ವಾಟ್ಸಾಪ್‌ನಲ್ಲಿ ಮಾಹಿತಿ ಸೋರಿಕೆ ವಿರುದ್ಧ ಕಠಿಣ ಕ್ರಮ; ಸೇನೆ ಎಚ್ಚರಿಕೆ

ಯಾವುದೇ ಮಾಹಿತಿ ಸೋರಿಕೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೇನೆಯು ಎಚ್ಚರಿಸಿದೆ. ಅಂತಹ ವಿಐಪಿಗಳ ಗ್ರೂಪ್ ನಿಂದ ಹೊರಬರಲು ಸೈನಿಕರನ್ನು ಕೇಳಲಾಗುತ್ತಿದೆ.  

Last Updated : Jul 9, 2019, 07:52 AM IST
ವಾಟ್ಸಾಪ್‌ನಲ್ಲಿ  ಮಾಹಿತಿ ಸೋರಿಕೆ ವಿರುದ್ಧ ಕಠಿಣ ಕ್ರಮ; ಸೇನೆ ಎಚ್ಚರಿಕೆ title=

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕರು ಮತ್ತು ಅಧಿಕಾರಿಗಳಿಗೆ ಸೇನೆಯು ಹೊಸ ಸೂಚನೆಗಳನ್ನು ನೀಡಿದೆ. ವಾಟ್ಸಾಪ್ ಗ್ರೂಪ್ ಗಳಲ್ಲಿ ಸೇರುವ ಬಗ್ಗೆ ಜಾಗರೂಕರಾಗಿರಲು ಸೂಚನೆ ನೀಡಿದ್ದು, ಯಾವುದೇ ಮಾಹಿತಿ ಸೋರಿಕೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೇನಾ ಪ್ರಧಾನ ಕಚೇರಿ ಎಚ್ಚರಿಸಿದೆ. ಅಷ್ಟೇ ಅಲ್ಲದೆ ಈಗಾಗಲೇ ಯಾರಾದರೂ ಅಂತಹ ವಿಐಪಿಗಳ ಗ್ರೂಪ್ ನಲ್ಲಿದ್ದರೆ, ಅದರಿಂದ ಎಕ್ಸಿಟ್ ಆಗುವಂತೆ ಸೈನಿಕರನ್ನು ಕೇಳಲಾಗುತ್ತಿದೆ.

ಇತ್ತೀಚೆಗೆ ಸೇನೆಯಲ್ಲಿ ವಿವಿಧ ಸೆಕ್ಷನ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ಈ ಸೂಚನೆಗಳನ್ನು  ಕಳುಹಿಸಲಾಗಿದೆ. ವಾಟ್ಸಾಪ್ ಗ್ರೂಪ್ ಮೂಲಕ ಸೈನ್ಯದ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಂತೆ ಹಲವು ವಿಷಯಗಳು ಶೇರ್ ಆಗುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಇತ್ತೀಚಿನ ಘಟನೆಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೇನೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಕುಳಿತ ಏಜೆನ್ಸಿಗಳು ಭಾರತೀಯ ಸೇನೆಯ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿವೆ. ವಾಟ್ಸಾಪ್ ಗ್ರೂಪ್ ನಲ್ಲಿ ಭಾಗಿಯಾಗಿರುವ ಯಾವುದೇ ಮಿಲಿಟರಿ ಅಥವಾ ಅಧಿಕಾರಿಯಿಂದ ಮಾಹಿತಿಯನ್ನು ಸಂಗ್ರಹಿಸುವುದು ಸುಲಭ. ಆ ವಾಟ್ಸಾಪ್ ಗ್ರೂಪ್ ಗಳಲ್ಲಿ ಅಪಾಯ ಹೆಚ್ಚು, ಇದರಲ್ಲಿ ಸೈನ್ಯವನ್ನು ಹೊರತುಪಡಿಸಿ ಇತರರು ಸಹ ಭಾಗಿಯಾಗಿದ್ದಾರೆ. ಅದಕ್ಕಾಗಿಯೇ ನೀವು ಪ್ರತಿ ಸದಸ್ಯರೊಂದಿಗೆ ವೈಯಕ್ತಿಕವಾಗಿ ಪರಿಚಿತವಾಗಿರುವಂತಹ ವಾಟ್ಸಾಪ್ ಗ್ರೂಪ್ ಗಳಲ್ಲಿ ಮಾತ್ರ ಉಳಿಯುವುದು ಸುರಕ್ಷಿತವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಸೈನ್ಯದಲ್ಲಿ, ಸೈನಿಕರು ಅಥವಾ ಅಧಿಕಾರಿಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಅವರನ್ನು ಬಲೆಗೆ ಬೀಳಿಸುವ ಮತ್ತು ಅವರಿಂದ ಸೈನ್ಯದ ಮಾಹಿತಿಯನ್ನು ಸಂಗ್ರಹಿಸುವ ಅನೇಕ ಘಟನೆಗಳು ನಡೆದಿವೆ." ಈ ಘಟನೆಗಳಲ್ಲಿ ಜನರಲ್ ಸೋಲ್ಜರ್‌ನಿಂದ ಹೈ ಪೋಸ್ಟ್‌ಗಳಲ್ಲಿರುವ ಅಧಿಕಾರಿಗಳು ಸೇರಿದ್ದಾರೆ. ಅವರು ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ವಂಚನೆಯಿಂದ ಸಿಕ್ಕಿಬಿದ್ದಿದ್ದಾರೆ. ನಂತರ ಬ್ಲ್ಯಾಕ್ಮೇಲ್ ಗಳಿಗೂ ಒಳಗಾಗಿದ್ದಾರೆ. ಅಂತಹ ಸಂದರ್ಭಗಳಲ್ಲಿ, ಸೈನಿಕರು ಅನೇಕ ಬಾರಿ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ. ಆದರೆ  ವಾಟ್ಸಾಪ್ ಗ್ರೂಪ್ ನಲ್ಲಿ ಭಾಗಿಯಾಗಿರುವ ಯಾವುದೇ ಮಿಲಿಟರಿ ಅಥವಾ ಅಧಿಕಾರಿಯಿಂದ ಮಾಹಿತಿಯನ್ನು ಸಂಗ್ರಹಿಸುವುದು ಸುಲಭ.  ಮಾಹಿತಿಯನ್ನು ವಾಟ್ಸಾಪ್ ಗ್ರೂಪ್ ನಲ್ಲಿರುವ ಇತರ ಸದಸ್ಯರು ಬಳಸುವುದು ತುಂಬಾ ಸುಲಭ, ಆದ್ದರಿಂದ ಇದು ಹೆಚ್ಚು ಅಪಾಯಕಾರಿ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 

Trending News