ಪ.ಬಂಗಾಳ ಮುಖ್ಯಮಂತ್ರಿಯಾಗಿ ಮೇ. 5 ಕ್ಕೆ ಮಮತಾ ಪ್ರಮಾಣ.!

ಮೇ 5 ರಂದು ಕೇವಲ ಮಮತಾ ಬ್ಯಾನರ್ಜಿ ಮಾತ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮರುದಿನ  ಅಂದರೆ ಮೇ 6 ರಂದು ಸಂಪುಟದ ಉಳಿದ ಸಚಿವರು ಅಧಿಕಾರದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Written by - Ranjitha R K | Last Updated : May 3, 2021, 06:54 PM IST
  • ಮೇ 5, ಬುಧವಾರದಂದು ಮುಖ್ಯಮಂತ್ರಿಯಾಗಿ ಮಮತಾ ಪ್ರಮಾಣ
  • ಗುರುವಾರದಂದು ಇತರ ಸಚಿವರಿಂದ ಪ್ರಮಾಣ ವಚನ ಸ್ವೀಕಾರ
  • ಅತ್ಯಂತ ಸರಳವಾಗಿ ನೆರವೇರಲಿದೆ ಪ್ರಮಾಣವಚನ ಸಮಾರಂಭ
ಪ.ಬಂಗಾಳ ಮುಖ್ಯಮಂತ್ರಿಯಾಗಿ ಮೇ. 5 ಕ್ಕೆ ಮಮತಾ ಪ್ರಮಾಣ.! title=
ಮೇ 5, ಬುಧವಾರದಂದು ಮುಖ್ಯಮಂತ್ರಿಯಾಗಿ ಮಮತಾ ಪ್ರಮಾಣ (file photo)

ಕೊಲ್ಕತ್ತಾ : ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 210 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಗಳಿಸಿರುವ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮೇ. 5, ಬುಧವಾರದಂದು ಪಶ್ಷಿಮ ಬಂಗಾಲದ ಮುಖ್ಯಮಂತ್ರಿಯಾಗಿ (West Bengal CM) ಮೂರನೇ ಅವಧಿಗೆ ಅಧಿಕಾರ ಸ್ವೀಕರಿಸಲಿದ್ದಾರೆ.  ಸೋಮವಾರ ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು. ಈ ಸಭೆಯಲ್ಲಿ ಮಮತಾ ಬ್ಯಾನರ್ಜಿ (Mamta Banerjee) ಅವರನ್ನು ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಲಾಯಿತು. 

ಮೇ 6 ರಂದು ಸಚಿವರ ಪ್ರಮಾಣ ವಚನ :
ಮೇ 5 ರಂದು ಕೇವಲ ಮಮತಾ ಬ್ಯಾನರ್ಜಿ (Mamta Banerjee) ಮಾತ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮರುದಿನ  ಅಂದರೆ ಮೇ 6 ರಂದು ಸಂಪುಟದ ಉಳಿದ ಸಚಿವರು ಅಧಿಕಾರದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ತೀರಾ ಸರಳವಾಗಿ ನಡೆಯಲಿದೆ. ಯಾವುದೇ ಮೆರವಣಿಗೆ ಸಂಭ್ರಮಾಚರಣೆಗಳಿಗೆ ಅನುಮತಿ ನೀಡಿಲ್ಲ.  ಶೀಘ್ರವೇ ಮಮತಾ ಬ್ಯಾನರ್ಜಿ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ತಮ್ಮ ಹಕ್ಕು ಮಂಡಿಸಲಿದ್ದಾರೆ.

ಇದನ್ನೂ ಓದಿ : NEET-PG ಪರೀಕ್ಷೆ ಮುಂದೂಡಿ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ!

ನಂದಿಗ್ರಾಮದಲ್ಲಿ ಸೋತಿರುವ ಮಮತಾ :
ಟಿಎಂಸಿ (TMC) ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದೆಯಾದರೂ, ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನಂದಿ ಗ್ರಾಮದಲ್ಲಿ ಸೋತಿದ್ದಾರೆ. ಅವರಿನ್ನೂ ಪಶ್ಚಿಮ ಬಂಗಾಳದ ವಿಧಾನಸಭೆಯ (West Bengal Assembly) ಸದಸ್ಯೆ ಅಲ್ಲ. ಅದರೂ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದಾಗಿದೆ. ಆದರೆ, ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ 6 ತಿಂಗಳ ಒಳಗೆ ಅವರು ಪಶ್ಚಿಮ ಬಂಗಾಳದ ಶಾಸಕರಾಗಿ ಆಯ್ಕೆಯಾಗಬೇಕಾಗುತ್ತದೆ. 

ನಂದಿಗ್ರಾಮದ ಸೋಲನ್ನು ಪ್ರಶ್ನಿಸಿರುವ ಮಮತಾ :
ನಂದಿಗ್ರಾಮದ (Nandigrama) ಸೋಲನ್ನು ತೃಣಮೂಲ ಕಾಂಗ್ರೆಸ್ ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ.  ಈ ಫಲಿತಾಂಶವನ್ನು ಸುಪ್ರೀಂ ಕೋರ್ಟಿನಲ್ಲಿ (Supreme court) ಪ್ರಶ್ನಿಸಲು ಟಿಎಂಸಿ ನಿರ್ಧರಿಸಿದೆ. ಈ ನಡುವೆ, ನಂದಿ ಗ್ರಾಮದ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ, ಬಂಗಾಲದ ದೊಡ್ಡ ಗೆಲುವಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : Pinarayi Vijayan : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೇರಳ ಸಿಎಂ ಪಿಣರಾಯಿ ವಿಜಯನ್! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News