ನವದೆಹಲಿ: ಜನೆವರಿ 1 ರಂದು ನಡೆದ ಭೀಮಾ-ಕೋರೆಗಾಂವ್ ಹಿಂಸಾಚಾರಕ್ಕೆ ಜಿಗ್ನೇಶ್ ಮೆವಾಣಿ ಕಾರಣವಲ್ಲ ಎಂದು ಕೇಂದ್ರ ಸಚಿವ ಮತ್ತು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ರಾಮದಾಸ್ ಅಠವಾಳೆ ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತಾದ ಅವರ ಹೇಳಿಕೆಯನ್ನು ಪಿಟಿಐ ವರದಿ ಮಾಡಿದೆ.
ಜನವರಿ 1 ರ ಹಿಂಸಾಚಾರದ ಹಿಂದಿನ ದಿನದಂದು ಭೀಮಾ-ಕೋರೆಗಾಂವ್ ನಲ್ಲಿ ಜಿಗ್ನೇಶ ತಮ್ಮ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಪೊಲೀಸರು ಅವರ ಮೇಲೆ ಪ್ರಕರಣ ದಾಖಲಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಅಠವಾಲೆ ಭೀಮಾ -ಕೊರೆಗಾವ್ ನಲ್ಲಿ ನಡೆದಿರುವ ಹಿಂಸಾಚಾರಕ್ಕೆ ಜಿಗ್ನೇಶ ಕಾರಣವಲ್ಲ ,ಮೆವಾಣಿ ಭಾಷಣ ಡಿಸೆಂಬರ್ 31 ರಂದು ಭಾಷಣ ಮಾಡಿರುವುದು ಪುಣೆಯ ಶನಿವಾರ ವಾಡೆಯಲ್ಲಿ ಹೊರತು ಭೀಮಾ-ಕೋರೆಗಾಂವ್ ನಲ್ಲಿ ಅಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಜಿಗ್ನೇಶ್ ಮೆವಾನಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಕ್ಕೆ ಶುಭಾಶಯ ಕೋರಿರುವ ಸಚಿವರು ಹೊಸ ದಲಿತ ಯುವಕರು ಉದಯಿಸುತ್ತಿರುವುದು ನಿಜಕ್ಕೂ ಸಂತಸದ ವಿಷಯ,ಆದರೆ ಅವರು ಸಮಾಜವನ್ನು ಒಗ್ಗೊಡಿಸುವ ಕೆಲಸ ಮಾಡಬೇಕೇ ಹೊರತು ಒಡೆಯುವುದಲ್ಲ ಎಂದು ಹೇಳಿದರು.