ಮಂಗಳೂರು: ಶಾಂತಿ, ಅಹಿಂಸೆ ಮತ್ತು ಕೋಮು ಸೌಹಾರ್ದತೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಮಂಗಳೂರಿನ ಗರೋಡಿ ಪ್ರದೇಶದ ದೇವಾಲಯವೊಂದರಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಚಹಾ, ಕಾಫಿ ಮತ್ತು ಬಾಳೆಹಣ್ಣುಗಳ ಜೊತೆಗೆ ಪ್ರಾರ್ಥನೆಗಳನ್ನು ಗಾಂಧಿಯ ವಿಗ್ರಹಕ್ಕೆ ದೇವಾಲಯದ ಅರ್ಚಕರು ಶ್ರೀ ಬ್ರಹ್ಮ ಬೈದರ್ಕಲಾ ಕ್ಷೇತ್ರದಲ್ಲಿ ದಿನಕ್ಕೆ ಮೂರು ಬಾರಿ ಸಲ್ಲಿಸುತ್ತಾರೆ.ಇತರ ದೇವತೆಗಳಂತೆ ಇಲ್ಲಿ ಬಾಪು ಅವರಿಗೆ ಪ್ರತ್ಯೇಕ ದೇವಾಲಯವಿದೆ.
1948 ರಲ್ಲಿ ಗಾಂಧಿಜೀಯವರಿಗಾಗಿ ಪ್ರತ್ಯೇಕ ದೇವಾಲಯವನ್ನು ನಿರ್ಮಿಸಲಾಯಿತು ಮತ್ತು 2006 ರಲ್ಲಿ ಅವರ ಪ್ರತಿಮೆಯನ್ನು ಮರುಸೃಷ್ಟಿಸಲಾಯಿತು. ಯುವಕರು ಅವರಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಅಲ್ಲಿನ ಭಕ್ತರಾದ ಪ್ರಕಾಶ್ ಗರೋಡಿ ಹೇಳಿದರು. ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ದೇವಾಲಯವನ್ನು ಹದಿನೈದು ದಿನಗಳ ಕಾಲ ಭಕ್ತರು ಸ್ವಚ್ಚಗೊಳಿಸುತ್ತಾರೆ.
"ಮಹತ್ಮಾ ಗಾಂಧಿ ಯಾವಾಗಲೂ ಸ್ವಚ್ಚತೆ ಮತ್ತು ನೈರ್ಮಲ್ಯವನ್ನು ಅವರ ಜೀವನ ವಿಧಾನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿದ್ದರು" ಎಂದು ಪ್ರಕಾಶ್ ಹೇಳಿದರು.