ನವದೆಹಲಿ : ಕರೋನ ವೈರಸ್‌ನೊಂದಿಗಿನ (Coronavirus) ಹೋರಾಟಕ್ಕೆ ಸದ್ಯಕ್ಕಿರುವ ಬಹು ದೊಡ್ಡ ಅಂದರೆ ವ್ಯಾಕ್ಸಿನೇಷನ್. ಇದೀಗ 18 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಉಚಿತವಾಗಿ ಕರೋನಾ ಲಸಿಕೆ (Corona Vaccine) ನೀಡುತ್ತಿದೆ. ಇದರೊಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿಯೂ (Private Hospital) ಲಸಿಕೆ ಹಾಕಲಾಗುತ್ತಿದೆ.
ಈ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಪಾವತಿಸಬೇಕಿತ್ತು 250 ರೂ :
ವ್ಯಾಕ್ಸಿನೇಷನ್‌ನ (Vaccination) ಮೊದಲ ಎರಡು ಹಂತಗಳಲ್ಲಿ ಕೇಂದ್ರ ಸರ್ಕಾರವು ಕಂಪೆನಿಗಳಿಂದ ಕರೋನಾ ಲಸಿಕೆಯನ್ನು (COVID Vaccine) ಪ್ರತಿ ಡೋಸ್‌ಗೆ 150 ರೂ. ವೆಚ್ಚದಲ್ಲಿ ಖರೀದಿಸಿ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಮೂಲಕ ಲಸಿಕಾ ಅಭಿಯಾನ ಆರಂಭಿಸಿತ್ತು. ಈ ಸಮಯದಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡುತ್ತಿದ್ದರೆ, ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್‌ಗೆ 250 ರೂ. ಪಾವತಿಸಬೇಕಾಗಿತ್ತು. ಆದರೆ ಈಗ ಲಸಿಕೆಯ ಬೆಲೆ ಗಮನಾರ್ಹವಾಗಿ ಹೆಚ್ಚಾಗಿದೆ.
ಇದನ್ನೂ ಓದಿ : ಕರೋನಾ ಸಮಯದಲ್ಲಿ ವಿದೇಶಗಳಿಂದ ಸಿಗುತ್ತಿರವ ಸಹಾಯದ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ಹೀಗಿತ್ತು..!
ಈಗ ಲಸಿಕೆಗೆ ತಗಲುವ ವೆಚ್ಚ ಎಷ್ಟು ?
ಕರೋನಾ ವೈರಸ್‌ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಕೋವಿಶೀಲ್ಡ್ (Covishield) ಲಸಿಕೆ ಪಡೆಯಲು ಬಯಸುವುದಾದರೆ, ಇದಕ್ಕಾಗಿ ನೀವು ಪ್ರತಿ ಡೋಸ್‌ಗೆ 700 ರಿಂದ 900 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಕೋವಾಕ್ಸಿನ್ (Covaxin) ಲಸಿಕೆಯ ಪ್ರತೀ ಡೋಸ್ ಗೆ 1250 ರಿಂದ 1500 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.
ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಯಾಕಿಷ್ಟು ದುಬಾರಿ ?
ಜಿಎಸ್‌ಟಿ (GST) ಮತ್ತು ಟ್ರಾನ್ಸ್ ಪೋರ್ಟೇಶನ್ ಚಾರ್ಜ್ ಸೇರಿ ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್ ಲಸಿಕೆ 660 ರಿಂದ 670 ರೂ.ಗಳಿಗೆ ಸಿಗುತ್ತದೆ. ಆದರೆ, ಈ ಲಸಿಕೆಗಳ ಪೈಕಿ ಶೇ 5ರಿಂದ 6ರಷ್ಟು ಲಸಿಕೆ ಹಾಳಾಗಿರುತ್ತದೆ. ಇವೆಲ್ಲವನ್ನೂ ಸೇರಿಸಿ ಖಾಸಗಿ ಆಸ್ಪತ್ರೆಗಳು ಪ್ರತಿ ಡೋಸ್ ಲಸಿಕೆಗೆ 710 ರಿಂದ 715 ರೂಪಾಯಿಗಳಷ್ಟು ಪಾವತಿಸಬೇಕಾಗುತ್ತದೆ. ಇದರೊಂದಿಗೆ ವಾಕ್ಸಿನ್ (Vaccine) ಹಾಕಲು ಖಾಸಗಿ ಆಸ್ಪತ್ರೆಗಲ್ಲಿ 170 ರಿಂದ 180 ರೂ ಚಾರ್ಜ್ ಮಾಡಲಾಗುತ್ತದೆ. ಇದರಲ್ಲಿ ಹ್ಯಾಂಡ್ ಸ್ಯಾನಿಟೈಸರ್, ಸಿಬ್ಬಂದಿಯ ಪಿಪಿಇ ಕಿಟ್, ಬಯೋ ಮೆಡಿಕಲ್ ವೇಸ್ಟ್ ಡಿಸ್ ಪೋಸಲ್ ನ ಖರ್ಚು ಸೇರಿರುತ್ತದೆ. ಹಾಗಾಗಿ ಎಲ್ಲಾ ಸೇರಿ ಲಸಿಕೆ ಹಾಕಿಸಿಕೊಳ್ಳುವವರು ಕೋವಿಶೀಲ್ಡ್ ಲಸಿಕೆಗೆ 900 ರೂ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ : AYUSH 64- ಇಂದಿನಿಂದ ಇಲ್ಲಿ ಕೊರೋನಾದಿಂದ ಚೇತರಿಸಿಕೊಳ್ಳಲು ಪರಿಣಾಮಕಾರಿ ಆಯುರ್ವೇದ ಔಷಧ ಉಚಿತವಾಗಿ ಲಭ್ಯ
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3 ಲಕ್ಷ 66 ಸಾವಿರ 161 ಮಂದಿ ಕರೋನಾ (COVID-19)ಸೋಂಕಿಗೆ ಒಳಗಾಗಿದ್ದಾರೆ. ಅಲ್ಲದೆ, 3754 ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ, ಭಾರತದಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ, 2 ಕೋಟಿ 26 ಲಕ್ಷ 62 ಸಾವಿರ 575 ಕ್ಕೆ ಏರಿದೆ. ಇದರಲ್ಲಿ 2 ಲಕ್ಷ 46 ಸಾವಿರ 116 ಜನರು ಪ್ರಾಣ ಕಳೆದುಕೊಂಡಿದ್ದಾರೆ. ದೇಶಾದ್ಯಂತ ಇಲ್ಲಿವರೆಗೆ ಕೋವಿಡ್ -19 ರಿಂದ 1 ಕೋಟಿ 86 ಲಕ್ಷ 71 ಸಾವಿರ 222 ಜನ ಗುಣಮುಖರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.