ಭಾರತದ 'ಎಮ್ಮೆ'ಯಿಂದಲೂ ಸೋಲುಂಡ ಪಾಕಿಸ್ತಾನ!

ಪಾಕಿಸ್ತಾನವು ಭಾರತದಿಂದ ಬೇರ್ಪಟ್ಟಾಗಿನಿಂದಲೂ, ಇದು ಪ್ರತಿಯೊಂದು ಕ್ಷೇತ್ರದಲ್ಲೂ ಭಾರತಕ್ಕಿಂತ ಹಿಂದುಳಿದಿದೆ. ಹಲವು ಕ್ಷೇತ್ರಗಳಲ್ಲಿ ಭಾರತ ಪಾಕಿಸ್ತಾನವನ್ನು ಹಿಂದಿಕ್ಕಿದೆ. ಇತ್ತೀಚಿನ ಪ್ರಕರಣವೊಂದರಲ್ಲಿ ಪಾಕಿಸ್ತಾನವು ಭಾರತದ ಎಮ್ಮೆಯಿಂದ ಸೋಲು ಅನುಭವಿಸಿದೆ.

Last Updated : Dec 18, 2019, 03:46 PM IST
ಭಾರತದ 'ಎಮ್ಮೆ'ಯಿಂದಲೂ ಸೋಲುಂಡ ಪಾಕಿಸ್ತಾನ! title=

ದೆಹಲಿ: ಇಂದು ನಾವು ನಿಮಗೆ ಒಂದು ಆಸಕ್ತಿದಾಯಕ ದಾಖಲೆ ಬಗ್ಗೆ ತಿಳಿಸಲಿದ್ದೇವೆ. ಪಾಕಿಸ್ತಾನವು ಭಾರತದಿಂದ ಬೇರ್ಪಟ್ಟಾಗಿನಿಂದಲೂ, ಇದು ಪ್ರತಿಯೊಂದು ಕ್ಷೇತ್ರದಲ್ಲೂ ಭಾರತಕ್ಕಿಂತ ಹಿಂದುಳಿದಿದೆ. ಹಲವು ಕ್ಷೇತ್ರಗಳಲ್ಲಿ ಭಾರತ ಪಾಕಿಸ್ತಾನ(Pakistan)ವನ್ನು ಹಿಂದಿಕ್ಕಿದೆ. ಇತ್ತೀಚಿನ ಪ್ರಕರಣವೊಂದರಲ್ಲಿ ಪಾಕಿಸ್ತಾನವು ಭಾರತದ ಎಮ್ಮೆಯಿಂದ ಸೋಲು ಅನುಭವಿಸಿದೆ. 

ವಾಸ್ತವವಾಗಿ ಪಂಜಾಬ್‌ನಲ್ಲಿ ಆಯೋಜಿಸಿದ್ದ ಹಾಲಿನ ಸ್ಪರ್ಧೆಯಲ್ಲಿ ಹರಿಯಾಣದ ಹಿಸಾರ್ ಜಿಲ್ಲೆಯ ಲಿಟಾನಿ ಗ್ರಾಮದ ರೈತ ಸುಖ್ಬೀರ್ ಧಂಡಾ ಅವರ 'ಎಮ್ಮೆ' 33.131 ಲೀಟರ್ ಹಾಲು ನೀಡಿ ದಾಖಲೆ ನಿರ್ಮಿಸಿದೆ. ಇದಕ್ಕೂ ಮೊದಲು ಪಾಕಿಸ್ತಾನದ ಎಮ್ಮೆ 32.50 ಲೀಟರ್ ಹಾಲು ನೀಡಿ ದಾಖಲೆ ನಿರ್ಮಿಸಿತ್ತು. ಇದೀಗ ಭಾರತ(India)ದ ಎಮ್ಮೆ ಆ ದಾಖಲೆಯನ್ನು ಮುರಿದಿದ್ದು, ಪಾಕಿಸ್ತಾನದ ಎಮ್ಮೆ ಸೋಲು ಅನುಭವಿಸಿದೆ.

33.131 ಲೀಟರ್ ಹಾಲು ನೀಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ "ಎಮ್ಮೆ"
ಪಂಜಾಬ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ರೈತ ಸುಖ್‌ಬೀರ್ ಧಂಡಾ ಅವರ ಮುರ್ರಾ ಎಮ್ಮೆ 33.131 ಹಾಲು ನೀಡಿತು. ಈ ಬಗ್ಗೆ ಮಾತನಾಡಿರುವ ರೈತ ತಾವು ಮುರ್ರಾ ತಳಿಯ ಎಮ್ಮೆಗಳನ್ನು ಸಾಕುವುದಾಗಿ ತಿಳಿಸಿದ್ದಾರೆ. ಸರಸ್ವತಿ ಎಂಬ ಹೆಸರಿನ ಎಮ್ಮೆಯ ಜೊತೆಗೆ ಈ ತಿಂಗಳು ಪಂಜಾಬ್‌ನ ಲುಧಿಯಾನಾದ ಜಾಗ್ರಾವ್ ಗ್ರಾಮದಲ್ಲಿ ನಡೆದ ಡೈರಿ ಮತ್ತು ಅಗ್ರಿ ಎಕ್ಸ್‌ಪೋದಲ್ಲಿ ಭಾಗವಹಿಸಲು  ತೆರಳಿದ್ದೆ, ಅಲ್ಲಿ ಎಮ್ಮೆ 33.131 ಲೀಟರ್ ಹಾಲು ನೀಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. ಇದಕ್ಕಾಗಿ ಸ್ಪರ್ಧೆಯಲ್ಲಿ ನನಗೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ ಎಂದು ರೈತ ಧಂಡಾ ಮಾಹಿತಿ ನೀಡಿದರು. ಗಮನಾರ್ಹವಾಗಿ ಇದಕ್ಕೂ ಮೊದಲು ಪಾಕಿಸ್ತಾನದ ಎಮ್ಮೆ 32.050 ಲೀಟರ್ ಹಾಲು ನೀಡುವ ಮೂಲಕ ಈ ದಾಖಲೆ ನಿರ್ಮಿಸಿತ್ತು.

ಸುಖ್ಬೀರ್ ಧಂಡಾ ಎಂಬ ರೈತ 'ಎಮ್ಮೆ' ಪಾಲನೆ ಮಾಡುತ್ತಾರೆ:
ಸುಖ್ಬೀರ್ ಧಂಡಾ ತಮ್ಮ ಇಡೀ ದಿನವನ್ನು ಎಮ್ಮೆಗಳ ಸೇವೆಯಲ್ಲಿ ಕಳೆಯುತ್ತಾರೆ. ಅವುಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಾನೆ. ಸರಸ್ವತಿ ಎಂಬ ಎಮ್ಮೆಗೂ ಮೊದಲು ತನ್ನ ಮನೆಯಲ್ಲಿ ಗಂಗಾ ಮತ್ತು ಜಮುನಾ ಹೆಸರುಗಳ ಎಮ್ಮೆಗಳು ಇದ್ದವು. ಆ ಎಮ್ಮೆ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಗೆದ್ದಿದೆ ಎಂದು ರೈತ ಮಾಹಿತಿ ಹಂಚಿಕೊಂಡಿದ್ದಾರೆ.

ಸರಸ್ವತಿ ಎಮ್ಮೆಯ ಬೆಲೆ 51 ಲಕ್ಷ ರೂ.
ಸರಸ್ವತಿಯನ್ನು ಈಗಾಗಲೇ 51 ಲಕ್ಷ ರೂಪಾಯಿಗಳಿಗೆ ತೆಗೆದುಕೊಳ್ಳಲು ಕೇಳುತ್ತಿದ್ದಾರೆ. ಆದರೆ ಯಾರಾದರೂ ಒಂದು ಕೋಟಿ ಪಾವತಿಸಿದರೂ ಅದನ್ನು ಮಾರಾಟ ಮಾಡುವುದಿಲ್ಲ ಎಂದು ಸುಖ್ಬೀರ್ ಧಂಡಾ ಹೇಳಿದರು. ಹತ್ತಿ ಬೀಜ, ಖಲ್, ಗ್ರಾಂ ಸಿಪ್ಪೆ, ಮೆಕ್ಕೆಜೋಳ, ಸೋಯಾಬೀನ್, ಉಪ್ಪು ಮತ್ತು ಅರ್ಧ ಕಿಲೋಗ್ರಾಂ ಬೆಲ್ಲ ಮತ್ತು 300 ಗ್ರಾಂ ಸಾಸಿವೆ ಎಣ್ಣೆ ಸೇರಿದಂತೆ ಸರಸ್ವತಿಗೆ ಮೇವಿನ ಹತ್ತು ಕೆಜಿ ಆಹಾರವನ್ನು ನೀಡಲಾಗುತ್ತದೆ ಎಂದು ಅವರು ವಿವರಿಸಿದರು. ಇದಲ್ಲದೆ, ಮೂರು ಕಿಲೋಗ್ರಾಂಗಳು ತೊಗರಿ ಮತ್ತು ಸ್ವಲ್ಪ ಹಸಿರು ಮೇವನ್ನು ನೀಡಲಾಗುತ್ತದೆ. ಶಾಖ ಮತ್ತು ಶೀತದಿಂದ ಎಮ್ಮೆಯನ್ನು ರಕ್ಷಿಸಿಕೊಳ್ಳಲು ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ ಎಂದವರು ಮಾಹಿತಿ ನೀಡಿದರು.
 

Trending News