ಇಂದು BRICS ಸಭೆಯಲ್ಲಿ Ajit Doval ಜೊತೆಗೆ ಚೀನಾ NSA ಮುಖಾಮುಖಿ

ಎಲ್‌ಐಸಿ ಬಳಿಯ ಉದ್ವಿಗ್ನತೆಯ ನಡುವೆ ಬ್ರಿಕ್ಸ್ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರ (NSAರ )ಸಭೆ ನಡೆಯಲಿದೆ. ಈ ಸಭೆಯಲ್ಲಿ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ದೇಶಗಳ  ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಾಗವಹಿಸಲಿದ್ದಾರೆ. ಈ ಸಭೆ ವರ್ಚುವಲ್ ಅಂದರೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯಲಿದೆ.

Last Updated : Sep 17, 2020, 11:42 AM IST
  • ಇಂದು BRICS ರಾಷ್ಟ್ರಗಳ ಸಭೆ ನಡೆಯಲಿದೆ.
  • ಸಭೆಯಲ್ಲಿ BRICS ರಾಷ್ಟ್ರಗಳ NSAಗಳು ಶಾಮೀಲಾಗಲಿದ್ದಾರೆ.
  • ಇಂದು ಅಜೀತ್ ದೊಭಾಲ್ ಹಾಗೂ ಚೀನಾ NSA ಮುಖಾಮುಖಿಯಾಗಲಿದ್ದಾರೆ.
ಇಂದು BRICS ಸಭೆಯಲ್ಲಿ Ajit Doval ಜೊತೆಗೆ ಚೀನಾ NSA ಮುಖಾಮುಖಿ  title=

ನವದೆಹಲಿ: ಎಲ್‌ಐಸಿ ಬಳಿಯ ಉದ್ವಿಗ್ನತೆಯ ನಡುವೆ ಬ್ರಿಕ್ಸ್ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA)ರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ದೇಶಗಳ  ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಾಗವಹಿಸಲಿದ್ದಾರೆ. ಈ ಸಭೆ ವರ್ಚುವಲ್ ಅಂದರೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯಲಿದೆ. ಚೀನಾದೊಂದಿಗೆ ನಡೆಯುತ್ತಿರುವ ಗಡಿ ವಿವಾದದ ನಡುವೆ ಈ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ. ಏಕೆಂದರೆ ಭಾರತದ NSA ಅಜಿತ್ ದೋವಲ್ (Ajit Doval) ಮತ್ತು ಚೀನಾದ NSA ಯಾಂಗ್ ಜೀಚಿ ಸಭೆಯಲ್ಲಿ ಮುಖಾಮುಖಿಯಾಗಲಿದ್ದಾರೆ.

ರಷ್ಯಾ ಈ ಸಭೆಯನ್ನು ಆಯೋಜಿಸುತ್ತಿದೆ. 'ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಭದ್ರತೆಯ ಕುರಿತು ಉದ್ಭವಿಸುವ ಬೆದರಿಕೆಗಳು ಮತ್ತು ಸವಾಲುಗಳ ಕುರಿತು ಬ್ರಿಕ್ಸ್ ದೇಶಗಳು ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ' ಎಂದು ರಷ್ಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪೆಟ್ರುಚೆವ್ ಈ ಸಭೆಯನ್ನು ಪ್ರತಿನಿಧಿಸಲಿದ್ದಾರೆ. ಈ ಸಭೆಯಲ್ಲಿ, ಗಡಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಕುರಿತು ಭಾರತ ಮತ್ತು ಚೀನಾದ NSAಗಳ ನಡುವೆ ಯಾವುದೇ ಮಾತುಕತೆ ನಡೆಯಲಿದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.ಆದರೆ, ಈ ಸಭೆಯಲ್ಲಿ ದ್ವಿಪಕ್ಷೀಯ ವಿಷಯಗಳ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಕಾರ್ಯಸೂಚಿಯಲ್ಲಿ ನಿಗದಿಪಡಿಸಲಾಗಿರುವ ವಿಷಯಗಳ ಮೇಲೆ ಮಾತ್ರ ಚರ್ಚೆ ನಡೆಯ್ತಲಿದೆ. 

Also Read- PM Modi ಆದೇಶದ ಮೇರೆಗೆ NSA Ajit Doval ಚೀನಾಗೆ ನೀಡಿದ ಸಂದೇಶ ಇದು.. ಇಲ್ಲಿದೆ ಸಂಪೂರ್ಣ ವರದಿ

ಆದರೆ, ಭಾರತ ಮತ್ತು ಚೀನಾ ಎರಡೂ ದೇಶಗಳು ಗಡಿ ಉದ್ವಿಗ್ನತೆಯ ಬಗ್ಗೆ ಯಾವುದೇ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಸಹಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿವೆ. ಈ ತಿಂಗಳ ಆರಂಭದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಈ ದೇಶಗಳ ವಿದೇಶಾಂಗ ಮಂತ್ರಿಗಳು ನೆರೆದಿದ್ದ ಬ್ರಿಕ್ಸ್ ಸಭೆಯಲ್ಲಿ ಭಾಗವಹಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಇದರ ಮುಂದಿನ ಸಭೆ ಅಕ್ಟೋಬರ್‌ನಲ್ಲಿ ನಡೆಯಲಿದೆ, ಆದರೆ ಇದುವರೆಗೆ ಯಾವುದೇ ದಿನಾಂಕವನ್ನು ಘೋಷಿಸಲಾಗಿಲ್ಲ.

Trending News