ಪೂರ್ವ ರಷ್ಯಾ ಅಭಿವೃದ್ಧಿಗಾಗಿ 1 ಬಿಲಿಯನ್ ಡಾಲರ್ ಸಾಲ ಘೋಷಿಸಿದ ಭಾರತ

ಭಾರತ ದೂರದ ಪೂರ್ವ ದೇಶಗಳ ಅಭಿವೃದ್ಧಿಗಾಗಿ 1 ಬಿಲಿಯನ್ ಡಾಲರ್ ಸಾಲವನ್ನು ಘೋಷಿಸಿದೆ.

Last Updated : Sep 5, 2019, 03:08 PM IST
ಪೂರ್ವ ರಷ್ಯಾ ಅಭಿವೃದ್ಧಿಗಾಗಿ 1 ಬಿಲಿಯನ್ ಡಾಲರ್ ಸಾಲ ಘೋಷಿಸಿದ ಭಾರತ  title=

ನವದೆಹಲಿ: ಭಾರತ ದೂರದ ಪೂರ್ವ ದೇಶಗಳ ಅಭಿವೃದ್ದಿಗಾಗಿ 1 ಬಿಲಿಯನ್ ಡಾಲರ್ ಸಾಲವನ್ನು ಘೋಷಿಸಿದೆ.

ರಷ್ಯಾ ದೇಶಕ್ಕೆ ಎರಡು ದಿನಗಳ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರವಾಸದ ವೇಳೆ ಪೂರ್ವ ದೇಶಗಳ ಕುರಿತಾದ ಭಾರತದ ನೀತಿಯೊಂದನ್ನು ಪ್ರಸ್ತುತ ಪಡಿಸಿದರು.ರಷ್ಯಾದ ಅಧ್ಯಕ್ಷ ಪುಟಿನ್ ಸಮ್ಮುಖದಲ್ಲಿ ದೂರದ ಪೂರ್ವ ಪ್ರದೇಶಗಳ ಅಭಿವೃದ್ದಿಗಾಗಿ ಭಾರತ ಹಾಗೂ ರಷ್ಯಾ ಒಂದಾಗಿ ಕಾರ್ಯನಿರ್ವಹಿಸಲಿವೆ ಎಂದು ಮೋದಿ ಹೇಳಿದರು.

ವ್ಲಾಡಿವೋಸ್ಟಾಕ್‌ನಲ್ಲಿ ನಡೆಯುತ್ತಿರುವ ಪೂರ್ವ ಆರ್ಥಿಕ ವೇದಿಕೆ ಸಮಗ್ರ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತಮ್ಮ ಸರ್ಕಾರವು ಭಾರತದ ಹೊಸ "ಆಕ್ಟ್ ಈಸ್ಟ್" ನೀತಿಯಡಿಯಲ್ಲಿ ಪೂರ್ವ ಏಷ್ಯಾದ ರಾಷ್ಟ್ರಗಳನ್ನು ತೊಡಗಿಸಿಕೊಂಡಿದೆ ಎಂದು ಹೇಳಿದರು.'ಇಂದಿನ ಘೋಷಣೆಯು 'ಆಕ್ಟ್ ಫಾರ್ ಈಸ್ಟ್ ನೀತಿ ಭಾಗವಾಗಿರುತ್ತದೆ ಎಂದು ನಾನು ಧೃಡವಾಗಿ ನಂಬುತ್ತೇನೆ' ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.

ಈ ಹಂತವು ಉಭಯ ದೇಶಗಳ ನಡುವಿನ ಆರ್ಥಿಕ ರಾಜತಾಂತ್ರಿಕತೆಗೆ ಹೊಸ ಆಯಾಮವನ್ನು ನೀಡುತ್ತದೆ ಎಂದು ಅವರು ಹೇಳಿದರು. ಮಿತ್ರ ರಾಷ್ಟ್ರಗಳ ಪ್ರದೇಶಗಳ ಅಭಿವೃದ್ದಿ ಭಾರತ ಸಕ್ರೀಯವಾಗಿ ಪಾಲ್ಗೊಳ್ಳಲಿದೆ ಎಂದು ಅವರು ತಿಳಿಸಿದರು.

ಪೂರ್ವ ಆರ್ಥಿಕ ವೇದಿಕೆಯು ರಷ್ಯಾದ ದೂರದ ಪೂರ್ವ ವಲಯದಲ್ಲಿ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳ ಅಭಿವೃದ್ಧಿಯತ್ತ ಗಮನಹರಿಸಲು ಉದ್ದೇಶಿಸಿದೆ ಮತ್ತು ಭಾರತ ಮತ್ತು ರಷ್ಯಾ ನಡುವೆ ಪರಸ್ಪರ ಲಾಭದಾಯಕ ಸಹಕಾರವನ್ನು ಅಭಿವೃದ್ಧಿಪಡಿಸಲು ಒಂದು ದೊಡ್ಡ ಅವಕಾಶವನ್ನು ಒದಗಿಸುತ್ತದೆ.
 

Trending News