ನವದೆಹಲಿ: ಕರೋನಾ ಬಿಕ್ಕಟ್ಟಿನ ಮಧ್ಯೆ, ಕಾರ್ಮಿಕ ರೈಲುಗಳಲ್ಲದೆ, ಜೂನ್ 1 ರಿಂದ 200 ಎಸಿ ರಹಿತ ರೈಲುಗಳನ್ನು ಸಹ ಓಡಿಸಲಾಗುವುದು ಎಂದು ರೈಲ್ವೆ ಸಚಿವಾಲಯ (ಭಾರತೀಯ ರೈಲ್ವೆ) ಪ್ರಕಟಿಸಿದೆ. ರೈಲ್ವೆ ಸಚಿವಾಲಯ ತನ್ನ ಟ್ವೀಟ್ನಲ್ಲಿ ಶ್ರಮಿಕ್ ವಿಶೇಷ ರೈಲುಗಳಲ್ಲದೆ, ಭಾರತೀಯ ರೈಲ್ವೆ ಜೂನ್ 1 ರಿಂದ ಪ್ರತಿದಿನ 200 ಹೆಚ್ಚುವರಿ ಟೈಮ್ ಟೇಬಲ್ ರೈಲುಗಳನ್ನು ಓಡಿಸಲಿದೆ ಎಂದು ಮಾಹಿತಿ ನೀಡಿದೆ . ಈ ರೈಲುಗಳು ನಾನ್-ಎಸಿ ಎರಡನೇ ದರ್ಜೆಯ ರೈಲುಗಳಾಗಿದ್ದು, ಈ ರೈಳುಗಲಿಗಾಗಿ ಆನ್ಲೈನ್ ನಲ್ಲಿ ಬುಕಿಂಗ್ ಆರಂಭವಾಗಲಿದ್ದು, ಎಲ್ಲಾ ರೈಲುಗಳ ಮಾಹಿತಿ ಶೀಘ್ರವೇ ಲಭ್ಯವಾಗಲಿದೆ.
ಐಆರ್ಸಿಟಿಸಿ ವೆಬ್ಸೈಟ್ ಮತ್ತು ಮೊಬೈಲ್ ಆ್ಯಪ್ ಮೂಲಕ ಈ ವಿಶೇಷ ಎಸಿ ರಹಿತ್ ಪ್ರಯಾಣಿಕ ರೈಲುಗಳಿಗೆ ಆನ್ಲೈನ್ ಟಿಕೆಟ್ ಬುಕಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಸಚಿವಾಲಯ ತಿಳಿಸಿದೆ. ಅಂದರೆ ರೈಲ್ವೆ ನಿಲ್ದಾಣಗಳಲ್ಲಿನ ಟಿಕೆಟ್ ಕೌಂಟರ್ ನಲ್ಲಿ ಟಿಕೆಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಶೀಘ್ರದಲ್ಲಿಯೇ ಮಾರ್ಗಗಳ ಹಾಗೂ ವೇಳಾಪಟ್ಟಿಯ ವಿವರ ಬಿಡುಗಡೆಯಾಗಿದೆ
ಜೂನ್ 1 ರಿಂದ ಚಲಿಸುವ ಈ ರೈಲುಗಳ ಮಾರ್ಗ ಮತ್ತು ಸಮಯದ ವಿವರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಸಚಿವಾಲಯ ಹೇಳಿದೆ. ಮೇ 12 ರಿಂದ ರೈಲ್ವೆ 15 ಜೋಡಿ ಎಸಿ ವಿಶೇಷ ಪ್ಯಾಸೆಂಜರ್ ರೈಲುಗಳನ್ನು ಈಗಾಗಲೇ ಪ್ರಾರಂಭಿಸಿದೆ. ಈ ರೈಳುಗಲಿಗಾಗಿ ಈಗಾಗಲೇ ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಲಾಗುತ್ತಿದೆ. ಈ ವಿಶೇಷ ರೈಲುಗಳಿಗಾಗಿ ಕಾಯುವ ಟಿಕೆಟ್ ವ್ಯವಸ್ಥೆಯನ್ನು ಸಹ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ರೈಲ್ವೆ ಮಂಡಳಿ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಮೇಲ್ ಎಕ್ಸ್ಪ್ರೆಸ್ ವಿಶೇಷ ರೈಲಿನಲ್ಲಿ ಮೊದಲ ಎಸಿ ಅಥವಾ ಕಾರ್ಯನಿರ್ವಾಹಕ ವರ್ಗಕ್ಕಾಗಿ 20 ವೇಟಿಂಗ್ ಲಿಸ್ಟ್ ಟಿಕೆಟ್ಗಳನ್ನು ನೀಡಲಾಗುತ್ತಿದೆ, ಎಸಿ ವರ್ಗದಲ್ಲಿ 100 ಆಸನಗಳು ವೇಟಿಂಗ್ ಲಿಸ್ಟ್ ನಲ್ಲಿರಲಿವೆ. ಸ್ಲೀಪರ್ ಶ್ರೇಣಿಯಲ್ಲಿ 200 ಟಿಕೆಟ್ಗಳನ್ನು ವೇಟಿಂಗ್ ಲಿಸ್ಟ್ ನಲ್ಲಿ ನೀಡಲಾಗುತ್ತಿದೆ.
ಟಿಕೆಟ್ ಬುಕ್ ಮಾಡುವಾಗ ಈ ಸಂಗತಿಗಳು ಅಗತ್ಯ
ಐಆರ್ಸಿಟಿಸಿ ವೆಬ್ಸೈಟ್ಗೆ ಟಿಕೆಟ್ ಕಾಯ್ದಿರಿಸುವಾಗ, ವಿಶೇಷ ಪ್ರಯಾಣಿಕರ ರೈಲುಗಳಿಂದ ಬರುವ ಪ್ರಯಾಣಿಕರಿಗಾಗಿ ರಾಜ್ಯಗಳು ಘೋಷಿಸಿದ ಪ್ರೋಟೋಕಾಲ್ಗಳನ್ನು ನಾವು ಓದಿದ್ದೇವೆ ಎಂದು ಪ್ರಯಾಣಿಕರು ಘೋಷಿಸುವುದು ಅನಿವಾರ್ಯವಾಗಿದೆ. ಉದಾಹರಣೆಗೆ, ಕೆಲವು ರಾಜ್ಯಗಳು ರೈಲು ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೀನ್ ಕಡ್ಡಾಯಗೊಳಿಸಿವೆ. ಇದಲ್ಲದೆ, ಟಿಕೆಟ್ ಕಾಯ್ದಿರಿಸುವಾಗ, ಪ್ರಯಾಣಿಕರು ತಮ್ಮ ಗಮ್ಯಸ್ಥಾನ ವಿಳಾಸವನ್ನು ಸಹ ಒದಗಿಸುವುದು ಕೂಡ ಅನಿವಾರ್ಯವಾಗಿದ್ದು, ಕಾಂಟಾಕ್ಟ್ ಟ್ರೆಸಿಂಗ್ ಗಾಗಿ ಇದು ಅಗತ್ಯವಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.