ಜಮ್ಮು-ಕಾಶ್ಮೀರ: ಎನ್ಕೌಂಟರ್ನಲ್ಲಿ ಮಡಿದ ಇಬ್ಬರು ಉಗ್ರರು, ಮುಂದುವರೆದ ಸರ್ಚ್ ಆಪರೇಷನ್

ಜಮ್ಮು ಮತ್ತು ಕಾಶ್ಮೀರದ ಹೋಂಡ್ವಾರಾ ಪ್ರದೇಶದ ಗುಲೋರಾ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಎನ್ಕೌಂಟರ್.  

Updated: Sep 11, 2018 , 08:55 AM IST
ಜಮ್ಮು-ಕಾಶ್ಮೀರ: ಎನ್ಕೌಂಟರ್ನಲ್ಲಿ ಮಡಿದ ಇಬ್ಬರು ಉಗ್ರರು, ಮುಂದುವರೆದ ಸರ್ಚ್ ಆಪರೇಷನ್
File image

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳು ಮಂಗಳವಾರ ಭಾರೀ ಯಶಸ್ಸನ್ನು ಕಂಡಿವೆ. ಕಾಶ್ಮೀರದ ಗೋಲೋರಾ ಪ್ರದೇಶದಲ್ಲಿ, ಎನ್ಕೌಂಟರ್ ನಂತರ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಕೊಂದಿದ್ದಾರೆ. ಕುಪ್ವಾರಾ ಜಿಲ್ಲೆಯಲ್ಲಿ ಬರುವ ಈ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆ,  ನಂತರ, ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಏತನ್ಮಧ್ಯೆ, ಭಯೋತ್ಪಾದಕರು ಭದ್ರತಾ ಪಡೆಯ ಮೇಲೆ ಗುಂಡುಹಾರಿಸಿದರು. ಇದರ ನಂತರ ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿದ್ದು, ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಆದಾಗ್ಯೂ, ಪ್ರದೇಶದಲ್ಲಿ ಸರ್ಚ್ ಆಪರೇಷನ್ ಮುಂದುವರೆದಿದೆ.