ಮಹಾರಾಷ್ಟ್ರದ ರಾಜಕೀಯ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿದೆ. ಏತನ್ಮಧ್ಯೆ, ಮಹಾರಾಷ್ಟ್ರ ಸರ್ಕಾರ ರಚನೆ ಕುರಿತು ಮಾತನಾಡಿರುವ ಶಿವಸೇನೆಯ ಸಂಜಯ್ ರೌತ್, ನೀವು 'ಹಂಗಾಮ' ಎಂದು ಕರೆಯುತ್ತಿರುವಿರಿ, ವಾಸ್ತವವಾಗಿ ಇದು 'ಹಂಗಾಮ' ಅಲ್ಲ, ನ್ಯಾಯ ಮತ್ತು ಹಕ್ಕುಗಳ ಹೋರಾಟ. ಇದರಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನವೆಂಬರ್ 7 ರೊಳಗೆ ಹೊಸ ಸರ್ಕಾರವನ್ನು ಪಡೆಯಲು ರಾಜ್ಯವು ವಿಫಲವಾದರೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗುವುದು ಎಂಬ ಹೇಳಿಕೆಯ ಮೇಲೆ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಎನ್ಸಿಪಿ ನಾಯಕ ನವಾಬ್ ಮಲಿಕ್ ದಾಳಿ ನಡೆಸಿದ್ದಾರೆ.
ಸರ್ಕಾರದಲ್ಲಿ ಸ್ಥಾನ ಹಂಚಿಕೆ ಕುರಿತು ಬಿಜೆಪಿ-ಶಿವಸೇನೆ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ. ಹೊಸ ವಿಧಾನಸಭೆಯಲ್ಲಿ ಕ್ರಮವಾಗಿ 105 ಮತ್ತು 56 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಮತ್ತು ಶಿವಸೇನಾದಲ್ಲಿ ಅಧಿಕಾರ ಹಂಚಿಕೆ ಕುರಿತು ಭಿನ್ನಾಭಿಪ್ರಾಯ ಮೂಡಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ + ಶಿವಸೇನೆ ಮೈತ್ರಿ ಗೆಲುವು ಸಾಧಿಸಿದರೆ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಕೆಲವು ಸ್ಥಾನಗಳಿಂದ ದೂರ ಉಳಿದಿದೆ. ಆದರೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ವೃದ್ಧ ದಂಪತಿಗಳು ವರ್ಲಿ ಪ್ರದೇಶದಲ್ಲಿ ಮತ ಚಲಾಯಿಸಿದ್ದಾರೆ. ಜಗನ್ನಾಥ ಭೋನ್ಸ್ಲೆ (84) ಪತ್ನಿ ಸುಮನ್ (83) ಅವರೊಂದಿಗೆ ಮತ ಚಲಾಯಿಸಿದರು. ವಿಶೇಷವೆಂದರೆ ಇಂದು ಅವರ 60 ನೇ ವಿವಾಹ ವಾರ್ಷಿಕೋತ್ಸವ, ಅವರು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಮತದಾನದ ಮೂಲಕ ಆಚರಿಸಿದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2019: ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಯುವಸೇನಾ ಅಧ್ಯಕ್ಷ ಆದಿತ್ಯ ಠಾಕ್ರೆ ಅವರು ಮುಂಬೈನ ತಮ್ಮ ನಿವಾಸವಾದ ಮಾತೋಶ್ರೀನಲ್ಲಿ ಶಿವಸೇನೆಗೆ ಶೆರಾ ಅವರನ್ನು ಸ್ವಾಗತಿಸಿದರು.
ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಮತದಾನ ನಡೆಯಲಿರುವ "ಅಕ್ಟೋಬರ್ 21 ರಂದು ಬೆಳಿಗ್ಗೆ 7 ರಿಂದ ಸಂಜೆ 6.30 ರವರೆಗೆ" ನಿಷೇಧವು ಜಾರಿಯಲ್ಲಿರಲಿದೆ. ಮಹಾರಾಷ್ಟ್ರದ ಸತಾರಾ ಮತ್ತು ಬಿಹಾರದ ಸಮಸ್ತಿಪುರದ ಎರಡು ಸಂಸದೀಯ ಕ್ಷೇತ್ರಗಳನ್ನು ಹೊರತುಪಡಿಸಿ, 17 ರಾಜ್ಯಗಳ 51 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ದಿನ ಉಪಚುನಾವಣೆ ನಡೆಯಲಿದೆ.
ಬಿಜೆಪಿ- ಶಿವಸೇನಾ ಶುಕ್ರವಾರದಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕೊನೆಗೂ ಮೈತ್ರಿ ಸೂತ್ರವನ್ನು ಕಂಡುಕೊಂಡಿದೆ, ಅದರ ಪ್ರಕಾರ 164-124 ರ ಸೂತ್ರದನ್ವಯ ಬಿಜೆಪಿ-ಶಿವಸೇನಾ 'ಮಹಾಯುತಿ' ಅದರ ಪ್ರಕಾರ ಸ್ಪರ್ಧಿಸಲಿದೆ ಎನ್ನಲಾಗಿದೆ.
ಮುಂಬೈನಲ್ಲಿ ನಾರಾಯಣ್ ರಾಣೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ನಡುವೆ ಮಂಗಳವಾರ ತಡರಾತ್ರಿ ನಡೆದ ಸಭೆಯಲ್ಲಿ ನಿತೇಶ್ ಅವರನ್ನು ಕಣಕ್ಕಿಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2019(Maharashtra Assembly Elections 2019) ರಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಸ್ಥಾನ ಹಂಚಿಕೆ ಮತ್ತು ಮೈತ್ರಿ ಕುರಿತು ಒಪ್ಪಂದ ಬಹುತೇಕ ಅಂತಿಮ ಘಟ್ಟ ತಲುಪಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.