ನವದೆಹಲಿ: ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರವು ಕಿರುಕುಳ ನೀಡಿದ್ದರಿಂದಾಗಿ ಮಾಜಿ ವಿಧಾನಸಭಾ ಸ್ಪೀಕರ್ ಕೊಡೆಲಾ ಶಿವ ಪ್ರಸಾದ ರಾವ್ ಅವರ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರು ಆರೋಪಿಸಿದ್ದಾರೆ.
'ಇದು ದುರದೃಷ್ಟಕರ ದಿನ. ರಾಜ್ಯ ಸರ್ಕಾರದ ಕಿರುಕುಳದಿಂದಾಗಿ 'ಪಲ್ನಾಡು ಟೈಗರ್' ಎಂದು ಜನಪ್ರಿಯವಾಗಿರುವ ಒಬ್ಬ ಮಹಾನ್ ನಾಯಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದು ಟಿಡಿಪಿ ನಾಯಕ ಮತ್ತು ಮಾಜಿ ಸಚಿವ ಸೊಮಿರೆಡ್ಡಿ ಚಂದ್ರಮೋಹನ್ ರೆಡ್ಡಿ ಸೋಮವಾರ ಎಎನ್ಐಗೆ ತಿಳಿಸಿದ್ದಾರೆ.
This is not suicide a brutal murder by Chief Minister@ysjagan pic.twitter.com/xtRSDaHWOu
— Kesineni Nani (@kesineni_nani) September 16, 2019
ಪಕ್ಷದ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಯನಮಲಾ ರಾಮ ಕೃಷ್ಣುಡು ಕೂಡ ಮಾಜಿ ಸ್ಪೀಕರ್ ಅವರ ನಿಧನದ ಬಗ್ಗೆ ಆಘಾತ ವ್ಯಕ್ತಪಡಿಸಿದರು ಮತ್ತು ರಾವ್ ವೈಎಸ್ಆರ್ಸಿಪಿ ಸರ್ಕಾರದಿಂದಾಗಿ ಅವರು ಮಾನಸಿಕ ಹಿಂಸೆಯನ್ನು ಎದುರಿಸಿದ್ದಾರೆ ಎಂದು ಹೇಳಿದರು.
"ವೈಎಸ್ಆರ್ಸಿಪಿ ಸರ್ಕಾರದ ಕಿರುಕುಳ ಮತ್ತು ಮಾನಸಿಕ ಹಿಂಸೆಯಿಂದಾಗಿ ರಾವ್ ನಿಧನರಾದರು. ವೈಎಸ್ಆರ್ಸಿಪಿ ಸರ್ಕಾರವು ರಾಜಕೀಯಕ್ಕಾಗಿ ಹಲವಾರು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದೆ. ಸರ್ಕಾರವು ಅವರ ಮೇಲೆ ಒತ್ತಡ ಹೇರಿತು ಮತ್ತು ಅವರ ಕುಟುಂಬ ಸದಸ್ಯರಿಗೆ ಕಿರುಕುಳ ನೀಡಿದೆ" ಎಂದು ಕೃಷ್ಣುಡು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟಿಡಿಪಿ ಸಂಸದ ಕೆಸಿನೇನಿ ಶ್ರೀನಿವಾಸ್ ಅವರು ಟ್ವೀಟ್ ನಲ್ಲಿ 'ಇದು ಆತ್ಮಹತ್ಯೆಯಲ್ಲ ಆದರೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಕ್ರೂರ ಹತ್ಯೆಯಾಗಿದೆ' ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ರಾವ್ ಅವರ ನಿಧನದ ಬಗ್ಗೆ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.ಡಾ.ಶಿವ ಪ್ರಸಾದ ರಾವ್ ಅವರು 1983 ರಿಂದ ಸುದೀರ್ಘ ರಾಜಕೀಯ ಇನ್ನಿಂಗ್ ಹೊಂದಿದ್ದರು ಮತ್ತು ಜನಪ್ರಿಯ ವೈದ್ಯರಾಗಿದ್ದರು.