ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತ

ಉಕ್ರೇನ್‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಕಾರ್ಯವಿಧಾನದ ಮತದಾನ"ದ ಸಂದರ್ಭದಲ್ಲಿ ಭಾರತವು ಬುಧವಾರ ಮೊದಲ ಬಾರಿಗೆ ರಷ್ಯಾ ವಿರುದ್ಧ ಮತ ಚಲಾಯಿಸಿದೆ.

Written by - Zee Kannada News Desk | Last Updated : Aug 25, 2022, 06:09 PM IST
  • ಇಲ್ಲಿಯವರೆಗೆ, ಉಕ್ರೇನ್‌ನ ವಿಚಾರದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ದೇಶವು ಅಂತರವನ್ನು ಕಾಯ್ದುಕೊಂಡಿತ್ತು,
 ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತ title=

ನವದೆಹಲಿ: ಉಕ್ರೇನ್‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಕಾರ್ಯವಿಧಾನದ ಮತದಾನ"ದ ಸಂದರ್ಭದಲ್ಲಿ ಭಾರತವು ಬುಧವಾರ ಮೊದಲ ಬಾರಿಗೆ ರಷ್ಯಾ ವಿರುದ್ಧ ಮತ ಚಲಾಯಿಸಿದೆ.

ಫೆಬ್ರವರಿಯಲ್ಲಿ ರಷ್ಯಾದ ಸೇನಾ ಕಾರ್ಯಾಚರಣೆ ಆರಂಭವಾದ ನಂತರ ಉಕ್ರೇನ್ ವಿಷಯದಲ್ಲಿ ರಷ್ಯಾ ವಿರುದ್ಧ ಭಾರತ ಮತ ಚಲಾಯಿಸಿದ್ದು ಇದೇ ಮೊದಲು.ಇಲ್ಲಿಯವರೆಗೆ, ಉಕ್ರೇನ್‌ನ ವಿಚಾರದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ದೇಶವು ಅಂತರವನ್ನು ಕಾಯ್ದುಕೊಂಡಿತ್ತು, ಇದು ಯುನೈಟೆಡ್ ಸ್ಟೇಟ್ಸ್ ನೇತೃತ್ವದ ಪಾಶ್ಚಿಮಾತ್ಯ ಶಕ್ತಿಗಳಿಗೆ ಹೆಚ್ಚು ಕಿರಿಕಿರಿ ಉಂಟುಮಾಡಿತ್ತು.ಆಕ್ರಮಣದ ನಂತರ ಯುಎಸ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ಪ್ರಮುಖ ಆರ್ಥಿಕ ಮತ್ತು ಇತರ ನಿರ್ಬಂಧಗಳನ್ನು ವಿಧಿಸಿವೆ.

ಇದನ್ನೂ ಓದಿ : ‘ಕೆಜಿಎಫ್-2’ ದಾಖಲೆ ಯಾರೂ ಮುರಿಯಲು ಆಗಲ್ಲ: ಆಮೀರ್ ಖಾನ್ ಸಿನಿಮಾ ಸೋತಿದ್ದು ಎಲ್ಲಿ..?

ಉಕ್ರೇನ್ ವಿರುದ್ಧದ ಆಕ್ರಮಣಕ್ಕಾಗಿ ರಷ್ಯಾವನ್ನು ಭಾರತ ಇದುವರೆಗೂ ಟೀಕಿಸಿಲ್ಲ. ರಾಜತಾಂತ್ರಿಕತೆ ಮತ್ತು ಸಂವಾದದ ಹಾದಿಗೆ ಮರಳಲು ರಷ್ಯಾ ಮತ್ತು ಉಕ್ರೇನ ದೇಶಗಳಿಗೆ ಭಾರತ ಹಲವಾರು ಭಾರಿ ಕರೆ ನೀಡಿದೆ ಮತ್ತು ಉಭಯ ದೇಶಗಳ ನಡುವಿನ ಸಂಘರ್ಷವನ್ನು ಕೊನೆಗೊಳಿಸುವ ಎಲ್ಲಾ ರಾಜತಾಂತ್ರಿಕ ಪ್ರಯತ್ನಗಳಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ. 

ಇದನ್ನೂ ಓದಿ : Vikrant Rona Box Office Collection : ಬಾಕ್ಸ್‌ ಆಫಿಸ್‌ನಲ್ಲಿ 'ವಿಕ್ರಾಂತ್‌ ರೋಣ' ಹೊಸ ಹಿಸ್ಟರಿ..! 

ಭಾರತವು ಪ್ರಸ್ತುತ ಯುಎನ್‌ಎಸ್‌ಸಿಯ ಎರಡು ವರ್ಷಗಳ ಅವಧಿಗೆ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿದೆ, ಇದು ಡಿಸೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ. ಬುಧವಾರದಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಉಕ್ರೇನ್‌ನ ಸ್ವಾತಂತ್ರ್ಯದ 31 ನೇ ವಾರ್ಷಿಕೋತ್ಸವದಂದು ಈಗ ಆರು ತಿಂಗಳ ಹಳೆಯ ಸಂಘರ್ಷದ ವಿಚಾರವಾಗಿ ಸಭೆಯನ್ನು ನಡೆಸಿತು.

ಸಭೆ ಪ್ರಾರಂಭವಾಗುತ್ತಿದ್ದಂತೆ, ವಿಶ್ವಸಂಸ್ಥೆಯ ರಷ್ಯಾದ ರಾಯಭಾರಿ ವಾಸಿಲಿ ಎ ನೆಬೆಂಜಿಯಾ ಅವರು ವೀಡಿಯೊ ಟೆಲಿ-ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಉಕ್ರೇನಿಯನ್ ಅಧ್ಯಕ್ಷರ ಭಾಗವಹಿಸುವಿಕೆಯ ಬಗ್ಗೆ ಕಾರ್ಯವಿಧಾನದ ಮತವನ್ನು ಕೋರಿದರು.ಅವರು ಮತ್ತು ಅಲ್ಬೇನಿಯಾದ ಫೆರಿಟ್ ಹೊಕ್ಸಾ ಅವರ ಹೇಳಿಕೆಗಳನ್ನು ಅನುಸರಿಸಿ, ಕೌನ್ಸಿಲ್ ಝೆಲೆನ್ಸ್ಕಿಗೆ ವೀಡಿಯೊ ಟೆಲಿ-ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಲು 13 ಮತಗಳ ವಿರುದ್ಧ ಒಂದು ಮತದ ಮೂಲಕ ಆಹ್ವಾನವನ್ನು ನೀಡಿತು. ಅಂತಹ ಆಹ್ವಾನದ ವಿರುದ್ಧ ರಷ್ಯಾ ಮತ ಹಾಕಿತು, ಆದರೆ ಚೀನಾ ದೂರವಿತ್ತು.

ವೀಡಿಯೊ ಟೆಲಿ ಕಾನ್ಫರೆನ್ಸ್ ಮೂಲಕ ಅಧ್ಯಕ್ಷರ ಭಾಗವಹಿಸುವಿಕೆಗೆ ತಮ್ಮ ದೇಶದ ಆಕ್ಷೇಪಣೆಯು ನಿರ್ದಿಷ್ಟವಾಗಿ ಸಂಬಂಧಿಸಿದೆ ಎಂದು ಪುನರುಚ್ಚರಿಸಿದ ಅವರು, ಈ ವಿಷಯದ ಬಗ್ಗೆ ಕಾರ್ಯವಿಧಾನದ ಮತದಾನಕ್ಕೆ ಕರೆ ನೀಡಿದರು, ಇದಕ್ಕೆ ಭಾರತ ಮತ್ತು ಇತರ 12 ದೇಶಗಳು ಒಪ್ಪಲಿಲ್ಲ ಮತ್ತು ವೀಡಿಯೊ ಕಾನ್ಫರೆನ್ಸ್ ಮೂಲಕ ಕೌನ್ಸಿಲ್ ಅನ್ನು ಉದ್ದೇಶಿಸಿ ಮಾತನಾಡಲು ಝೆಲೆನ್ಸ್ಕಿಯನ್ನು ಬೆಂಬಲಿಸಿದವು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News