ಕೋಲ್ಕತಾ : ರಾಜ್ಯದ COVID-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಮತಾ ಬ್ಯಾನರ್ಜಿ ಸರ್ಕಾರ, ನಿರ್ಬಂಧಗಳನ್ನು ಜುಲೈ 1 ರವರೆಗೆ ವಿಸ್ತರಿಸಿದೆ. ಆದರೂ ಈ ಬಾರಿ ಕೆಲವು ರಿಯಾಯಿತಿಗಳನ್ನು ನೀಡಲಾಗಿದೆ. ಹೊಸ ಮಾರ್ಗಸೂಚಿಗಳ (New guidelines) ಪ್ರಕಾರ, ಶೇಕಡಾ 25 ರಷ್ಟು ಸಾಮರ್ಥ್ಯವಿರುವ ಎಲ್ಲಾ ಸರ್ಕಾರಿ ಕಚೇರಿಗಳು ಜೂನ್ 16 ರಿಂದ ಕಾರ್ಯನಿರ್ವಹಿಸಲಿವೆ. ವಿಭಾಗ ಮುಖ್ಯಸ್ಥರು ಡ್ಯೂಟಿ ರೋಸ್ಟರ್ ಅನ್ನು ಸಿದ್ಧಪಡಿಸಬೇಕಾಗುತ್ತದೆ.
ಹೊಸ ಮಾರ್ಗಸೂಚಿಗಳು :
ಪ್ರಯಾಣಿಸಬೇಕಾದರೆ ಇ-ಪಾಸ್ ಹೊಂದಿರುವುದು ಅಗತ್ಯ. ಮಾರ್ನಿಂಗ್ ವಾಕ್ (Morning walk) ಮಾಡಲು ಬೆಳಿಗ್ಗೆ 6:00 ರಿಂದ 9:00 ರವರೆಗೆ ಮಾತ್ರ ಪಾರ್ಕ್ ಗಳು ತೆರೆಯಲಿವೆ. ಅಲ್ಲದೆ ಲಸಿಕೆ (Covid vaccine) ಹಾಕಿಕೊಂಡವರಿಗೆ ಮಾತ್ರ, ಪಾರ್ಕ್ ಒಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಎಲ್ಲಾ ಮಾರುಕಟ್ಟೆಗಳು ಬೆಳಿಗ್ಗೆ 7:00 ರಿಂದ 11:00 ರವರೆಗೆ ಮಾತ್ರ ತೆರೆದಿರುತ್ತವೆ. ಇತರ ಚಿಲ್ಲರೆ ಅಂಗಡಿಗಳು ಬೆಳಗ್ಗೆ 11: 00ರಿಂದ ಸಂಜೆ 6 00 ರ ವರೆಗೆ ತೆರೆದಿರುತ್ತದೆ.
ಇದನ್ನೂ ಓದಿ : BJP : ತೆಲಂಗಾಣ ಮಾಜಿ ಸಚಿವ ಬಿಜೆಪಿಗೆ ಸೇರ್ಪಡೆ!
ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು ತೆರೆದಿರುತ್ತವೆ :
50 ಪ್ರತಿಶತ ಸಾಮರ್ಥ್ಯದೊಂದಿಗೆ ಮಧ್ಯಾಹ್ನ 12ರಿಂದ ರಾತ್ರಿ 8ರ ನಡುವೆ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು ತೆರೆಯಲು ಅವಲಾಶ ಕಲ್ಪಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಎಲ್ಲಾ ಶಾಲೆಗಳು (School), ಕೋಚಿಂಗ್, ಅಕಾಡೆಮಿಗಳು ಮುಚ್ಚಲ್ಪಡುತ್ತವೆ. ಎಲ್ಲಾ ಅಂತರ್-ರಾಜ್ಯ ಬಸ್ಸುಗಳ ಸಂಚಾರಕ್ಕೂ ನಿಷೇಧ ಹೇರಲಾಗಿದೆ. ಖಾಸಗಿ ವಾಹನಗಳು , ಕ್ಯಾಬ್‌ಗಳು ತುರ್ತು ಅಥವಾ ಅಗತ್ಯ ಸೇವೆಗಳಿಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ವೈಯಕ್ತಿಕ ಸಂಚಾರಕ್ಕೆ ಅವಕಾಶ ನೀಡಲಾಗುವುದು. 30% ಸಾಮರ್ಥ್ಯದೊಂದಿಗೆ ಮಾಲ್‌ಗಳನ್ನು (Mall) ಬೆಳಿಗ್ಗೆ 11 ರಿಂದ ಸಂಜೆ 6 ರವರೆಗೆ ತೆರೆಯಲು ಅವಕಾಶವಿದೆ. ಪ್ರೇಕ್ಷಕರಿಲ್ಲದ ಆಟಗಾರರಿಗೆ ಕ್ರೀಡಾಂಗಣದಲ್ಲಿ ಆಡಲು ಅವಕಾಶವಿರುತ್ತದೆ. ಜಿಮ್‌ಗಳು, ಬ್ಯೂಟಿ ಪಾರ್ಲರ್‌ಗಳು, ಸಲೂನ್‌ಗಳು (Saloon) ಮತ್ತು ಸಿನೆಮಾ ಹಾಲ್‌ಗಳಿಗೆ ಅವಕಾಶವಿಲ್ಲ.
ಇದನ್ನೂ ಓದಿ : Corona 3rd Wave : ಕೊರೋನಾ 3ನೇ ಅಲೆಯಲ್ಲಿ ಮಕ್ಕಳು ಸೇಫ್..!?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.