ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕೆ Arrest Warrent ಜಾರಿ...!

ಅಮೇರಿಕಾದ ಅಕ್ಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇತರ ಹಲವರನ್ನು ಬಂಧಿಸಲು ಇರಾನ್ ಇಂಟರ್ ಪೋಲ್ ನ ನೆರವು ಕೋರಿದೆ.  

Last Updated : Jun 29, 2020, 07:28 PM IST
ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕೆ Arrest Warrent ಜಾರಿ...! title=

ತೆಹರಾನ್: ಬಾಗ್ದಾದ್ ನಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇತರೆ ಹಲವು ಜನರ ಬಂಧನಕ್ಕೆ ವಾರೆಂಟ್ ಹೊರಡಿಸಿರುವ ಇರಾನ್, ಇದಕ್ಕಾಗಿ ಇಂಟರ್ ಪೋಲ್ ನ ನೆರವು ಕೋರಿದೆ. ಇರಾನ್ ನ ಸ್ಥಳೀಯ ಪ್ರಾಸಿಕ್ಯೂಟರ್ ಸೋಮವಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಇರಾನ್ ಇಟ್ಟಿರುವ ಈ ಹೆಜ್ಜೆಯಿಂದ ಡೊನಾಲ್ಡ್ ಟ್ರಂಪ್ ಅವರಿಗೆ ಯಾವುದೇ ಆತಂಕವಿಲ್ಲ ಆದರೆ, ಈ ಆರೋಪ ಮತ್ತೊಮ್ಮೆ ಇರಾನ್ ಹಾಗೂ ಅಮೇರಿಕಾ ನಡುವಣ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿವೆ.

ಇರಾನ್ ಮತ್ತು ವಿಶ್ವದ ಪ್ರಮುಖ ಶಕ್ತಿಗಳೊಂದಿಗಿನ ಪರಮಾಣು ಒಪ್ಪಂದದಿಂದ ಟ್ರಂಪ್ ದೂರ ಸರಿದ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಜನವರಿ 3 ರಂದು ಬಾಗ್ದಾದ್‌ನಲ್ಲಿ ನಡೆದ ದಾಳಿಯಲ್ಲಿ ಟ್ರಂಪ್ ಮತ್ತು 30 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂದು ಇರಾನ್ ಆರೋಪಿಸಿದೆ ಎಂದು ಟೆಹ್ರಾನ್ ಪ್ರಾಸಿಕ್ಯೂಟರ್ ಅಲಿ ಅಲ್ಕಾಸಿಂಹರ್ ಹೇಳಿದ್ದಾರೆ. ಈ ದಾಳಿಯಲ್ಲಿ ಜನರಲ್ ಕಾಸಿಮ್ ಸೊಲೈಮಾನಿ ಹತ್ಯೆಗೈಯಲಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.

ಅರೆ ಸರ್ಕಾರಿ ಸಂವಾದ ಸಂಸ್ಥೆಯಾಗಿರುವ ಐಎಸ್‌ಎನ್‌ನ ವರದಿಯ ಪ್ರಕಾರ, ಅಲ್ಕಾಸಿಮರ್ ಅವರು ಟ್ರಂಪ್ ಹೊರತುಪಡಿಸಿ ಬೇರೆ ಯಾರನ್ನೂ ಹೆಸರಿಸಿಲ್ಲ. ಆದರೆ ಟ್ರಂಪ್‌ ಆಡಳಿತಾವಧಿ  ಅವಧಿ ಮುಕ್ತಾಯದ ನಂತರವೂ ಕೂಡ ಇರಾನ್ ತನ್ನ ಕಾನೂನು ಕ್ರಮ ಮುಂದುವರಿಸಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ. 

ಫ್ರಾನ್ಸ್ ನ ಲಿಯಾನ್ ನಲ್ಲಿರುವ ಇಂಟರ್ ಪೋಲ್ ಸದ್ಯ ಇರಾನ್ ಮಾಡಿರುವ ಈ ಮನವಿಗೆ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇರಾನ್ ನ ಮನವಿಗೆ ಇಂಟರ್ ಪೋಲ್ ಮಣೆಹಾಕುವ ಯಾವುದೇ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ, ಏಕೆಂದರೆ, ಇಂಟರ್ ಪೋಲ್ ಮಾರ್ಗಸೂಚಿಗಳ ಪ್ರಕಾರ ಇಂಟರ್ ಪೋಲ್ ಯಾವುದೇ 'ರಾಜತಾಂತ್ರಿಕ ಸ್ವರೂಪ'ದ ವಿಷಯದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.

ವಾಯುದಾಳಿಯಲ್ಲಿ ಅಮೇರಿಕಾ ಕಾಸಿಂ ಸುಲೇಮಾನಿಯನ್ನು ಹತ್ಯೆಗೈದಿತ್ತು
ಯುಎಸ್ ಮತ್ತು ಇರಾನ್ ನಡುವೆ ಸೃಷ್ಟಿಸಿರುವ ಉದ್ವಿಗ್ನತೆಯ ಹಿನ್ನೆಲೆ ಯುಎಸ್ ಮಿಲಿಟರಿ ಕ್ರಮ ಕೈಗೊಂಡಿತು. ಈ ವೇಳೆ ನಡೆಸಲಾಗಿದ್ದ ವಾಯುದಾಳಿಯಲ್ಲಿ ಅಮೆರಿಕನ್ ರೆವಲ್ಯೂಷನರಿ ಗಾರ್ಡ್ (ಐಆರ್ಜಿಸಿ) ಹಿರಿಯ ಜನರಲ್ ಮತ್ತು ಕುಡ್ಸ್ ಫೋರ್ಸ್ ಕಮಾಂಡರ್ ಖಾಸಿಮ್ ಸುಲೇಮನಿ ಪ್ರಾಣ ಕಳೆದುಕೊಂಡಿದ್ದರು. ಇದೇ ವೇಳೆ ಇರಾಕ್‌ನಲ್ಲಿಯೂ ಕೂಡ  ಇರಾನ್ ಬೆಂಬಲಿತ ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸ್‌ನ ಕಮಾಂಡರ್ ಅಬು ಮೆಹಂದಿ ಅಲ್-ಮುಹಂದಿಸ್ ಹತ್ಯೆಗೈಯಾಲಾಗಿತ್ತು.

Trending News