ಹಿಂದೂ ಆಳ್ವಿಕೆ ಇರೋವರೆಗೆ ಕಾಶ್ಮೀರ ಶಾಂತಿಯಿಂದ ಇತ್ತು -ಸಿಎಂ ಯೋಗಿ ವಿವಾದಾತ್ಮಕ ಹೇಳಿಕೆ

ಜಮ್ಮು ಕಾಶ್ಮೀರ ಹಿಂದೂ ಆಳ್ವಿಕೆ ಇರೋವರಿಗೆ ಶಾಂತಿಯಿಂದ ಇತ್ತು ಆದರೆ ಯಾವಾಗ ಹಿಂದು ಆಳ್ವಿಕೆ ಪತನಗೊಂಡಿತೋ ಆಗ ಹಿಂದೂಗಳ ಅವನತಿಯು ಪ್ರಾರಂಭವಾಯಿತು ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Last Updated : Oct 29, 2018, 04:38 PM IST
ಹಿಂದೂ ಆಳ್ವಿಕೆ ಇರೋವರೆಗೆ ಕಾಶ್ಮೀರ ಶಾಂತಿಯಿಂದ ಇತ್ತು -ಸಿಎಂ ಯೋಗಿ ವಿವಾದಾತ್ಮಕ ಹೇಳಿಕೆ  title=
Photo:ANI

ನವದೆಹಲಿ: ಜಮ್ಮು ಕಾಶ್ಮೀರ ಹಿಂದೂ ಆಳ್ವಿಕೆ ಇರೋವರಿಗೆ ಶಾಂತಿಯಿಂದ ಇತ್ತು ಆದರೆ ಯಾವಾಗ ಹಿಂದು ಆಳ್ವಿಕೆ ಪತನಗೊಂಡಿತೋ ಆಗ ಹಿಂದೂಗಳ ಅವನತಿಯು ಪ್ರಾರಂಭವಾಯಿತು ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಿಖ್ ಸಮಾಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯೋಗಿ "ಹಿಂದೂಗಳು ಮತ್ತು ಸಿಖ್ಖರು ಕಾಶ್ಮೀರದಲ್ಲಿ ಹಿಂದೂ ಆಳ್ವಿಕೆ ಇರೋವರಿಗೆ ಸುರಕ್ಷಿತರಾಗಿದ್ದರು ಹಿಂದೂ ಆಳ್ವಿಕೆ ಹೋದ ನಂತರ ಹಿಂದೂಗಳು ಕೂಡಾ ಅವನತಿಯನ್ನು ಅನುಭವಿಸಿದರು" ಎಂದು ಯೋಗಿ ಹೇಳಿ ಈಗ ಭಾರಿ ವಿವಾದಕ್ಕೆ ಕಾರಣವಾಗಿದ್ದಾರೆ.

ಇನ್ನು ಮುಂದುವರೆದು "ಈಗ ಅಲ್ಲಿ ಪರಿಸ್ಥಿತಿ ಹೇಗಿದೆ? ಯಾರಾದರು ತಾವು ಸುರಕ್ಷಿತ ಎಂದು ಹೇಳಿಕೊಳ್ಳುತ್ತಾರೆಯೇ? ಇಲ್ಲ.ಆದ್ದರಿಂದ ನಾವು ಇತಿಹಾಸದಿಂದ ಪಾಠ ಕಲಿಯಬೇಕು" ಎಂದು ಅವರು ಹೇಳಿದರು.

ಸಿಎಂ ಯೋಗಿಯವರ ಈ ಹೇಳಿಕೆ ಈ ಹಿಂದೆ ಬಿಜೆಪಿ ನಾಯಕ ಮತ್ತು ಕೇಂದ್ರ ಮಂತ್ರಿ ಜಿತೇಂದ್ರ ಸಿಂಗ್ ಅವರ ಹೇಳಿಕೆ ನಂತರ ಬಂದಿದೆ. ಅವರು  ಹುರಿಯತ್ ಕಾನಫೆರನ್ಸ್ ಒಪ್ಪಿಗೆ ಇಲ್ಲದೆ ಯಾವುದೇ ರಾಜಕಾರಣಿಗಳು ಕೂಡ ಶೌಚಾಲಯಕ್ಕೆ ಹೋಗದಿರುವ ಸ್ಥಿತಿ ಇದೆ ಎಂದು ಹೇಳಿಕೆ ನೀಡಿದ್ದರು.

Trending News