Karnataka NEET UG 2023 round 1 seat allotment list: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಯುಜಿ 2023 ರ ರೌಂಡ್ 1 ಸೀಟು ಹಂಚಿಕೆ ಫಲಿತಾಂಶವನ್ನು ಇಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಫಲಿತಾಂಶ ಬಿಡುಗಡೆಯಾದ ಬಳಿಕ ಕೌನ್ಸೆಲಿಂಗ್ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು kea.kar.nic.in ನಲ್ಲಿ ಅಧಿಕೃತ ವೆಬ್’ಸೈಟ್’ನಲ್ಲಿ ಪರಿಶೀಲಿಸಲು ಸಾಧ್ಯವಾಗುತ್ತದೆ. ಸಂಜೆ 6 ಗಂಟೆಯ ನಂತರ ಫಲಿತಾಂಶ ಪ್ರಕಟವಾಗಲಿದೆ ಎಂಬುದನ್ನು ಅಭ್ಯರ್ಥಿಗಳು ಗಮನಿಸತಕ್ಕದ್ದು.
ಇದನ್ನೂ ಓದಿ: ದೆಹಲಿಯಲ್ಲಿ ಅಪಾಯದ ಮಟ್ಟಕ್ಕೆ ತಲುಪಿದ ಯಮುನಾ ನೀರಿನ ಪ್ರಮಾಣ
ರೌಂಡ್ 1 ಸೀಟು ಹಂಚಿಕೆ ಪಟ್ಟಿಗೆ ಪ್ರವೇಶಿಸಿದ ವಿದ್ಯಾರ್ಥಿಗಳು 2023-24ರ ಶೈಕ್ಷಣಿಕ ವರ್ಷಕ್ಕೆ ಪದವಿಪೂರ್ವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ವಿಷಯಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಅಭ್ಯರ್ಥಿಗಳಿಗೆ ಅವರ NEET UG ಸ್ಕೋರ್, ಲಭ್ಯವಿರುವ ಸೀಟುಗಳು ಮತ್ತು ಅವರು ಮಾಡಿದ ಆಯ್ಕೆಗಳ ಸಂಖ್ಯೆಯನ್ನು ಆಧರಿಸಿ ಕಾಲೇಜುಗಳನ್ನು ನಿಯೋಜಿಸಲಾಗುತ್ತದೆ. ಎಂಬಿಬಿಎಸ್ ಪ್ರವೇಶಕ್ಕೆ ಶೇ 85ರಷ್ಟು ಸೀಟುಗಳನ್ನು ರಾಜ್ಯ ಕೋಟಾದಡಿ ನಿಗದಿಪಡಿಸಲಾಗಿದೆ.
ಕರ್ನಾಟಕದ ಒಟ್ಟು ಎಂಬಿಬಿಎಸ್ ಸೀಟುಗಳು 11,695. ಒಟ್ಟು 3,700 ಸರ್ಕಾರಿ ಎಂಬಿಬಿಎಸ್ ಸೀಟುಗಳಾಗಿವೆ. ಈ ವರ್ಷ ರಾಜ್ಯದಲ್ಲಿ 75,248 ಅಭ್ಯರ್ಥಿಗಳು ನೀಟ್ ಯುಜಿಯಲ್ಲಿ ಅರ್ಹತೆ ಪಡೆದಿದ್ದಾರೆ. ಕೆಇಎ ಈ ಹಿಂದೆ ನೀಟ್ ಯುಜಿ ನೋಂದಣಿಯ ಅವಧಿಯನ್ನು ವಿಸ್ತರಿಸಿತ್ತು.
NEET UG ರೌಂಡ್ 1 ಸೀಟ್ ಹಂಚಿಕೆ ರಿಸಲ್ಟ್ 2023 ಹೀಗೆ ಪರಿಶೀಲಿಸಿ:
- ಹಂತ 1: KEA ಯ ಅಧಿಕೃತ ವೆಬ್‌ಸೈಟ್ cetonline.karnataka.gov.in ಅಥವಾ kea.kar.nic.in ಗೆ ಭೇಟಿ ನೀಡಿ.
- ಹಂತ 2: ಮುಖಪುಟದಲ್ಲಿ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ
- ಹಂತ 3: ಲಾಗ್ ಇನ್ ರುಜುವಾತುಗಳನ್ನು ನಮೂದಿಸಿ
- ಹಂತ 4: ಸೀಟು ಹಂಚಿಕೆ ಪಟ್ಟಿಯು ಪರದೆಯ ಮೇಲೆ ಕಾಣಿಸುತ್ತದೆ
- ಹಂತ 5: ಅದನ್ನು ಸೇವ್ ಮಾಡಿಟ್ಟು ಬಳಿಕ ಡೌನ್’ಲೋಡ್ ಮಾಡಿಕೊಳ್ಳಿ
MCC ಸರ್ಕಾರಿ ಸಂಸ್ಥೆಗಳಲ್ಲಿ 15 ಪ್ರತಿಶತ AIQ ಸೀಟುಗಳಿಗೆ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು, AIIMS, JIPMER, ESIC, AFMS ಮತ್ತು BSc ನರ್ಸಿಂಗ್ ಕೋರ್ಸ್‌ಗಳಲ್ಲಿ 100% AIQ ಸೀಟುಗಳಿಗೆ NEET ಕೌನ್ಸೆಲಿಂಗ್ ಅನ್ನು ನಡೆಸುತ್ತದೆ. AIQ ಸೀಟುಗಳಿಗೆ 2 ನೇ ಸುತ್ತಿನ ಕೌನ್ಸೆಲಿಂಗ್’ಗಾಗಿ NEET UG 2023 ಸೀಟ್ ಮ್ಯಾಟ್ರಿಕ್ಸ್ ಅನ್ನು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC) ಕೆಲವು ದಿನಗಳ ಹಿಂದೆ mcc.nic.in ನಲ್ಲಿ ಪ್ರಕಟಿಸಿದೆ. ಎಂಬಿಬಿಎಸ್ ಎರಡನೇ ಸುತ್ತಿಗೆ ಸಮಿತಿಯು 500ಕ್ಕೂ ಹೆಚ್ಚು ಸೀಟುಗಳನ್ನು ಸೇರಿಸಿದೆ. NEET UG 2023 ಎರಡನೇ ಸುತ್ತಿನ ಆಯ್ಕೆ-ಭರ್ತಿ ಪ್ರಕ್ರಿಯೆಯು ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಇಂದು ಆಗಸ್ಟ್ 15 ಕೊನೆಯ ದಿನವಾಗಿದೆ.
ಇದನ್ನೂ ಓದಿ: ಚಂದ್ರನ ವೃತ್ತಾಕಾರದ ಕಕ್ಷೆ ಪ್ರವೇಶಿಸಲು ಚಂದ್ರಯಾನ 3 ಕ್ಷಣಗಣನೆ! ಇಸ್ರೋ ಸಿದ್ಧತೆ ಪೂರ್ಣ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ