TikTokನ 'ಅಚ್ಛೆ ದಿನ್' ಖತಂ...? ಭಾರಿ ಪೈಪೋಟಿ ನೀಡುತ್ತಿದೆ ಭಾರತೀಯ ಮೂಲದ MITRON...!

ಇತ್ತೀಚೆಗಷ್ಟೇ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಲೋಕಲ್ ಗಾಗಿ ವೋಕಲ್ ಆಗಲು ಮನವಿ ಮಾಡಿದ್ದರು. ಟಿಕ್ ಟಾಕ್ ಒಂದು ಚೈನೀಸ್ ಆಪ್ ಆಗಿದ್ದು, ಸದ್ಯ ಅದು ಭಾರತದಲ್ಲಿ ಎರಡು ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಏತನ್ಮಧ್ಯೆ ಟಿಕ್ ಟಾಕ್ ರೀತಿಯೇ ಭಾರತೀಯ ಮೂಲದ ಆಪ್ 'Mitron' ಇದೀಗ ಭಾರಿ ಸದ್ದು ಮಾಡಲಾರಂಭಿಸಿದೆ. ಆದರೆ, ಇದು ಟಿಕ್ ಟಾಕ್ ಅನ್ನು ಮಣಿಸಲು ಯಶಸ್ವಿಯಾಗಬಹುದೇ?

Last Updated : May 27, 2020, 08:57 PM IST
TikTokನ  'ಅಚ್ಛೆ ದಿನ್' ಖತಂ...? ಭಾರಿ ಪೈಪೋಟಿ ನೀಡುತ್ತಿದೆ ಭಾರತೀಯ ಮೂಲದ MITRON...! title=

ನವದೆಹಲಿ: ವಿಶ್ವದ ಖ್ಯಾತ ಮತ್ತು ಚೀನಾ ಮೂಲದ ಶಾರ್ಟ್ ವಿಡಿಯೋ ಆಪ್ ಟಿಕ್ ಟಾಕ್ ಭಾರಿ ಚರ್ಚೆಯಲ್ಲಿದೆ. ಇತ್ತೀಚೆಗಷ್ಟೇ ಆಸಿಡ್ ಅಟ್ಯಾಕ್ ನಂತಹ ಕಂಟೆಂಟ್ ಬಿತ್ತರಿಸಿದ್ದಕ್ಕಾಗಿ ಈ ಆಪ್ ಅನ್ನು ನಿರ್ಬಂಧಿಸಬೇಕು ಎಂಬ ಕೂಗುಗಳು ಕೇಳಿಬಂದಿದ್ದವು. ಏತನ್ಮಧ್ಯೆ ಟಿಕ್ ಟಾಕ್ ರೀತಿಯೇ ಭಾರತೀಯ ಮೂಲದ 'ಮಿತ್ರೋ' ಹೆಸರಿನ ಆಪ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಅತಿ ಕಡಿಮೆ ಕಾಲಾವಧಿಯಲ್ಲಿ ಈ ಆಪ್ ಖ್ಯಾತಿಯ ಉತ್ತುಂಗಕ್ಕೆ ಏರಲು ತನ್ನ ಯಾತ್ರೆ ಆರಂಭಿಸಿದ್ದು, ಭಾರತದ ಅತ್ಯಂತ ಜನಪ್ರೀಯ ಆಪ್ ಗಳ ಪಟ್ಟಿಯಲ್ಲಿ ಇದು ತನ್ನ ಸ್ಥಾನ ಭದ್ರಪಡಿಸಿದೆ. ಕೇವಲ ಒಂದು ತಿಂಗಳ ಹಿಂದೆಯಷ್ಟೇ ಈ ಆಪ್ ಬಿದುಗದೆಯಾಗಿರುವುದು ಇಲ್ಲಿ ಗಮನಾರ್ಹ..

ಕೇವಲ ಒಂದು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿರುವ ಈ ಆಪ್ ಅನ್ನು ಇದುವರೆಗೆ ಸುಮಾರು 50 ಲಕ್ಷಕ್ಕೂ ಅಧಿಕ ಬಾರಿಗೆ ಡೌನ್ ಲೋಡ್ ಮಾಡಲಾಗಿದೆ. ಆರಂಭದಲ್ಲಿ ಈ ಆಪ್ ನ ಡೌನ್ ಲೋಡ್ ಸ್ಪೀಡ್ ಗಮನಿಸಿದರೆ, ಇದು ಚೀನಾ ಮೂಲದ ಟಿಕ್ ಟಾಕ್ ಆಪ್ ಗೆ ಭಾರಿ ಪೈಪೋಟಿ ನೀಡಲಿದೆ ಎನ್ನಲಾಗುತ್ತಿದೆ.

ಟಿಕ್ ಟಾಕ್ ಮೇಲೆ ಸಂಕಷ್ಟದ ಕಾರ್ಮೋಡ
ಈ ಆಪ್ ಅನ್ನು ಟಿಕ್ ಟಾಕ್ ಆಧರಿಸಿಯೇ ನಿರ್ಮಿಸಲಾಗಿದೆ. ತನ್ನಷ್ಟಕ್ಕೆ ಇದೊಂದು ಶಾರ್ಟ್ ವಿಡಿಯೋ ಹಾಗೂ ಸೋಶಿಯಲ್ ಮೀಡಿಯಾ ಆಪ್ ಎಂದು ಇದು ಹೇಳಿಕೊಳ್ಳುತ್ತದೆ. ಜನರಿಗೆ ಅವರ ಇನ್ನೋವೇಟಿವ್ ಐಡಿಯಾ ಹಾಗೂ ಹ್ಯೂಮರ್ ಗಳ ಪ್ರದರ್ಶನಕ್ಕೆ ಈ ಆಪ್ ಅವಕಾಶ ನೀಡಲಿದೆ ಎಂದು ಹೇಳಲಾಗಿದೆ.

ಟಿಕ್ ಟಾಕ್ ರೀತಿಯೇ ಇದರಲ್ಲಿಯೂ ಕೂಡ ಶಾರ್ಟ್ ವಿಡಿಯೋ ಸಿದ್ಧಪಡಿಸಿ, ಎಡಿಟ್ ಮಾಡಬಹುದಾಗಿದೆ ಹಾಗೂ ಅವುಗಳನ್ನು ಇತರೆ ಸಾಮಾಜಿಕ ಮಾಧ್ಯಮಗಳ ಮೇಲೆ ಹಂಚಿಕೊಳ್ಳಬಹುದು. 7.8 ಎಂಬಿ ಗಾತ್ರದ ಈ ಆಪ್, ನೀವು ಟಿಕ್ ಟಾಕ್ ಗೆ ನೀಡುವ ಎಲ್ಲ ಅನುಮತಿಗಳಿಗೆ ಅನುಮತಿ ನೀಡಲು ಕೇಳುತ್ತದೆ.

Trending News