Coronavirus Effect: SBI ಸೇರಿದಂತೆ ಈ ಸರ್ಕಾರಿ ಬ್ಯಾಂಕುಗಳ ಸಮಯ ಬದಲಾವಣೆ

ಕರೋನವೈರಸ್ ಸಾಂಕ್ರಾಮಿಕದ ದೃಷ್ಟಿಯಿಂದ, ಪಿಎನ್‌ಬಿ, ಬ್ಯಾಂಕ್ ಆಫ್ ಬರೋಡಾ ಮತ್ತು ಇತರ ಬ್ಯಾಂಕುಗಳು ಸೇರಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಗಳಲ್ಲಿ ವಿಭಿನ್ನ ಕೆಲಸದ ಸಮಯವನ್ನು ನಿಗದಿಪಡಿಸಿದೆ.  

Written by - Yashaswini V | Last Updated : Mar 26, 2020, 02:43 PM IST
Coronavirus Effect: SBI ಸೇರಿದಂತೆ ಈ ಸರ್ಕಾರಿ ಬ್ಯಾಂಕುಗಳ ಸಮಯ ಬದಲಾವಣೆ title=

ನವದೆಹಲಿ: ಕರೋನವೈರಸ್ Covid-19 ಸಾಂಕ್ರಾಮಿಕದ ದೃಷ್ಟಿಯಿಂದ, ಪಿಎನ್‌ಬಿ, ಬ್ಯಾಂಕ್ ಆಫ್ ಬರೋಡಾ ಮತ್ತು ಇತರ ಬ್ಯಾಂಕುಗಳು ಸೇರಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಗಳಲ್ಲಿ ವಿಭಿನ್ನ ಕೆಲಸದ ಸಮಯವನ್ನು ನಿಗದಿಪಡಿಸಿದೆ. ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಗುಪ್ತಾ ಮಾತನಾಡಿ, ದೇಶಾದ್ಯಂತ ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾ / ಸ್ಥಳೀಯ ಆಡಳಿತದೊಂದಿಗೆ ಮಾತುಕತೆ ನಡೆಸಿದ ನಂತರ, ನಾವು ಬ್ಯಾಂಕಿನಲ್ಲಿ ವಿವಿಧ ಗಂಟೆಗಳ ಕಾರ್ಯನಿರ್ವಹಣೆಯನ್ನು ನಿಗದಿಪಡಿಸಿದ್ದೇವೆ ಎಂದು ತಿಳಿಸಿದರು.

ಅನೇಕ ರಾಜ್ಯಗಳಲ್ಲಿ, ಶಾಖೆ ತೆರೆಯುವ ಸಮಯವನ್ನು ಬೆಳಿಗ್ಗೆ 7 ರಿಂದ ಬೆಳಿಗ್ಗೆ 10 ರವರೆಗೆ ಮತ್ತು ಕೆಲವು ರಾಜ್ಯಗಳಲ್ಲಿ ಬೆಳಿಗ್ಗೆ 8 ರಿಂದ 11 ರವರೆಗೆ ಮಾಡಲಾಗಿದೆ. ಹಲವೆಡೆ ಅದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸುತ್ತದೆ.

COVID-19- ಹಿಟ್ ಕ್ಷೇತ್ರಗಳಿಗೆ ಶೀಘ್ರದಲ್ಲೇ ಆರ್ಥಿಕ ಪ್ಯಾಕೇಜ್ ಘೋಷಣೆ

ಮತ್ತೊಂದೆಡೆ, ಖಾಸಗಿ ವಲಯದ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ತನ್ನ ಶಾಖೆಗಳು ಮಾರ್ಚ್ 23 ರಿಂದ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸುತ್ತಿವೆ. ಮುಂದಿನ ಆದೇಶದವರೆಗೆ ಈ ವ್ಯವಸ್ಥೆ ಮುಂದುವರೆಯಲಿದೆ ಎನ್ನಲಾಗಿದೆ.

SBI ಪ್ಲಾಟ್‌ಫಾರ್ಮ್‌ನಿಂದ ಎಲ್ಲಿ, ಯಾವಾಗಲಾದರೂ ಪಡೆಯಿರಿ ಈ ಸೇವೆ

ಕಾರ್ಯನಿರ್ವಹಿಸಲು ಬ್ಯಾಂಕ್ ಬೇರೆ ಸಮಯವನ್ನು ನಿಗದಿಪಡಿಸಿದೆ. ಇಂದೋರ್‌ನಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2, ಡೆಹ್ರಾಡೂನ್‌ನಲ್ಲಿ ಬೆಳಿಗ್ಗೆ 7 ರಿಂದ 10, ಸಹರಾನ್‌ಪುರದಲ್ಲಿ 8 ರಿಂದ 11, ಲುಧಿಯಾನ ಮತ್ತು ಜಲಂಧರ್‌ನಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ.

CoronaVirus: ಸುರಕ್ಷಿತ ATM ಬಳಕೆಗಾಗಿ ಸಲಹೆ ನೀಡಿದ SBI

HDFC ಮತ್ತು Yes ಬ್ಯಾಂಕ್ ಸಹ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಕೆಲಸದ ಸಮಯವನ್ನು ಬದಲಾಯಿಸಿವೆ. ಈ ವ್ಯವಸ್ಥೆ ಪ್ರಸ್ತುತ ಮಾರ್ಚ್ 23 ರಿಂದ 31 ರವರೆಗೆ ಜಾರಿಯಲ್ಲಿ ಇರಲಿದೆ. ಬ್ಯಾಂಕ್ ಸಂಬಂಧಿತ ಅಗತ್ಯಗಳಿಗಾಗಿ ಡಿಜಿಟಲ್ ಮತ್ತು ಆನ್‌ಲೈನ್ ಮಾಧ್ಯಮಗಳನ್ನು ಬಳಸಲು ಬ್ಯಾಂಕುಗಳು ಗ್ರಾಹಕರನ್ನು ಕೇಳಿದೆ.

ಈ ಕುರಿತು ತಮ್ಮ ತಮ್ಮ ಗ್ರಾಹಕರಿಗೆ ಮನವಿ ಮಾಡಿಕೊಂಡಿರುವ ICICI ಹಾಗೂ HDFC ಬ್ಯಾಂಕ್ ಗಳು ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡುವಂತೆ ಕೋರಿವೆ.  ಕರೋನಾವೈರಸ್ ನಿಂದ ಹೆಚ್ಚಾಗುತ್ತಿರುವ ಸೋಂಕಿನ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಕಡಿಮೆ ಸಿಬ್ಬಂದಿಯನ್ನು ಬ್ಯಾಂಕಿಗೆ ಕರೆಸಲಾಗುತ್ತಿದೆ.

Trending News