ನಟಿ ಅನುಷ್ಕಾ ಶರ್ಮಾಳ ಕಸದ 'ನೀತಿ ಪಾಠ'ಕ್ಕೆ ಆ ವ್ಯಕ್ತಿ ಕೊಟ್ಟ ಉತ್ತರವೇನು ಗೊತ್ತಾ?

   

Last Updated : Jun 17, 2018, 06:36 PM IST
 ನಟಿ ಅನುಷ್ಕಾ ಶರ್ಮಾಳ ಕಸದ 'ನೀತಿ ಪಾಠ'ಕ್ಕೆ ಆ ವ್ಯಕ್ತಿ ಕೊಟ್ಟ ಉತ್ತರವೇನು ಗೊತ್ತಾ? title=
Photo courtesy: twitter

ನವದೆಹಲಿ: ಇತ್ತೀಚಿಗೆ ಕಾರಿನಿಂದ ಕಸ ಚೆಲ್ಲುತ್ತಿದ್ದ ವ್ಯಕ್ತಿಯೊಬ್ಬನಿಗೆ ನಟಿ ಅನುಷ್ಕಾ ಶರ್ಮಾ ಕಸದ ನೀತಿ ಪಾಠ ಹೇಳಿದ್ದ ವೀಡಿಯೋವೊಂದನ್ನು ವಿರಾಟ್ ಕೊಹ್ಲಿ ಅವರು ಟ್ವಿಟ್ಟರ್ ಮೂಲಕ ಶೇರ್ ಮಾಡಿಕೊಂಡು ಪತ್ನಿ  ಅನುಷ್ಕಾ  ಸ್ವಚ್ಚತೆಯ ಕುರಿತಾಗಿ ಬೋಧಿಸಿದ್ದರ ಬಗ್ಗೆ ಅವರು ಬರೆದುಕೊಂಡಿದ್ದರು.ಇದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಕೂಡ  ಆಗಿತ್ತು. 

ಆದರೆ ಈಗ ಕಸ ಚಲ್ಲುತ್ತಿದ್ದ ಆರ್ಹಾನ್ ಸಿಂಗ್ ಎನ್ನುವ ವ್ಯಕ್ತಿಯೇ ಸ್ವತಃ ಅಲ್ಲಿ ನಡೆದದ್ದೇನು ಎನ್ನುವದರ ಕುರಿತಾಗಿ ದೀರ್ಘ ಪೋಸ್ಟ್ ವೊಂದನ್ನು ತನ್ನ ಫೇಸ್ ಬುಕ್ ಅಲ್ಲಿ ಬರೆದುಕೊಂಡಿದ್ದಾನೆ.  ಈ ಪೋಸ್ಟ್ ನಿಂದ ನನ್ನ ಮೈಲೇಜ್ ಹೆಚ್ಚಳ ಮಾಡಿಕೊಳ್ಳುವ ಯಾವುದೇ ಉದ್ದೇಶವಿಲ್ಲ ಎಂದು ಬರೆದುಕೊಳ್ಳುತ್ತಲೇ ರಸ್ತೆಯಲ್ಲಿ ಕಸ ಚೆಲ್ಲಿದ್ದಕ್ಕೆ ಕ್ಷಮೆ ಕೇಳಿದ್ದರೂ ಸಹ ಅದನ್ನು ರಿಕಾರ್ಡ್ ಮಾಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕ್ತಾ ಶರ್ಮ ಸೋಶಿಯಲ್ ಮಿಡಿಯಾದಲ್ಲಿ ಹಾಕಿದ್ದಕ್ಕೆ ಅವನು ತೀವ್ರ ಆಕ್ರೋಶವ್ಯಕ್ತಪಡಿಸಿದ್ದಾನೆ.

ಅಲ್ಲದೆ ಆ ಕಸವು ಅಚಾನಕ್ಕಾಗಿ ಹೊರಹೋಗಿದ್ದು ಆದರೆ ಇದಕ್ಕೆ ಕ್ಷಮೆ ಕೇಳಿದ್ದರೂ ಕೂಡ ಅನುಷ್ಕಾ ಶರ್ಮಾ ಮಾತನಾಡಿದ ರೀತಿಯು ಕಸಕ್ಕಿಂತ ಕಡೆ ಎಂದು ಅವರು ಬರೆದುಕೊಂಡಿದ್ದಾನೆ. 

 

Trending News