ರಾಂಚಿ: ಬಹುಕೋಟಿ ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್ಜೆಡಿ ಮುಖ್ಯಸ್ಥ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಖಿನ್ನತೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಂಚಿಯ ರಾಜೇಂದ್ರ ಇನ್ಸ್'ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಿರ್ದೇಶಕ ಆರ್.ಕೆ.ಶ್ರೀವಾಸ್ತವ ಅವರು, ಈ ಹಿಂದೆ ಏಮ್ಸ್ ಆಸ್ಪತ್ರೆ ವರದಿಯಲ್ಲಿಯೂ ಲಾಲೂ ಪ್ರಸಾದ್ ಯಾದವ್ ಖಿನ್ನತೆಯಿಂದ ಬಳಲುತ್ತಿರುವ ಬಗ್ಗೆ ಹೇಳಲಾಗಿತ್ತು. ಇದೀಗ ರಿಮ್ಸ್ ವರದಿಯಲ್ಲಿಯೂ ಈ ಅಂಶ ಬೆಳಕಿಗೆ ಬಂದಿದೆ ಎಂದಿದ್ದಾರೆ.
ಲಾಲು ಅವರ ಇಡಿಯ ಕುಟುಂಬವೇ ಒಂದೆಡೆ ಭ್ರಷ್ಟಾಚಾರದ ಕೇಸುಗಳಲ್ಲಿ ಮುಳುಗಿ ಹೋಗಿದೆಯಾದರೆ ಇನ್ನೊಂದೆಡೆ ಅವರ ಇಬ್ಬರು ಪುತ್ರರಲ್ಲಿ ರಾಜಕೀಯ ಪಾರಮ್ಯದ ಜಟಾಪಟಿ ನಡೆಯುತ್ತಿದೆ. ಯಾಗ ಕೆಲ ದಿನಗಳ ಹಿಂದಷ್ಟೇ ಅನಾರೋಗ್ಯದ ಕಾರಣದಿಂದ ಪೆರೋಲ್ ಮೇಲೆ ಆಸ್ಪತ್ರೆಗೆ ದಾಖಲಾಗಿದ್ದ ಲಾಲೂ ಪ್ರಸಾದ್ ಯಾದವ್ ಒಂದು ವಾರದ ಹಿಂದಷ್ಟೇ ಜೈಲಿಗೆ ವಾಪಸಾಗಿದ್ದರು.