ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಮಂಡಿಸಿದ ಕೇಂದ್ರ ಬಜೆಟ್ 2019ನ್ನು 'ಸಂಪೂರ್ಣ ದೃಷ್ಟಿಹೀನ ಬಜೆಟ್' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
"ಬಜೆಟ್ 2019 ಸಂಪೂರ್ಣ ದೃಷ್ಟಿಹೀನವಾಗಿದೆ. ಬಜೆಟ್'ನ ಸಂಪೂರ್ಣ ದೃಷ್ಟಿ ಹಳಿ ತಪ್ಪಿದೆ. ಅದರ ಮೇಲೆ, ಅವರು ಸೆಸ್ ವಿಧಿಸಿರುವುದಷ್ಟೇ ಅಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನೂ ವಿಧಿಸುವ ಮೂಲಕ ಪೆಟ್ರೋಲ್ ಬೆಲೆ ಪ್ರತಿ ಲೀಟರ್'ಗೆ ಸುಮಾರು 2.50 ರೂ. ಮತ್ತು ಡೀಸೆಲ್‌ಗೆ ಪ್ರತಿ ಲೀಟರ್‌ಗೆ 2.30 ರೂ. ಹೆಚ್ಚಾಗಿದೆ" ಎಂದು ಮಮತಾ ಬ್ಯಾನರ್ಜಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಪೆಟ್ರೋಲ್-ಡೀಸೆಲ್ ದರ ಹೆಚ್ಚಳವನ್ನು 'ಚುನಾವಣಾ ಪ್ರಶಸ್ತಿ(Election Prize)' ಎಂದು ಹೇಳಿರುವ ಮಮತಾ, "ಇದರಿಂದಾಗಿ ಸಾರಿಗೆ-ಮಾರುಕಟ್ಟೆ-ಅಡಿಗೆಮನೆವರೆಗೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಲಿದೆ. ಹೀಗಾಗಿ ಜನಸಾಮಾನ್ಯರಿಗೆ ತೊಂದರೆಯಾಗಲಿದೆ... ಇದು ಚುನಾವಣಾ ಪ್ರಶಸ್ತಿ!!" ಎಂದು ಟ್ವೀಟ್ ಮಾಡಿದ್ದಾರೆ.
As a result, price hikes will hit from transport to market to kitchens.
Commoners are suffering and suffering...This is Election Prize!! 2/2#Budget2019
— Mamata Banerjee (@MamataOfficial) July 5, 2019
ಇಂದು ಕೇಂದ್ರ ಬಜೆಟ್ ಮಂಡನೆ ವೇಳೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಒಂದು ರೂಪಾಯಿ ಹೆಚ್ಚುವರಿ ಅಬಕಾರಿ ಸುಂಕ ಮತ್ತು ರಸ್ತೆ ಮತ್ತು ಮೂಲಸೌಕರ್ಯ ಸೆಸ್ ವಿಧಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.