ಮಹಾರಾಷ್ಟ್ರ ಸಿಎಂ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಕಾಪ್ಟರ್ ಓವರ್ಲೋಡ್ ನಿಂದಾಗಿ ಔರಂಗಬಾದ್ ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. 

Updated: Dec 9, 2017 , 06:27 PM IST
ಮಹಾರಾಷ್ಟ್ರ ಸಿಎಂ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ನಾಸಿಕ್ : ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮತ್ತೆ ಶನಿವಾರ ತುರ್ತು ಭೂಸ್ಪರ್ಶ ಮಾಡಿದ ಘಟನೆ ಔರಂಗಬಾದ್ ನಲ್ಲಿ ನಡೆದಿದೆ.ಹೆಲಿಕಾಪ್ಟರ್ ಅಧಿಕ ಭಾರವನ್ನು ಹೊತ್ತೊಯ್ಯುತ್ತಿದ್ದುದು ಭೂಸ್ಪರ್ಶಕ್ಕೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮಹಾರಾಷ್ಟ ಸಿಎಂ ಫಡ್ನವೀಸ್ ಅವರು ಸಚಿವ ಗಿರೀಶ್ ಮಹಾಜನ್ ಅವರೊಂದಿಗೆ ನಾಸಿಕ್ ನಿಂದ ಬೆಳಿಗ್ಗೆ 9.30ರ ಸಮಯದಲ್ಲಿ ಹೆಲಿಕಾಪ್ಟರ್ನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ ಕಾಪ್ಟರ್ ಓವರ್ಲೋಡ್ ನಿಂದಾಗಿ ಔರಂಗಬಾದ್ ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಹೆಲಿಕಾಪ್ಟರ್ ಅಗತ್ಯವಾಗಿ ಹಾರಾಬೇಕಾದ ಎತ್ತರವನ್ನು ತಲುಪಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಓರ್ವ ಪ್ರಯಾಣಿಕನನ್ನು ಕೆಳಗಿಳಿಸಿ ಸ್ವಲ್ಪ ಲಗೇಜ್ ಕಡಿಮೆ ಮಾಡಿದ ನಂತರ ಸಿಎಂ ಅದೇ ಹೆಲಿಕಾಪ್ಟರ್ ನಲ್ಲಿ ತಮ್ಮ ಪ್ರಯಾಣ ಮುಂದುವರೆಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಹಿಂದೆ ಜುಲೈ 7ರಂದು ದೇವೇಂದ್ರ ಫಡ್ನವಿಸ್ ಅವರ ಹೆಲಿಕಾಪ್ಟರ್ ಲಾತೂರ್​ ಬಳಿ ತುರ್ತು ಭೂಸ್ಪರ್ಶ ಮಾಡಿತ್ತು. ಅದೃಷ್ಟ ವಶಾತ್ ಹೆಲಿಕಾಪ್ಟರ್​ನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದರು. ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಫಡ್ನವಿಸ್​ಲಾತೂರ್​ಗೆ ತೆರಳುತ್ತಿದ್ದರು. ಕಾರ್ಯಕ್ರಮ ಮುಗಿದ ನಂತರ ಲಾತೂರ್​ನ ನಿಲಂಗಾ ಹೆಲಿಪ್ಯಾಡ್​ನಿಂದ ಹೆಲಿಕಾಪ್ಟರ್​ನಲ್ಲಿ ತೆರಳುವಾಗ ಈ ಅವಘಡ ಸಂಭವಿದ್ದನ್ನು ಇಲ್ಲಿ ಸ್ಮರಿಸಬಹುದು.