LPG Cylinder: ನಾಲ್ಕು ದಿನದಲ್ಲಿ ಎರಡನೇ ಬಾರಿಗೆ ಮತ್ತೆ 'LPG ಗ್ಯಾಸ್' ಬೆಲೆ ಏರಿಕೆ..!

ಇಂದಿನಿಂದ ಸಿಲಿಂಡರ್ ಗ್ಯಾಸ್ ಖರೀದಿಸುವವರ 797 ರೂಪಾಯಿ ಬದಲು, ಇದೀಗ 822 ರೂಪಾಯಿ ನೀಡಬೇಕಿದೆ.

Last Updated : Mar 1, 2021, 04:08 PM IST
  • ಮತ್ತೆ ಎಲ್‌ಪಿಜಿ ಬೆಲೆ ಏರಿಕೆಯಾಗಿದೆ. ಹೌದು, ಇದೀಗ 25 ರೂಪಾಯಿ ಮತ್ತೆ ಹೆಚ್ಚಾಗಿದೆ. ಮಾರ್ಚ್ 1 ರಿಂದ ಪರಿಷ್ಕೃತ ದರ ಜಾರಿಯಾಗಿದೆ.
  • ಇಂದಿನಿಂದ ಸಿಲಿಂಡರ್ ಗ್ಯಾಸ್ ಖರೀದಿಸುವವರ 797 ರೂಪಾಯಿ ಬದಲು, ಇದೀಗ 822 ರೂಪಾಯಿ ನೀಡಬೇಕಿದೆ.
  • ಫೆಬ್ರವರಿ 25 ರಂದು ಸಿಲಿಂಡರ್ ಬಲೆ 25 ರೂಪಾಯಿ ಏರಿಕೆಯಾಗಿದೆ. ಮಾರ್ಚ್ ಮೊದಲ ದಿನವೇ ಏರಿಕೆಯಾಗಿದ್ದು
LPG Cylinder: ನಾಲ್ಕು ದಿನದಲ್ಲಿ ಎರಡನೇ ಬಾರಿಗೆ ಮತ್ತೆ 'LPG ಗ್ಯಾಸ್' ಬೆಲೆ ಏರಿಕೆ..! title=

ನವದೆಹಲಿ: ಮತ್ತೆ ಎಲ್‌ಪಿಜಿ ಬೆಲೆ ಏರಿಕೆಯಾಗಿದೆ. ಹೌದು, ಇದೀಗ 25 ರೂಪಾಯಿ ಮತ್ತೆ ಹೆಚ್ಚಾಗಿದೆ. ಮಾರ್ಚ್ 1 ರಿಂದ ಪರಿಷ್ಕೃತ ದರ ಜಾರಿಯಾಗಿದೆ. ಹೀಗಾಗಿ ಇಂದಿನಿಂದ ಸಿಲಿಂಡರ್ ಗ್ಯಾಸ್ ಖರೀದಿಸುವವರ 797 ರೂಪಾಯಿ ಬದಲು, ಇದೀಗ 822 ರೂಪಾಯಿ ನೀಡಬೇಕಿದೆ.

ಫೆಬ್ರವರಿ 25 ರಂದು ಸಿಲಿಂಡರ್ ಬೆಲೆ(Cylinder Price) 25 ರೂಪಾಯಿ ಏರಿಕೆಯಾಗಿದೆ. ಮಾರ್ಚ್ ಮೊದಲ ದಿನವೇ ಏರಿಕೆಯಾಗಿದ್ದು, ಈ ತಿಂಗಳಲ್ಲಿ ಇನ್ನೆಷ್ಟು ದಿನ ಏರಿಕೆಯಾಗಲಿದೆ. ಈ ತಿಂಗಳಲ್ಲೇ 1000 ರೂಪಾಯಿ ಆಗಲಿದೆ ಅನ್ನೋ ಆತಂಕ ಜನರಲ್ಲಿ ಮಡುಗಿದೆ. ಫೆಬ್ರವರಿ ತಿಂಗಳಲ್ಲಿ 3 ಬಾರಿ ಗ್ಯಾಸ್ ಬೆಲೆ ಏರಿಕೆಯಾಗಿತ್ತು. ಫೆಬ್ರವರಿ 4, 14 ಹಾಗೂ 25ಕ್ಕೆ ಏರಿಕೆಯಾಗಿತ್ತು. ಈ ಮೂಲಕ ಫೆಬ್ರವರಿಯಲ್ಲಿ 100 ರೂಪಾಯಿ ಹೆಚ್ಚಳವಾಗಿದೆ.

Mallikarjun Kharge: 'ನನಗೆ 70ಕ್ಕಿಂತ ಹೆಚ್ಚು ವಯಸ್ಸು, 10-15 ವರ್ಷ ಬಾಕಿ ಉಳಿದಿದೆ, ಯುವಕರಿಗೆ ವ್ಯಾಕ್ಸಿನ್ ಹಾಕಿ'

ಡಿಸೆಂಬರ್ ತಿಂಗಳಲ್ಲಿ 594 ರೂಪಾಯಿ ಇದ್ದ ಬೆಲೆ 644 ರೂಪಾಯಿ(Rupees)ಗೆ ಏರಿಕೆಯಾಗಿತ್ತು. ಇನ್ನು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 96 ರೂಪಾಯಿ ಏರಿಕೆಯಾಗಿದೆ. ಇದೀಗ ಕಮರ್ಷಿಯಲ್ ಸಿಲಿಂಡರ್ ದರ 1,666 ರೂಪಾಯಿ ಆಗಿದೆ. ಇನ್ನು ಪೆಟ್ರೋಲ್ ಡಿಸೆಲ್ ಬೆಲೆ ಕಳೆದ 2 ದಿನದಿಂದ ಸ್ಥಿರವಾಗಿದೆ.

Corona Latest Guidelines: ಇಂದಿನಿಂದ ಮಾರ್ಚ್ 31ರವರೆಗೆ ಹೊಸ ಕರೋನಾ ಮಾರ್ಗಸೂಚಿ ಅನ್ವಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News