ಕೆನಡಾದ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ: ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್

Canada Visa: ತಾತ್ಕಾಲಿಕ ವೀಸಾ ಹೊಂದಿರುವವರಿಗೆ ಪೊಲೀಸ್ ಕ್ಲಿಯರೆನ್ಸ್ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು ಕೆಣದಾದಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. 

Written by - Yashaswini V | Last Updated : May 29, 2024, 02:09 PM IST
  • ಕಳೆದ ವರ್ಷ ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾಯಿತು
  • ಬಂಧಿತರಲ್ಲಿ ಇಬ್ಬರು, ಕರಣ್ ಬ್ರಾರ್ (22) ಮತ್ತು ಕಮಲ್‌ಪ್ರೀತ್ ಸಿಂಗ್ (22) ವಿದ್ಯಾರ್ಥಿ ವೀಸಾದಲ್ಲಿ ದೇಶದಲ್ಲಿದ್ದರು.
ಕೆನಡಾದ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ:  ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್  title=

Big Relief For Indians: ಅಧ್ಯಯನ ವೀಸಾ ಸೇರಿದಂತೆ ತಾತ್ಕಾಲಿಕ ನಿವಾಸಿಗಳಾಗಿ ದೇಶಕ್ಕೆ ಪ್ರವೇಶಿಸುವವರಿಗೆ ಪೊಲೀಸ್ ಕ್ಲಿಯರೆನ್ಸ್  ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಕೆನಡಾ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.  ಈ ನಿರ್ಧಾರವು ಕೆನಡಾಕ್ಕೆ ಪ್ರವೇಶಿಸಲು ಬಯಸುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ತಾತ್ಕಾಲಿಕ ಕೆಲಸಗಾರರಿಗೆ ಪ್ರಯೋಜನವನ್ನು ನೀಡಲಿದೆ ಎಂದು ಭಾವಿಸಲಾಗಿದೆ. 

ಇಂಡೋ-ಕೆನಡಾದ ಸಂಸದ ಅರ್ಪಣ್ ಖನ್ನಾ ಅವರಿಗೆ ಪ್ರತಿಕ್ರಿಯಿಸಿದ ಕೆನಡಾದ ವಲಸೆ, ನಿರಾಶ್ರಿತರ ಮತ್ತು ಪೌರತ್ವ ಸಚಿವ ಮಾರ್ಕ್ ಮಿಲ್ಲರ್ (Mark Miller), ಮೊದಲು ಭದ್ರತಾ ತಪಾಸಣೆಗಾಗಿ ಪೊಲೀಸ್ ಕ್ಲಿಯರೆನ್ಸ್  ಸರ್ಟಿಫಿಕೇಟ್,  ಬೆರಳಚ್ಚುಗಳಂತಹ ಬಯೋಮೆಟ್ರಿಕ್ ಪರಿಶೀಲನೆಯನ್ನು  ಬಳಸಲಾಗುತ್ತಿತ್ತು. ಈಗ ಅದರ ಅಗತ್ಯವಿಲ್ಲ, ಬದಲಿಗೆ ಅಗತ್ಯವೆಂದು ಭಾವಿಸಿದರೆ ಅಂತಹ ಪ್ರಮಾಣಪತ್ರಗಳನ್ನು ಹೆಚ್ಚುವರಿ ಭದ್ರತಾ ಸ್ಕ್ರೀನಿಂಗ್‌ನ ಭಾಗವಾಗಿ ಮಾತ್ರ ವಿನಂತಿಸಬಹುದು ಎಂದು ಒತ್ತಿ ಹೇಳಿದರು. 

ಇದನ್ನೂ ಓದಿ- 16 ವರ್ಷ ಬಾಲಕಿ ಕಾಮ್ಯಾ ಮೌಂಟ್‌ ಎವರೆಸ್ಟ್‌ ಶಿಖರ ಏರಿ ಸಾಧನೆ, ಅತಿ ಕಿರಿಯ ಭಾರತೀಯ ಎಂಬ ದಾಖಲೆ

ಪೊಲೀಸ್ ಕ್ಲಿಯರೆನ್ಸ್  ಸರ್ಟಿಫಿಕೇಟ್ (Police Clearance Certificate) ವಿಶ್ವಾಶಾರ್ಹತೆಯನ್ನು ತಳ್ಳಿಹಾಕಿದ ಮಿಲ್ಲರ್,  ಕ್ರಿಮಿನಲ್ ದಾಖಲೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ದೇಶಕ್ಕೆ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿ ವೀಸಾ ಅರ್ಜಿದಾರರಿಗೆ ಸರ್ಕಾರದ ಕಠಿಣ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಹೈಲೈಟ್ ಮಾಡಿದರು.

ವಾಸ್ತವವಾಗಿ, ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ (Hardeep Singh Nijjar)ಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಬಂಧನದ ನಂತರ ತಾತ್ಕಾಲಿಕ ನಿವಾಸಿಗಳು, ವಿಶೇಷವಾಗಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಭದ್ರತಾ ತಪಾಸಣೆಯ (Security Check of International Students) ಪರಿಶೀಲನೆಯ ಮಧ್ಯೆ ಈ ಸ್ಪಷ್ಟನೆ ಬಂದಿರುವುದು ಗಮನಾರ್ಹ ವಿಷಯವಾಗಿದೆ. 

ಇದನ್ನೂ ಓದಿ- ಜುಲೈ 4 ರಂದು ಬ್ರಿಟನ್ ಸಾರ್ವತ್ರಿಕ ಚುನಾವಣೆ: ಪ್ರಧಾನಿ ರಿಷಿ ಸುನಕ್ 

ಬಂಧಿತ ಆರೋಪಿಗಳು  ವಿದ್ಯಾರ್ಥಿ ವೀಸಾದಲ್ಲಿ (Student Visa) ದೇಶ ಪ್ರವೇಶಿಸಿರುವ ಬಗ್ಗೆ ತಾತ್ಕಾಲಿಕ ನಿವಾಸಿಗಳಿಗೆ ಸ್ಕ್ರೀನಿಂಗ್ ಪ್ರಕ್ರಿಯೆಯ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಬಂಧಿತರಲ್ಲಿ ಇಬ್ಬರು, ಕರಣ್ ಬ್ರಾರ್ (22) ಮತ್ತು ಕಮಲ್‌ಪ್ರೀತ್ ಸಿಂಗ್ (22) ವಿದ್ಯಾರ್ಥಿ ವೀಸಾದಲ್ಲಿ ದೇಶವನ್ನು ಪ್ರವೇಶಿಸಿದ್ದರು. ಮತ್ತೊಬ್ಬ ಬಂಧಿತ ಆರೋಪಿ ಅಮನ್‌ದೀಪ್ ಸಿಂಗ್ ಕೂಡ ದೇಶದಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News