಪ್ರಾರಂಭಿಸಿದೆ. ಇದರಲ್ಲಿ ಮತದಾರರು ಮತದಾನ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಮಾತ್ರವಲ್ಲದೆ, ಏನಾದರೂ ದೂರಿದ್ದರೂ ಸಹ ಅದನ್ನು ಇಲ್ಲಿ ನೋಂದಾಯಿಸಬಹುದು.

ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಈ ಅಪ್ಲಿಕೇಶನ್ ಐಫೋನ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಲಭ್ಯವಿದೆ. ವಾಸ್ತವವಾಗಿ, ಚುನಾವಣೆಯ ಸಮಯದಲ್ಲಿ ಮತದಾರರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ, ಮತದಾರರ ಪಟ್ಟಿಯು ಅವರ ಹೆಸರು ಇದೆಯೋ ಇಲ್ಲವೋ. ಮತದಾನ ಕೇಂದ್ರದ ಮಾಹಿತಿ ಇತ್ಯಾದಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ಮತದಾರರಿಗೆ ಅನಾನುಕೂಲವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮತದಾರರ ಅನುಕೂಲಕ್ಕಾಗಿ ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ, ಇದರಿಂದ ಮತದಾರರು ತಮ್ಮ ಫೋನ್ ಮೂಲಕವೇ ಒಂದೇ ಕ್ಲಿಕ್‌ನಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

ಮತ ಚಲಾಯಿಸುವ ಮೊದಲು, ಮತದಾರರು ತಮ್ಮ ವಿವರಗಳನ್ನು ನಮೂದಿಸಬಹುದು. ಈ ಮೂಲಕ ಮಾಹಿತಿಯನ್ನು ಪಡೆಯಬಹುದು. ಆನ್‌ಲೈನ್ ಸ್ವರೂಪ, ಅಭ್ಯರ್ಥಿಗಳ ಬಗ್ಗೆ ಸೇರಿದಂತೆ ಇದರಲ್ಲಿ ಹಲವು ಮಾಹಿತಿಗಳು ಲಭ್ಯವಿರಲಿದೆ. ಈ ಆ್ಯಪ್ ಮೂಲಕ, ಹೊಸ ಮತದಾರರು ತಮ್ಮ ಹೆಸರುಗಳನ್ನು ಸಹ ನೋಂದಾಯಿಸಿಕೊಳ್ಳಬಹುದು.

Trending News