Income Tax Department ಮತ್ತೆ ನೀಡಿದೆ ವಿನಾಯ್ತಿ, ಸೆಪ್ಟೆಂಬರ್ 30ರೊಳಗೆ ಈ ಕೆಲಸ ಪೂರ್ಣಗೊಳಿಸಿ

ಸಿಬಿಡಿಟಿ ಆದೇಶದ ಪ್ರಕಾರ, ಐಟಿಆರ್ -5 ಅನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸದ ಕಾರಣ, ಆದಾಯವನ್ನು 'ಭರ್ತಿ ಮಾಡಿಲ್ಲ' ಅಂದರೆ ಅಕ್ರಮ ಎಂದು ಘೋಷಿಸಲಾಗುತ್ತದೆ.

Last Updated : Jul 23, 2020, 08:47 PM IST
Income Tax Department ಮತ್ತೆ ನೀಡಿದೆ ವಿನಾಯ್ತಿ, ಸೆಪ್ಟೆಂಬರ್ 30ರೊಳಗೆ ಈ ಕೆಲಸ ಪೂರ್ಣಗೊಳಿಸಿ title=

ನವದೆಹಲಿ: ಆರ್ಥಿಕ ವರ್ಷ 2015-16 ರಿಂದ ಆರ್ಥಿಕ ವರ್ಷ 2019-20 ವರೆಗೆ ಇಲೆಕ್ಟ್ರಾನಿಕ್ ರೂಪದಲ್ಲಿ ಸಲ್ಲಿಸಲಾಗದ ತೆರಿಗೆ ರಿಟರ್ನ್ಸ್ ಅನ್ನು ಇನ್ನೂ ಪರಿಶೀಲಿಸದ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ವಿನಾಯಿತಿ ನೀಡಿದೆ. ಇದೀಗ ಪರಿಶೀಲನಾ ಪ್ರಕ್ರಿಯೆಯನ್ನು 2020 ಸೆಪ್ಟೆಂಬರ್ 30 ರೊಳಗೆ ಪೂರ್ಣಗೊಳಿಸಲು ಆದಾಯ ತೆರಿಗೆ ಇಲಾಖೆ ಹೇಳಿದೆ.

ವಿದ್ಯುನ್ಮಾನವಾಗಿ ಭರ್ತಿ ಮಾಡಲಾದ ಹೆಚ್ಚಿನ ಸಂಖ್ಯೆಯ ಐಟಿಆರ್‌ಗಳು (ಗಣನೀಯ ಆದಾಯ) ಇನ್ನೂ ಬಾಕಿ ಉಳಿದಿವೆ ಎಂದು ಸಿಬಿಡಿಟಿ ಆದೇಶದಲ್ಲಿ ತಿಳಿಸಿದೆ. ಐಟಿಆರ್ -5 (ಪರಿಶೀಲನೆ) ಫಾರ್ಮ್ ಅನ್ನು ಸೆಂಟ್ರಲೈಸಡ್ ಪ್ರೊಸೆಸಿಂಗ್ ಸೆಂಟರ್ (ಸಿಪಿಸಿ) ಬೆಂಗಳೂರಿಗೆ ಸಂಬಂಧಪಟ್ಟ ತೆರಿಗೆದಾರರು ಕಳುಹಿಸದಿರುವುದೇ ಇದಕ್ಕೆ ಕಾರಣ ಎಂದು ಹೇಳಿದೆ.

ಸಿಬಿಡಿಟಿ ಆದೇಶದ ಪ್ರಕಾರ, ಐಟಿಆರ್ -5 ಅನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸದ ಕಾರಣ, ಆದಾಯವನ್ನು 'ಭರ್ತಿ ಮಾಡಿಲ್ಲ' ಅಂದರೆ ಅಕ್ರಮ ಎಂದು ಘೋಷಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ದೂರುಗಳನ್ನು ಒಂದೇ ಬಾರಿಗೆ ಪರಿಹರಿಸುವ ಉದ್ದೇಶದಿಂದ, ಸಿಬಿಟಿಡಿ 2015-16, 2016-17, 2018-19 ಮತ್ತು 2019-20ರ ಮೌಲ್ಯಮಾಪನ ವರ್ಷಗಳಿಗೆ ವಿದ್ಯುನ್ಮಾನವಾಗಿ ಸಲ್ಲಿಸಿದ ತೆರಿಗೆ ರಿಟರ್ನ್ಸ್ ಪರಿಶೀಲನೆಗೆಇದೀಗ  ಅವಕಾಶ ನೀಡಿದೆ.

ಇದರ ಅಡಿಯಲ್ಲಿ, ಐಟಿ -5 ಫಾರ್ಮ್ ಅನ್ನು ಸಹಿ ಮಾಡಿ ಸಿಪಿಸಿ ಬೆಂಗಳೂರಿಗೆ ಕಳುಹಿಸಬೇಕು ಅಥವಾ ಅದನ್ನು ಇವಿಸಿ / ಒಟಿಪಿ ಮೂಲಕ ಪರಿಶೀಲಿಸಬಹುದು.

ಈ ಪ್ರಕರಣಗಳಲ್ಲಿ ವಿನಾಯ್ತಿ ಇಲ್ಲ
ಈ ರೀತಿಯ ಪರಿಶೀಳನೆಗಳನ್ನು 30 ಸೆಪ್ಟೆಂಬರ್ 2020 ರೊಳಗೆ ಪೂರ್ಣಗೊಳಿಸಬೇಕು. ಆದರೆ,  ಈ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆಯು ಆದಾಯವನ್ನು 'ಭರ್ತಿ ಮಾಡಿಲ್ಲ' ಎಂದು ಘೋಷಿಸಿದ ಸಂದರ್ಭಗಳಲ್ಲಿ ಈ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಬೆಳೆದಿದೆ.

ನಿಯಮ ಏನು ಹೇಳುತ್ತದೆ?
ಯಾವುದೇ ತೆರಿಗೆದಾರನು ಆದಾಯ ತೆರಿಗೆ ರಿಟರ್ನ್ ಅನ್ನು ವಿದ್ಯುನ್ಮಾನವಾಗಿ ಡಿಜಿಟಲ್ ಸಹಿ ಇಲ್ಲದೆ ಭರ್ತಿ ಮಾಡಿದರೆ, ಅದನ್ನು ಅವರು 'ಒನ್ ಟೈಮ್ ಪಾಸ್ವರ್ಡ್' ಅಥವಾ ಇ-ಫೈಲಿಂಗ್ ಖಾತೆಯಲ್ಲಿ ನೆಟ್ ಬ್ಯಾಂಕಿಂಗ್ ಮೂಲಕ ಅಥವಾ ಎಲೆಕ್ಟ್ರಾನಿಕ್ ವೆರಿಫಿಕೇಶನ್ ಕೋಡ್ (ಇವಿಸಿ) ಅಥವಾ ಐಟಿಆರ್ -5 ಫಾರ್ಮ್‌ಗೆ ಸಹಿ ಮಾಡುವ ಮೂಲಕ ಮತ್ತು ಅದನ್ನು ಸಿಪಿಸಿ ಬೆಂಗಳೂರಿಗೆ ಕಳುಹಿಸುವ ಮೂಲಕ ಪರಿಶೀಲಿಸಬೇಕಾಗಿದೆ. ಐಟಿಆರ್ ಅನ್ನು ಅಪ್‌ಲೋಡ್ ಮಾಡಿದ 120 ದಿನಗಳಲ್ಲಿ ಅವರು ಈ ಎಲ್ಲ ಕೆಲಸ ಮಾಡಬೇಕು.

Trending News